ಕಾಂತಾರ ಚಾಪ್ಟರ್‌ 1: ಕನಕವತಿ ಪೋಸ್ಟರ್‌ ರಿಲೀಸ್



(ನ್ಯೂಸ್‌ ಕಡಬ) newskadaba.com, ಆ.08:‌ ಕಾಂತಾರ ಚಿತ್ರದ ಪ್ರೀಕ್ವೆಲ್ಆಗಿರುವ ಕಾಂತಾರ: ಚಾಪ್ಟರ್‌ 1 ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ಅಭಿನಯಿಸುತ್ತಿದ್ದಾರೆ.‌ ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಅವರ ಪಾತ್ರದ ಪೋಸ್ಟರ್ಬಿಡುಗಡೆಯಾಗಿದೆ. ಇದರಿಂದ ಅಭಿಮಾನಿಗಳಲ್ಲಿ ರುಕ್ಮಿಣಿ ವಸಂತ್ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ.





ಕಾಂತಾರ: ಚಾಪ್ಟರ್‌1 ಚಿತ್ರದಲ್ಲಿ ರುಕ್ಮಿಣಿ ವಸಂತ್ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ಅವರು ಯುವರಾಣಿ ರೀತಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಹಿಂಭಾಗ ನೋಡಿದರೆ ರಾಜರ ಆಸ್ಥಾನದ ರೀತಿ ಕಾಣಿಸುತ್ತದೆ.






ಕಾಂತಾರ: ಚಾಪ್ಟರ್‌ 1 ಚಿತ್ರಕ್ಕೆ ಅರವಿಂದ್ಎಸ್ಕಶ್ಯಪ್ಅವರ ಛಾಯಾಗ್ರಹಣ, ಬಿ. ಅಜನೀಶ್ಲೋಕನಾಥ್ಅವರ ಸಂಗೀತ ಸಂಯೋಜನೆ ಇದೆ. ಹೊಂಬಾಳೆ ಫಿಲ್ಮ್ಸ್ಅಡಿಯಲ್ಲಿ ವಿಜಯ್ಕಿರಂಗದೂರು ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಿಷಬ್ಶೆಟ್ಟಿ ಅವರು ನಟಿಸುವುದರೊಂದಿಗೆ ನಿರ್ದೇಶನ ಕೂಡ ಮಾಡಿದ್ದಾರೆ.

.2ರಂದು ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಹಾಗೂ ಇಂಗ್ಲಿಷ್ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

error: Content is protected !!
Scroll to Top