ಬಾಳೆಬರೆ ಘಾಟಿಯಲ್ಲಿ ಭೂಕುಸಿತ: ಭಾರೀ ವಾಹನ ಸಂಚಾರ ಬಂದ್‌

(ನ್ಯೂಸ್‌ ಕಡಬ) newskadaba.com, ಆ.07: ತೀರ್ಥಹಳ್ಳಿಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ಸರಪಳಿ ಹೆರ್ಪಿನ್ತಿರುವಿನಲ್ಲಿ ಭೂಕುಸಿತ ಉಂಟಾಗಿದೆ. ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ತಾತ್ಕಾಲಿಕವಾಗಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ತೀರ್ಥಹಳ್ಳಿಯಿಂದ ರಾವೆಕಾನಗೋಡುಮಾಸ್ತಿಕಟ್ಟೆಹುಲಿಕಲ್ಘಾಟ್ಹೊಸಂಗಡಿಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿರಾವೆಕಾನುಗೋಡುನಗರಕೊಲ್ಲೂರುಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು ಎಂದು ತಿಳಿಸಲಾಗಿದೆ.

ನಗರ ಸಿದ್ದಾಪುರ ರಾಜ್ಯ ಹೆದ್ದಾರಿ -278 ರಸ್ತೆ ತೀರ್ಥಹಳ್ಳಿಯಿಂದ ಯಡೂರುಸುಳಗೋಡುಮಾಸ್ತಿಕಟ್ಟೆಹುಲಿಕಲ್ ಘಾಟ್ಹೊಸಂಗಡಿಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿಯಡೂರುಮಾಸ್ತಿಕಟ್ಟೆಕಾನುಗೋಡುನಗರಕೊಲ್ಲೂರುಕುಂದಾಪುರ ರಸ್ತೆ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

ಶಿವಮೊಗ್ಗ, ಸಾಗರ ಕಡೆಯಿಂದ ಹೊಸನಗರನಗರಮಾಸ್ತಿಕಟ್ಟೆಹುಲಿಕಲ್ ಘಾಟ್ಹೊಸಂಗಡಿಸಿದ್ದಾಪುರ ಮೂಲಕ ಕುಂದಾಪುರದ ಕಡೆ ಹೋಗುವ ಭಾರೀ ವಾಹನಗಳು, ಶಿವಮೊಗ್ಗಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರಭಟ್ಕಳ-ಬೈಂದೂರುಕುಂದಾಪುರ ರಸ್ತೆಯ ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Scroll to Top