ಕಡಬ: ವಿದ್ಯುನ್ಮಾನ ಮತಯಂತ್ರ ಹಾಗೂ ಮತಖಾತ್ರಿ ಯಂತ್ರಗಳ ಜಾಗೃತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಎ.17. ದ.ಕ ಜಿಲ್ಲಾ ಸ್ಟೀಪ್ ಸಮಿತಿ ಮಂಗಳೂರು ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ವಿಚಾರದಲ್ಲಿ ವಿದ್ಯುನ್ಮಾನ ಮತಯಂತ್ರ ಮತ್ತು ಖಾತ್ರಿ ಯಂತ್ರಗಳ ಬಗ್ಗೆ ಮತದಾರರಿಗೆ ಜಾಗೃತಿ ಕಾರ್ಯಕ್ರಮ ಕಡಬ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಮಂಗಳವಾರ ನಡೆಯಿತು.

ಮತಯಂತ್ರದಲ್ಲಿ ಮತದಾನ ಮಾಡುವ ವಿಧಾನ ಹಾಗೂ ಮತಖಾತ್ರಿ ಯಂತ್ರದಲ್ಲಿ ನಾವು ಹಾಕುವ ಮತವನ್ನು ಖಾತ್ರಿಪಡಿಸಿಕೊಳ್ಳುವ ವ್ಯವಸ್ಥೆಯ ಬಗ್ಗೆ ಕಡಬ ವಲಯದ 13 ಬೂತ್ಗಳಿಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿ (ಸೆಕ್ಟರ್ ಆಫೀಸರ್) ನಾಗರಾಜ್ ಮಾಹಿತಿ ನೀಡಿದರು. ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಮತ ಯಂತ್ರದಲ್ಲಿ ಮತದಾನದ ಗುಂಡಿಯನ್ನು ಒತ್ತುವ ಮೂಲಕ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಡಬ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಕಾರ್ಯದರ್ಶಿ ಭುವನೇಂದ್ರ ಕುಮಾರ್, ಕಡಬ ಜೆಸಿಐ ಮುಖಂಡ ಅಶೋಕ್ ಕುಮಾರ್ ಪಿ, ಬಿಎಲ್ಒ ಗಳಾದ ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ ರೈ ಹಾಗೂ ಜೈನಾಬಿ, ಕಡಬ ಗ್ರಾ.ಪಂ.ಸದಸ್ಯ ಎ.ಎಸ್ ಶೆರೀಫ್ ಮೊದಲಾದವರು ಉಪಸ್ಥಿತಿದ್ದರು. ಮದ್ಯಾಹ್ನ ಬಳಿಕ ಕಡಬ ಸ.ಪ.ಪು.ಕಾಲೇಜಿನಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

error: Content is protected !!

Join the Group

Join WhatsApp Group