ನಿಶ್ಚಿತಾರ್ಥ್ಥಕ್ಕೂ ಬಿತ್ತು ನೀತಿ ಸಂಹಿತೆಯ ಬಿಸಿ ► ಮದ್ಯ ಸಂಗ್ರಹದ ನೆಪದಲ್ಲಿ ಜೈಲಿಗೆ ಹೋದ ಮನೆ ಮಾಲಿಕ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಬಂಟ್ವಾಳ ತಾಲೂರಿನ ಇರಾ ಗ್ರಾಮದಲ್ಲಿ ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ನಿಶ್ಚಿತಾರ್ಥ್ಥ ನಡೆಯುತ್ತಿದ್ದ ವೇಳೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಧ್ಯ ಸಂಗ್ರಹದ ನೆಪದಲ್ಲಿ ಮನೆ ಮಾಲಿಕರಾದ ಸ್ಟೀವನ್ ಡಿ’ಸಿಲ್ವ ಅವರನ್ನು ಬಂಧಿಸಲಾಗಿದೆ.

ಶನಿವಾರದಂದು ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ಅವರ ಸಹೋದರನ ಪುತ್ರಿಯ ನಿಶ್ಚಿತಾರ್ಥ್ಥ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಈ ದಾಳಿಯು ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ, ನಿಶ್ಚಿತಾರ್ಥ್ಥ ಕಾರ್ಯಕ್ರಮಕ್ಕೆ ಎಂದು ಶೇಖರಣೆ ಮಾಡಿರುವ ಮಧ್ಯ ಪತ್ತೆ ಮಾಡಿದ್ದು, ಈ ಹಿನ್ನಲೆಯಲ್ಲಿ ಸ್ಟೀವನ್ ಅವರ ವಿರುದ್ದ ಕೇಸು ದಾಖಲಿಸಿ, ಬಂಧಿಸಲಾಗಿದೆ. ಸ್ಟೀವನ್ ಅವರಿಗೆ ನ್ಯಾಯಲಯವು ಜಾಮೀನು ನಿರಾಕರಣೆ ಮಾಡಿದ್ದು, ಸ್ಟೀವನ್ ಅವರು ಜೈಲು ಸೇರುವಂತಾಗಿದೆ.

Also Read  ಉಡುಪಿ ಜಿ.ಪಂ. ನೂತನ ಸಿಇಒ ಆಗಿ ಡಾ| ನವೀನ್‌ ಭಟ್‌ ನೇಮಕ

error: Content is protected !!
Scroll to Top