ಧರ್ಮದ ಹೆಸರಿನಲ್ಲಿ ನಡೆಯುವ ಕೊಲೆಗಳು ► ಸಾಮರಸ್ಯದ ಬೆಳಕು ಚೆಲ್ಲಿದ ‘ಕೆಂಪುಕಾಡು’ ಬೀದಿನಾಟಕ

(ನ್ಯೂಸ್ ಕಡಬ) newskadaba.com ಸವಣೂರು, ಎ.18. ಸಮಾಜದಲ್ಲಿ ಸಾಮರಸ್ಯ ಮೂಡಲು ಮೊದಲು ನಾವು ಮಾನವರಾಗೋಣ ಎಂದು ಪ್ರಧಾನ ಹಿರಿಯ ನ್ಯಾಯಾದೀಶ ಬಸವರಾಜ್ ನುಡಿದರು. ಸವಣೂರು ಶ್ರವಣರಂಗ ಪ್ರತಿಷ್ಠಾನದ ಶಿಕ್ಷಕರ ಬಳಗ ಪುತ್ತೂರು ಜಾತ್ರಾ ಗದ್ದೆಯಲ್ಲಿ ಪುತ್ತೂರು ವಕೀಲರ ಸಂಘದ ವತಿಯಿಂದ ಪ್ರಸ್ತುತ ಪಡಿಸಿದ ಕೆಂಪುಕಾಡು ಎಂಬ ಬೀದಿನಾಟಕವನ್ನು ಚೆಂಡೆ ಬಾರಿಸಿ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಸಿವಿಲ್ ನ್ಯಾಯಾದೀಶ ಪ್ರಕಾಶ್ ಪಿ. ಎಂ. ಹಿರಿಯರಾದ ಡೆನ್ನಿಸ್ಸ ಮಸ್ಸರೇನಸ್ ಸೇಡಿಯಾಪು, ವಕೀಲರ ಸಂಘದ ಆದ್ಯಕ್ಷ ಭಾಸ್ಕರ ಕೋಡಿಂಬಾಳ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ರೈ ಕೋಶಾಕಾರಿ ಕುಮಾರನಾಥ, ಉಪಾಧ್ಯಕ್ಷರಾದ ಎನ್, ಮಹಾಬಲ ಗೌಡ, ಜತೆ ಕಾರ್ಯದರ್ಶಿ ದಿನೇಶ್ ಬೊಳ್ವಾರು, ವಕೀಲರಾದ ಮಹೇಶ್ ಸವಣೂರು ಶ್ರವಣರಂಗದ ಸಂಚಾಲಕ ತಾರಾನಾಥ ಸವಣೂರು ಮತ್ತು ಶಿಕ್ಷಕ ಕಲಾವಿದರು ಉಪಸ್ಥಿತರಿದ್ದರು.

