ಬಾಲಿವುಡ್‌ ನಟ ಗೋವಿಂದ ದಾಂಪತ್ಯದಲ್ಲಿ ಬಿರುಕು



(ನ್ಯೂಸ್‌ ಕಡಬ) newskadaba.com, ಆ.23:‌‌ ಬಾಲಿವುಡ್ಹಿರಿಯ ನಟ ಗೋವಿಂದ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.





ಪ್ರೀತಿ, ವಿವಾಹದಲ್ಲಿ ಮೋಸ ಹಾಗೂ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಕಾರಣ ನೀಡಿ ಸುನೀತಾ ಅವರು ವಿಚ್ಛೇದನ ಕೋರಿದ್ದಾರೆ.






ಸುನೀತಾ ಅವರು ಹಿಂದೆಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಮೇ.27ರಂದು ನ್ಯಾಯಾಲಯವು ಗೋವಿಂದ ಅವರಿಗೆ ಸಮನ್ಸ್ಜಾರಿ ಮಾಡಿತ್ತು. ಜೂನ್ನಿಂದ ಇಬ್ಬರೂ ವಿಚ್ಛೇದನ ಕುರಿತಂತ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ವಿಚಾರಣೆ ವೇಳೆ ಗೋವಿಂದ ಅವರು ಹಾಜರಾಗುತ್ತಿರಲಿಲ್ಲ, ಸುನೀತಾ ಅವರು ಹಾಜರಾಗುತ್ತಿದ್ದರು. ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಜೋಡಿ 38 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಗೋವಿಂದ ಹಾಗೂ ಸುನೀತಾ 1987 ಮಾರ್ಚ್‌ 11ರಂದು ವಿವಾಹವಾದರು. ದಂಪತಿಗೆ ಟೀನಾ ಅಹುಜಾ ಹಾಗೂ ಯಶವರ್ಧನ್ಅಹುಜಾ ಎಂಬ ಇಬ್ಬರು ಮಕ್ಕಳಿದ್ದಾರೆ.

error: Content is protected !!
Scroll to Top