ಗೃಹರಕ್ಷಕರಿಗೆ ಯೋಗ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.17. ಗೃಹರಕ್ಷಕದಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ವತಿಯಿಂದ  ನಡೆಯುವ ಗೃಹರಕ್ಷಕರ ಮೂಲ ವಾರ್ಷಿಕ ಶಿಬಿರವು ಶ್ರೀ ಭಾರತೀ ಕಾಲೇಜು ನಂತೂರು ಇಲ್ಲಿ ನಡೆಯಲಿದ್ದು ಇದರ ಅಂಗವಾಗಿ ಪ್ರತಿ ದಿನ ಎರಡು ಗಂಟೆಗಳ ಕಾಲ 7 ದಿನಗಳ ನಿರಂತರ ಉಚಿತ ಯೋಗ ತರಬೇತಿ ಶಿಬಿರ ನಡೆಸಲಾಗುತ್ತಿದೆ.

ಈ ಶಿಬಿರದ ಯೋಗ ತರಬೇತಿಯನ್ನು ಯೋಗ ಗುರುಗಳು ಆದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಇವರು ನಡೆಸಿಕೊಡಲಿದ್ದಾರೆ. ಈ ಶಿಬಿರವನ್ನು ಆದಿತ್ಯವಾರದಂದು ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರು ಉದ್ಗಾಟಿಸಿದರು. ದಿನದ 8 ಗಂಟೆಗೂ ಅಧಿಕ ಕಾಲ ನಿಂತುಕೊಂಡು ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾ ಕಮಾಂಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ತಿಳಿಸಿದರು.

Also Read  ಕಡಬ: ಇಲಿಜ್ವರಕ್ಕೆ ಯುವಕ ಬಲಿ

error: Content is protected !!
Scroll to Top