ಸಾಮರಸ್ಯದ ಬೆಳಕು ಚೆಲ್ಲಿದ ‘ಕೆಂಪುಕಾಡು’ ಬೀದಿನಾಟಕ
ಕೆಂಪುಕಾಡು ನಾಟಕ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದುದಲ್ಲದೆ, ಸಾಮಾಜಿಕ ಸಾಮರಸ್ಯ ಕಾಪಾಡಲು ನಮ್ಮ ಜವಾಬ್ದಾರಿಯನ್ನು ಎತ್ತಿ ಹಿಡಿಯುವಂತೆ ಮಾಡಿತು. ಮಾಡದ ತಪ್ಪಿಗೆ ಜಾತಿ ಧರ್ಮದ ಹೆಸರಿನಲ್ಲಿ ಆಗುತ್ತಿರುವ ಅಮಾಯಕರ ಕೊಲೆ, ಜಾತಿ ಸಂಘರ್ಷ, ನಮ್ಮ ಮನೆಯ ಕುಟುಂಬದ ಸದಸ್ಯರಿಗೆ ಯಾರಿಗಾದರೂ ಇಂತಹ ಸ್ಥಿತಿ ಬಂದರೆ! ಅಬ್ಬಾ ಈ ಸಮಾಜಕ್ಕೆ ಹೃದಯ ಎಂಬುದಿಲ್ಲಾ ಗೆಳೆಯ, ಮನಸ್ಸು ಎಂಬುದಿಲ್ಲ! ನೆತ್ತರು ಚೆಲ್ಲಿದ ಕೆಂಪುಕಾಡು! ತಾಯಿಯನ್ನು ಕಳೆದುಕೊಂಡ ಮಗ, ಮಗನನ್ನು ಕಳೆದುಕೊಂಡ ಅಮ್ಮ, ಗಂಡನನ್ನು ಕಳೆದುಕೊಂಡ ಹೆಂಡತಿ, ಸಾಕು! ಈ ಸಂಘರ್ಷ ಇನ್ನಾದರೂ ನಾವು ಮಾನವರಾಗೋಣ ಎಂಬ ಹೃದಯ ಮುಟ್ಟುವ ವಿಷಯ ಒಳಗೊಂಡ ಈ ನಾಟಕದ ರಚನೆಯನ್ನು ಮಾಡಿ ಹಾಡು ಹಾಡಿದವರು ಖ್ಯಾತ ಸಾಹಿತಿ ಸಂಜಯನಗರ ಶಾಲಾ ಶಿಕ್ಷಕ ರಮೇಶ್‍ ಉಳಯ ಇವರು. ನಾಟಕದ ವಿನ್ಯಾಸವನ್ನು ಮುಕ್ವೆ ಶಾಲೆಯ ಶಿಕ್ಷಕ ಚರಣ್ ಕುಮಾರ್ ಇವರು ಮಾಡಿದ್ದು, ಸಂಗೀತವನ್ನು ನೆಲ್ಲಿಕಟ್ಟೆ ಶಾಲಾ ಶಿಕ್ಷಕ ಭಗವಂತ ಇವರು ಒದಗಿಸಿದರು ಈ ನಾಟಕವನ್ನು ಸಂಯೋಜಿಸಿ ಹಿಮ್ಮೇಳದಲ್ಲಿ ಸಹಕರಿಸಿದವರು ಪುತ್ತೂರು ಬಿ. ಆರ್. ಸಿ. ಕೇಂದ್ರದ ಬಿ. ಐ. ಇ. ಆರ್. ಟಿ. ತಾರಾನಾಥ ಸವಣೂರು. ಕಲಾವಿದರಾಗಿ ಈ ನಾಟಕದಲ್ಲಿ ಮನೋಜ್ಞವಾಗಿ ಶಂಭೂರು ಶಾಲಾ ಮುಖ್ಯಶಿಕ್ಷಕ ಕಲಾವಿದ ಕಮಲಾಕ್ಷ ಕಲ್ಲಡ್ಕ, ಹಾರಾಡಿ ಶಾಲೆಯ ಶಿಕ್ಷಕ ಪ್ರಶಾಂತ ಅನಂತಾಡಿ, ಕೊಂಬೆಟ್ಟು ಶಾಲಾ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ, ಬಡಗನ್ನೂರು ಶಾಲೆಯ ಶಿಕ್ಷಕ ಜನಾರ್ದನ, ಪುಣ್ಚಪ್ಪಾಡಿ ಶಾಲೆಯ ಶಿಕ್ಷಕ ಯತೀಶ್ ಕುಮಾರ್ ಶಾಂತಿಗೋಡು ಶಾಲಾ ಶಿಕ್ಷಕಿ ಸರೋಜ ಪಿ.ಕೆ. ಹಾಗೂ ಪುಣ್ಚಪ್ಪಾಡಿ ಶಾಲಾ ಶಿಕ್ಷಕಿ ರಶ್ಮಿತಾ ನರಿಮೊಗರು ಅಭಿನಯಿಸಿದರು. ಮಹಾಲಿಂಗೇಶ್ವರ ದೇವರ ಆಡಳಿತ ಕಮಿಟಿಯ ಸದಸ್ಯ ಸಂಜೀವ ಕಲ್ಲೇಗ ಇವರು ಕಲಾವಿದರಿಗೆ ಗೌರವ ಅರ್ಪಿಸಿದರು ಶ್ರೀ ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು .ಸಾವಿರಾರು ಮಂದಿ ನಾಟಕ ವೀಕ್ಷಣೆ ಮಾಡಿದರು.

Also Read  ಪ್ರವಾಸೋದ್ಯಮ ಇಲಾಖೆ ➤ ಪ್ರವಾಸಿ ಟ್ಯಾಕ್ಸಿಗಳನ್ನು ಪಡೆಯಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

-ಪ್ರವೀಣ್ ಚೆನ್ನಾವರ

error: Content is protected !!
Scroll to Top