ಮಹೇಶ್‌ ಶೆಟ್ಟಿ ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ



(ನ್ಯೂಸ್‌ ಕಡಬ) newskadaba.com, ಆ.26: ಧರ್ಮಸ್ಥಳ ಬುರುಡೆ ಪ್ರಕರಣದ ಕೇಂದ್ರ ಸ್ಥಳವಾದ ಮಹೇಶ್ತಿಮರೋಡಿ ಮನೆ ಮೇಲೆ ವಿಶೇಷ ತನಿಖಾ ತಂಡ(ಎಸ್ಐಟಿ) ಇಂದು ದಾಳಿ ನಡೆಸಿದೆ.





ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿಯಾಗಿರುವ ಚಿನ್ನಯ್ಯನ ಹೇಳಿಕೆಯಂತೆ ಇಂದು ಪೊಲೀಸರು ಕೋರ್ಟ್ಸರ್ಚ್ವಾರೆಂಟ್ಪಡೆದು ತಿಮರೋಡಿಗೆ ಆಗಮಿಸಿದ್ದಾರೆ.






ಎಸ್ಐಟಿ ಉತ್ಖನನ ನಡೆಸಿದ ನಂತರ ತಾನು ತಿಮರೋಡಿ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ಇಟ್ಟಿದ್ದೇನೆ. ನಾನು ಮೊಬೈಲ್ಬಳಕೆ ಮಾಡುತ್ತಿರಲಿಲ್ಲ. ನನ್ನ ಮೊಬೈಲ್ತಿಮರೋಡಿ ಕಡೆಯವರ ಬಳಿ ಇತ್ತು ಎಂದು ಚಿನ್ನಯ್ಯ ಹೇಳಿದ್ದ. ಕಾರಣಕ್ಕೆ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಹಾಗೂ ಮೊಬೈಲ್ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸಕ್ಕೆ ಆಗಮಿಸಿದ್ದಾರೆ.

error: Content is protected !!
Scroll to Top