(ನ್ಯೂಸ್ ಕಡಬ) newskadaba.com ಕಡಬ, ಎ. 14. ಇಲ್ಲಿನ ಪಿಜಕಳ ಉಜ್ರುಪಾದೆ ಪ್ರದೇಶದ ಅಲ್ಪಸಂಖ್ಯಾತ ಪ್ರಮುಖರು ಸುಳ್ಯ ಶಾಸಕ ಎಸ್.ಅಂಗಾರ ಅವರ ಸಮ್ಮುಖದಲ್ಲಿ ಬಿಜೆಪಿ ಸುಳ್ಯ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಫಯಾಝ್ ಕಡಬ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡರು.
ಉಜ್ರುಪಾದೆ ನಿವಾಸಿಗಳಾದ ಮಹಮ್ಮದ್ ರಫೀಕ್, ಅಬ್ದುಲ್ ರಝಾಕ್ ಪಿಜಕಳ, ಅಬೂಬಕ್ಕರ್, ಸಲೀಮ್, ರಮೀಝ್, ಅಬ್ದುಲ್ ಖಾದರ್, ಆದಂ ಸಾಹೇಬ್, ಉಸ್ಮಾನ್ ಸಾಹೇಬ್, ಮುನ್ನಾ, ಜಲೀಲ್ ಮುಂತಾದ ಪ್ರಮುಖರನ್ನು ಶಾಸಕ ಎಸ್.ಅಂಗಾರ ಹಾಗೂ ಬಿಜೆಪಿ ಮುಖಂಡರು ಬಿಜೆಪಿ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಶಾಸಕ ಎಸ್.ಅಂಗಾರ ಅವರು ಬಿಜೆಪಿಯ ಅಭಿವೃದ್ಧಿ ಪರ ಕಾಳಜಿಗೆ ಸ್ಪಂದಿಸಿ ಜನರು ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ನವರ ಅಪ ಪ್ರಚಾರಗಳ ನಡುವೆಯೂ ಮುಸ್ಲಿಂ ಮತದಾರರು ಸೇರಿದಂತೆ ಅಲ್ಪಸಂಖ್ಯಾಕರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಕಾಂಗ್ರೆಸ್ನ ದುರಾಡಳಿತದ ಪರಿಣಾಮವಾಗಿದೆ.
ಉಜ್ರುಪಾದೆ ಪರಿಸರದ 100ಕ್ಕೂ ಹೆಚ್ಚು ಮತದಾರರು ಕಾಂಗ್ರೆಸ್ನಿಂದ ಬಿಜೆಪಿಯತ್ತ ಬಂದಿರುವುದು ಬಿಜೆಪಿಯ ಮೇಲೆ ಅಲ್ಪಸಂಖ್ಯಾಕ ಸಮುದಾಯಕ್ಕೆ ಇರುವ ನಂಬಿಕೆಯ ಸಂಕೇತ ಎಂದರು. ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಶಕ್ತಿಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎಮ್ರಾಯಿಲ್, ಪ್ರಧಾನ ಕಾರ್ಯದಶಿ ಪ್ರಕಾಶ್ ಎನ್.ಕೆ., ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಅಧ್ಯಕ್ಷ ರವಿರಾಜ ಶೆಟ್ಟಿ ಕಡಬ, ಬಿಜೆಪಿ ಮುಖಂಡರಾದ ಎ.ಬಿ.ಮನೋಹರ ರೈ, ಸತೀಶ್ ಕೆ. ಐತ್ತೂರು, ಗಿರೀಶ್ ಎ.ಪಿ., ಅಶೋಕ್ ಕುಮಾರ್ ಪಿ., ಹರ್ಷ ಕೋಡಿ, ಸುಂದರ ಗೌಡ ಪಾಲೋಳಿ, ಜಯರಾಮ ಮೂರಾಜೆ ಮುಂತಾದವರು ಹಾಜರಿದ್ದರು.