ಹೊಸ ವಿಶ್ವ ದಾಖಲೆ ಬರೆದ ದೀಪಿಕಾ ಪಡುಕೋಣೆ..!



(ನ್ಯೂಸ್‌ ಕಡಬ) newskadaba.com, ಆ.05: ಬಾಲಿವುಡ್ನಟಿ ದೀಪಿಕಾ ಪಡುಕೋಣೆ ಅವರು ಹೊಸ ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಮೂಲಕ ಅವರು ಭಾರತದ ಮಾತ್ರವಲ್ಲ ವಿಶ್ವದ ಸ್ಟಾರ್ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ.





ದೀಪಿಕಾ ಅವರು ಸೋಶಿಯಲ್ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇವರು ಇನ್ಸ್ಟಾಗ್ರಾಂನಲ್ಲಿ ಸುಮಾರು 8 ಕೋಟಿ ಫಾಲೋವರ್ಗಳನ್ನು ಹೊಂದಿದ್ದಾರೆ. ಇವರು ಫೋಟೋಶೂಟ್‌, ಸಿನಿಮಾ ಮಾಹಿತಿ ಸೇರಿದಂತೆ ಜಾಹೀರಾತುಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ದೀಪಿಕಾ ಹಂಚಿಕೊಂಡಿದ್ದ ರೀಲ್ಸ್ ಒಂದು ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟ ರೀಲ್ಸ್ಎನಿಸಿಕೊಂಡಿದೆ.






ದೀಪಿಕಾ ಹಿಲ್ಟನ್ಹೋಟೆಲ್ ರಾಯಭಾರಿ ಆಗಿದ್ದು, ಇತ್ತೀಚೆಗೆ ಅವರು ಹಿಲ್ಟನ್ ಜಾಹೀರಾತಿನ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ಮಾಡಿದ್ದರು. ಇದೀಗ ರೀಲ್ಸ್‌ 1.9 ಬಿಲಿಯನ್ವೀವ್ಸ್ಕಂಡಿದೆ. ಹಿಂದೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ಪಾಂಡ್ಯರ ರೀಲ್ಒಂದು 1.6 ಬಿಲಿಯನ್ವೀಕ್ಷಣೆ ಕಂಡಿತ್ತು. ಫುಟ್ಬಾಲ್ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೀಲ್ಸ್ಒಂದು 1.5 ಬಿಲಿಯನ್ವೀವ್ಸ್ಕಂಡಿತ್ತು. ಆದರೆ, ದೀಪಿಕಾ ಅವರ ರೀಲ್ಸ್ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮೂಲಕ ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

error: Content is protected !!
Scroll to Top