Asia Cup: ಕೈಫ್‌ ಪ್ರಕಾರ ಭಾರತ ತಂಡ ಹೀಗಿರಲಿದೆ



(ನ್ಯೂಸ್‌ ಕಡಬ) newskadaba.com, ಆ.17:‌ ಏಷ್ಯಾಕಪ್ಟಿ20 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಸೆ.9ರಿಂದ ಆರಂಭವಾಗಲಿರುವ ಟೂರ್ನಿಗಾಗಿ ಆಗಸ್ಟ್‌ 3ನೇ ವಾರದಲ್ಲಿ ಭಾರತ ತಂಡವನ್ನು ಪ್ರಕಟಿಸಲು ಬಿಸಿಸಿಐ ತೀರ್ಮಾನಿಸಿದೆ. ನಡುವೆ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ಕೈಫ್ಅವರು 15 ಸದಸ್ಯರ ತಂಡವೊಂದನ್ನು ಪ್ರಕಟಿಸಿದ್ದಾರೆ.





15 ಸದಸ್ಯರ ಬಳಗದಿಂದ ಕೆಎಲ್ರಾಹುಲ್‌, ಯಶಸ್ವಿ ಜೈಸ್ವಾಲ್‌, ಶ್ರೇಯಸ್ಅಯ್ಯರ್ಅವರನ್ನು ಕೈಬಿಟ್ಟಿದ್ದಾರೆ. ಕೈಫ್ಪ್ರಕಾರ, ಏಷ್ಯಾಕಪ್ಗಾಗಿ ಭಾರತ ತಂಡದಲ್ಲಿ ಆರಂಭಿಕರಾಗಿ ಅಭಿಷೇಕ್ಶರ್ಮಾ ಮತ್ತು ಸಂಜು ಸ್ಯಾಮ್ಸನ್ಕಾಣಿಸಿಕೊಳ್ಳಲಿದ್ದಾರೆ. ಮೂರನೇ ಕ್ರಮಾಂಕಕ್ಕೆ ತಿಲಕ್ವರ್ಮಾ ಆಯ್ಕೆಯಾಗಲಿದ್ದಾರೆ.






ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ಯಾದವ್‌, 5ನೇ ಕ್ರಮಾಂಕದಲ್ಲಿ ಅಕ್ಷರ್ಪಟೇಲ್ಅವರನ್ನು ಹೆಸರಿಸಿದ್ದಾರೆ. ಆರನೇ ಕ್ರಮಾಂಕದಲ್ಲಿ ಹಾರ್ದಿಕ್ಪಾಂಡ್ಯ, ಏಳನೇ ಕ್ರಮಾಂಕದಲ್ಲಿ ಶಿವಂ ದುಬೆ, ಎಂಟನೇ ಕ್ರಮಾಂಕದಲ್ಲಿ ವಾಷಿಂಗ್ಟನ್ಸುಂದರ್ಅವರನ್ನು ಆಯ್ಕೆ ಮಾಡಿದ್ದಾರೆ.

ಬೌಲರ್ಗಳಾಗಿ ಕುಲ್ದೀಪ್ಯಾದವ್‌, ಅರ್ಷ್ದೀಪ್ಸಿಂಗ್ಮತ್ತು ಜಸ್ಪ್ರೀತ್ಬುಮ್ರಾ ಅವರನ್ನು ಹೆಸರಿಸಿದ್ದಾರೆ. ಉಳಿದಂತೆ ಹೆಚ್ಚುವರಿ ಆಟಗಾರರಾಗಿ ಶುಭಮನ್ಗಿಲ್‌, ಜಿತೇಶ್ಶರ್ಮಾ, ವರುಣ್ಚಕ್ರವರ್ತಿ ಹಾಗೂ ಮೊಹಮ್ಮದ್ಸಿರಾಜ್ಅವರನ್ನು ಹೆಸರಿಸಿದ್ದಾರೆ.

error: Content is protected !!
Scroll to Top