(ನ್ಯೂಸ್ ಕಡಬ) newskadaba.com ಮಂಗಳೂರು ಏ.19. ಪ್ರಸಕ್ತ ಶೈಕ್ಷಣಿಕ ವರ್ಷದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯು ಬುಧವಾರ ಆರಂಭಗೊಂಡಿತು.

ಬುಧವಾರ ಬೆಳಿಗ್ಗೆ ನಡೆದ ಜೀವಶಾಸ್ತ್ರ ವಿಷಯ ಪರೀಕ್ಷೆಗೆ 9751 ವಿದ್ಯಾರ್ಥಿಗಳು ಹಾಜರಾಗಿದ್ದು, 4668 ಮಂದಿ ಗೈರು ಹಾಜರಾಗಿದ್ದಾರೆ. ಮಧ್ಯಾಹ್ನ ನಡೆದ ಗಣಿತ ಪರೀಕ್ಷೆಗೆ 13984 ಮಂದಿ ಹಾಜರಾಗಿದ್ದು, 435 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ. ಇಂದು ಬೆಳಗ್ಗೆ ಭೌತಶಾಸ್ತ್ರ ವಿಷಯದ ಪರೀಕ್ಷೆ ಹಾಗು ಮಧ್ಯಾಹ್ನ ರಸಾಯನ ಶಾಸ್ತ್ರ ವಿಷಯದ ಪರೀಕ್ಷೆಯು ನಡೆಯಲಿದೆ. ನಾಳೆ ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ಮಾತ್ರ ಕನ್ನಡ ಭಾಷಾ ಪರೀಕ್ಷೆಯು ನಡೆಯಲಿದೆ.
