ಕಟ್ಟಡ ಮಾಲೀಕರಿಗೆ ಡಿಕೆ ಶಿವಕುಮಾರ್‌ ಖಡಕ್‌ ಎಚ್ಚರಿಕೆ



(ನ್ಯೂಸ್‌ ಕಡಬ) newskadaba.com, ಆ.17:‌ ಬೆಂಗಳೂರಿನ ನಗರ್ತಪೇಟೆಯ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿದುರಂತ ಸಂಭವಿಸಿ ಐವರು ಸಾವನ್ನಪ್ಪಿದ್ದಾರೆ. ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದರೊಂದಿಗೆ ಕಟ್ಟಡ ಮಾಲೀಕರಿಗೆ ಡಿಕೆ ಶಿವಕುಮಾರ್ಖಡಕ್ಎಚ್ಚರಿಕೆ ನೀಡಿದ್ದಾರೆ.







ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡ ಡಿಕೆ ಶಿವಕುಮಾರ್‌, ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತರಪೇಟೆ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸ್ಥಳಕ್ಕೆ ಇಂದು ಅಧಿಕಾರಿಗಳೊಂದಿಗೆ ತೆರಳಿ, ಪರಿಶೀಲನೆ ನಡೆಸಿದ್ದೇನೆ. ಕಾನೂನು ಪಾಲನೆ ಮಾಡದೇ ಚಿಕ್ಕ ಜಾಗದಲ್ಲಿ ಬಿಲ್ಡಿಂಗ್ ಕಟ್ಟಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದಕ್ಕೆ ಮನೆ ಮಾಲೀಕರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.






ಈ ಘಟನೆಯಲ್ಲಿ ಬಡವರು ಜೀವ ಕಳೆದುಕೊಂಡಿದ್ದಾರೆ. ಕಟ್ಟಡ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದರೇ ಬಿಲ್ಡಿಂಗ್‌ಗಳನ್ನು ಒಡೆದು ಹಾಕುತ್ತೇವೆ. ಬಾಂಬೆನಲ್ಲೂ ಕೂಡ ಇದೆ ಪರಿಸ್ಥಿತಿ ಇದೆ. ಅಗ್ನಿಶಾಮಕ ವಾಹನಗಳು ಬರೋದಕ್ಕೆ ಆಗೋದಿಲ್ಲ. ಹಾಗಾಗಿ ಬಿಲ್ಡಿಂಗ್‌ಗಳನ್ನ ಸರಿ ಮಾಡಿಕೊಳ್ಳಬೇಕು ಎಂದು ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದರು.

error: Content is protected !!
Scroll to Top