ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ…

(ನ್ಯೂಸ್‌ ಕಡಬ) newskadaba.com, ಆ.06:‌ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು ಪೋಷಕಾಂಶಗಳಿಂದ ಸಮೃದ್ದವಾಗಿರುವ ಆಹಾರವನ್ನು ಸೇವಿಸುವುದು ಮುಖ್ಯ.

ಕ್ಯಾರೆಟ್ನಲ್ಲಿ ಹೆಚ್ಚಿನ ಮಟ್ಟದ ಬೀಟಾ ಕ್ಯಾರೋಟಿನ್ಅಂಶವಿದ್ದು, ಇದು ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ವಾರಕ್ಕೆ ಕನಿಷ್ಠ 3-4 ಬಾರಿ ಕ್ಯಾರೆಟ್ತಿನ್ನುವುದು ಒಳ್ಳೆಯದು.

ಪಾಲಕ್ಸೊಪ್ಪಿನಲ್ಲಿ ವಿಟಮಿನ್ ಹಾಗೂ ಸಿ ಸಮೃದ್ದಿಯಾಗಿದೆ. ಇದು ಕಣ್ಣುಗಳನ್ನು ಉರಿಯೂತದಿಂದ ರಕ್ಷಿಸುತ್ತದೆ. ಹಾಗಾಗಿ ಪಾಲಕ್ಸೊಪ್ಪಿನ ಸೇವೆಯಿಂದ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.

ಟೊಮೆಟೊದಲ್ಲಿರುವ ಲೈಕೋಪೀನ್ಎಂಬ ವಸ್ತುವು ಕಣ್ಣಿನ ಕೋಶಗಳನ್ನು ಹಾನಿಕಾರಕ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಟೊಮೆಟೊವನ್ನು ಪ್ರತಿನಿತ್ಯ ಸೇವಿಸುವ ಆಹಾರಗಳಲ್ಲಿ ಬಳಸುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಪ್ರಯೋಜನಕಾರಿ.

ಸಿಹಿ ಆಲೂಗಡ್ಡೆಯಲ್ಲಿ ವಿಟಮಿನ್ ಸಮೃದ್ದವಾಗಿದ್ದು, ಇದು ಕೆಲವು ವ್ಯಕ್ತಿಗಳಲ್ಲಿ ರಾತ್ರಿ ಕಂಡುಬರುವಂತ ದೃಷ್ಟಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ಸಿ ಹಾಗೂ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಿವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನು ಸೇವನೆ ಮಾಡುವುದರಿಂದ ಕಣ್ಣಿನ ಕೋಶಗಳ ಬೆಳವಣಿಗೆಗೆ ಸಹಯವಾಗುತ್ತದೆ.

Scroll to Top