ಇಂಗ್ಲೆಂಡ್‌ ಪ್ರವಾಸ ಅಂತ್ಯ: ಟೀಂ ಇಂಡಿಯಾಗೆ ಮುಂದಿನ ಪಂದ್ಯ ಯಾವಾಗ?



(ನ್ಯೂಸ್ಕಡಬ) newskadaba.com, ಆ.05: ಭಾರತದ ತಂಡದ ಇಂಗ್ಲೆಂಡ್ಪ್ರವಾಸ ಅಂತ್ಯಗೊಂಡಿದೆ. ಓವಲ್ಮೈದಾನದಲ್ಲಿ ಕೊನೆಯ ದಿನದಂದು ನಡೆದ 5ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಜಯಗಳಿಸಿದೆ. ಇಂಗ್ಲೆಂಡ್ಟೆಸ್ಟ್ಸರಣಿಯ ಬಳಿಕ ಭಾರತ ತಂಡ ಒಂದು ತಿಂಗಳು ವಿಶ್ರಾಂತಿ ಪಡೆಯಲಿದೆ. ಹಾಗಾಗಿ ಆಗಸ್ಟ್ನಲ್ಲಿ ಟೀಂ ಇಂಡಿಯಾಗೆ ಯಾವುದೇ ಪಂದ್ಯ ಇರುವುದಿಲ್ಲ.





ಇನ್ನು ಭಾರತ ತಂಡವು 2025 ಏಷ್ಯಾ ಕಪ್ನಲ್ಲಿ ನೇರವಾಗಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದೆ. ಪಂದ್ಯ ಸೆ.9ರಿಂದ 28ರವರೆಗೆ ಟಿ20 ಸ್ವರೂಪದಲ್ಲಿ ಆಯೋಜಿಸಲಾಗಿದೆ. ಟೀಂ ಇಂಡಿಯಾ ಸೆ.10ರಂದು ಯುಎಇ ವಿರುದ್ದ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಭಾರತ ತಂಡವು ಸೆ.14ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಸೆ.19ರಂದು ಭಾರತ ತಂಡವು ಓಮನ್ವಿರುದ್ದ ಕಣಕ್ಕಿಳಿಯಲಿದೆ. ಇದಾದ ಬಳಿಕ ಸೂಪರ್-4‌ ಪಂದ್ಯಗಳು ನಡೆಯಲಿದ್ದು, ಭಾರತ ಹಾಗೂ ಪಾಕ್ನಡುವೆ ಪಂದ್ಯ ನಡೆಯುವ ಸಾಧ್ಯತೆ ಇದೆ.






ಭಾರತ ಹಾಗೂ ವೆಸ್ಟ್ಇಂಡೀಸ್ನಡುವೆ 2 ಪಂದ್ಯಗಳ ಟೆಸ್ಟ್ಸರಣಿ .2ರಿಂದ ಶುರುವಾಗಲಿದೆ. ಪಂದ್ಯಗಳು ಅಹಮದಾಬಾದ್ಹಾಗೂ ದೆಹಲಿಯಲ್ಲಿ ನಡೆಯಲಿವೆ. ಆಸ್ಟ್ರೇಲಿಯಾದಲ್ಲಿ ಅ.19ರಿಂದ 25ರವರೆಗೆ ನಡೆಯಲಿರುವ 3 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

error: Content is protected !!
Scroll to Top