ಜಿಲ್ಲಾ ಗೃಹರಕ್ಷಕ ದಳದ ಮೂಲ ತರಬೇತಿ ಶಿಬಿರದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ,  ಇಲ್ಲಿ ಹೊಸದಾಗಿ ನೊಂದಾಯಿತರಾದ ಗೃಹರಕ್ಷಕರಿಗೆ ಎಂಟು ದಿನಗಳ ಕಾಲ ನಡೆಯಲಿರುವ  ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಆದಿತ್ಯವಾರದಂದು ಶ್ರೀ ಭಾರತಿ ಕಾಲೇಜು, ನಂತೂರುನಲ್ಲಿ ನಡೆಯಿತು.

ಶ್ರೀ ನಜೀರ್, ಆಯುಕ್ತರು, ಮಂಗಳೂರು ಮಹಾನಗರಪಾಲಿಕೆಯವರು ಜ್ಯೋತಿ ಬೆಳಗಿಸಿ ಮೂಲ ತರಬೇತಿ ಶಿಬಿರ ಉದ್ಗಾಟನೆಯನ್ನು ಮಾಡಿದರು. ಇವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಪೊಲೀಸ್ ಇಲಾಖೆಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರು ಚುನಾವಣಾ ಕರ್ತವ್ಯದ ಪ್ರಜಾಪ್ರಭುತ್ವ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಚುನಾವಣಾ ಕರ್ತವ್ಯದ ಜೊತೆಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. 10 ದಿನಗಳ ತರಬೇತಿಯ ಸದುಪಯೋಗ ಪಡೆದುಕೊಂಡು ಸರ್ಕಾರದ / ಸಮಾಜದ ಜೊತೆಗೆ ಇರಬೇಕೆಂದು ಎಂದು ನುಡಿದರು. ಡಾ|| ಈಶ್ವರ ಪ್ರಸಾದ್ ಪ್ರಾಂಶುಪಾಲರು ಭಾರತೀ ಸಮೂಹ ಸಂಸ್ಥೆ ಮಾತನಾಡಿ ಗೃಹರಕ್ಷಕ ದಳ ಪೊಲೀಸ್ ಇಲಾಖೆಗೆ ಪರ್ಯಾಯವಾಗಿ ಕೆಲಸ ನಿರ್ವಹಿಸುತ್ತಿದೆ. ಇದು ವಾಲಂಟರಿ ಸಂಸ್ಥೆಯಾಗಿದ್ದು ಮುಂದಿನ ದಿನದಲ್ಲಿ ಹೆಚ್ಚಿನ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

Also Read  ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ►ಸಹಾಯವಾಣಿ ಕೇಂದ್ರ ವನ್ನು ಸಂಪರ್ಕಿಸಿ

ಈ ಸಮಾರಂಭದ ಅಧ್ಯಕ್ಷರಾದ ಜಿಲ್ಲಾ ಸಮಾದೇಷ್ಟರಾದ ಶ್ರೀ ಮುರಲೀ ಮೋಹನ್ ಚೂಂತಾರುರವರು ಮಾತನಾಡಿ ಹೊಸದಾಗಿ ಸೇರಿದ ಗೃಹರಕ್ಷಕರಿಗೆ ಅಭಿನಂದನೆ ಬೇರೆ ಬೇರೆ ವೃತ್ತಿಯಲ್ಲಿರುವ ತಾವು ಈ ಸಮವಸ್ತ್ರದ ಸಂಸ್ಥೆಗೆ ಸೇರಿದ ನಿಮಗೆ ಹೃತ್ಪೂರ್ವಕ ಅಭಿನಂದನೆ. ಚುನಾವಣೆ ಕರ್ತವ್ಯ ಇದು ಪ್ರಜಾಪ್ರಭುತ್ವ ಕರ್ತವ್ಯವಾಗಿದ್ದು , ಈ ಕರ್ತವ್ಯದಲ್ಲಿ ರಾಜ್ಯದಾದ್ಯಂತ 16,000 ಗೃಹರಕ್ಷಕರು ಭಾಗವಹಿಸಲಿದ್ದು, ಈ ಹತ್ತು ದಿನದ ತರಬೇತಿಯಲ್ಲಿ ಲಾಠಿಡ್ರಿಲ್, ಮಾರ್ಚ್ ಫಾಸ್ಟ್‌, ಫೈರ್ ಫೈಟಿಂಗ್, ವೈರ್ಲೆಸ್ ತರಬೇತಿ ಮುಂತಾದ ತರಬೇತಿ ನೀಡಲಿದ್ದಾರೆ. ಗೃಹರಕ್ಷಕರಿಗೆ ನೀಡುವ ಗೌರವಧನ ರೂ. 325/-ರಿಂದ ರೂ. 380/-ಕ್ಕೆ ಹೆಚ್ಚಿಸಲಾಗಿದ್ದು. ಎಲ್ಲಾ ಗೃಹರಕ್ಷಕರು ಈ ತರಬೇತಿಯ ಸಂಪುರ್ಣ ಸದುಪಯೋಗ ಪಡೆದುಕೊಂಡು ಈ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು. ಸದರಿ ಸಮಾರಂಭಕ್ಕೆ ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ಶ್ರೀ ರಮೇಶ್ರವರು ಸ್ವಾಗತ ಕೋರಿದರು. ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್ಶೇರಾ ವಂದನಾರ್ಪಣೆಯನ್ನು ಮಾಡಿದರು. ಗೃಹರಕ್ಷಕ ಶ್ರೀ ರಮೇಶ್ ಭಂಡಾರಿ, ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ರತ್ನಾಕರ, ಅಧೀಕ್ಷಕರು, ಜಿಲ್ಲಾ ಗೃಹರಕ್ಷಕ ದಳ, ಮಂಗಳೂರು, ತರಬೇತಿದಾರರಾದ ಎಎಸ್ಐ ಶ್ರೀಧರ, ಗೃಹರಕ್ಷಕರು ಉಪಸ್ಥಿತರಿದ್ದರು.

Also Read  ಎ.9: ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

error: Content is protected !!
Scroll to Top