ಬಿಜೆಪಿ ಸಬಳೂರು ಬೂತ್ ಭಾರತ ಮಾತ ಪೂಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಎ.7. ರಾಜ್ಯವನ್ನಾಳಿದ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯ ದಿವಾಳಿಯಾಗಿದೆ. ನಿರ್ಭಯತೆಯಿಂದ ಜನ ಓಡಾಟ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸುಭಿಕ್ಷೆಯಾಗಲು ಬಿಜೆಪಿ ಅಧಿಕಾರವೇರಬೇಕು. ಇದಕ್ಕಾಗಿ ಕಾರ್ಯಕರ್ತರು ವಿರಮಿಸಬಾರದು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ ಹೇಳಿದರು.

ಅವರು ಕೊೖಲ ಗ್ರಾಮದ ಸಿಗೆತ್ತಡಿ ಶೀನಪ್ಪ ಪುಜಾರಿ ನಿವಾಸದಲ್ಲಿ ನಡೆದ ಸಬಳೂರು ಬೂತ್ ಮಟ್ಟದ ಭಾರತ ಮಾತ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಮು ಸಂಘರ್ಷವೇರ್ಪಡಿಸಿ ತನ್ನ ಬೇಳೆ ಬೇಯಿಸುಕೊಳ್ಳುವ ಕಾಂಗ್ರೆಸ್ಸಿಗರು ಕೇಂದ್ರದ ಪ್ರತಿಯೊಂದು ಯೋಜನೆಯನ್ನು ಅನುಷ್ಠಾನ ಮಾಡಲು ಅಡ್ಡಗಾಲು ಹಾಕುತ್ತಿದೆ ಇದರಿಂದ ಅಭಿವೃದ್ದಿ ಮರಿಚೀಕೆಯಾಗಿದೆ. ಅಭಿವೃದ್ದಿಯನ್ನು ಮಾನದಂಡವಾಗಿಸಿಕೊಂಡ ಬಿಜೆಪಿ ಅಧಿಕಾರಕ್ಕೇರಲು ಕಾರ್ಯಕರ್ತರ ಅವಿರತ ಶ್ರಮ ಅಗತ್ಯ. ಮನೆ ಮನೆ ಭೇಟಿ ನೀಡಿ ಬಿಜೆಪಿ ಯಾಕೆ ಅಧಿಕಾರವೇರಬೇಕು ಎನ್ನುವ ವಿಚಾರದಲ್ಲಿ ಜಾಗೃತಿ ಮೂಡಿಸಿವುದು ಭಾರತ ಮಾತ ಪೂಜನಾ ಕಾರ್ಯಕ್ರಮದ ಉದ್ದೇಶ. ಸುಳ್ಯ ವಿಧಾನ ಸಭಾ ಕ್ಷೇತ್ರದ 228 ಬೂತ್ ಗಳಲ್ಲಿ ಶುಕ್ರವಾರ ಏಕಕಾಲದಲ್ಲಿ ಭಾರತ ಮಾತ ಪುಜಾನ ಕಾರ್ಯಕ್ರಮ ಹಮ್ಮಿಕೊಳ್ಲಲಾಗಿದೆ ಎಂದರು.

Also Read  ಕೊೖಲ: ಅಯೋಧ್ಯಾನಗರ ಶ್ರೀ ರಾಮ ಭಜನಾ ಮಂದಿರ ► ಪದಾಧಿಕಾರಿಗಳ ಆಯ್ಕೆ

ಪ್ರೇಮಾ ಶೀನಪ್ಪ ಪುಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊೖಲ ಗ್ರಾಮ ಪಂಚಾಯಿತಿ ಸದಸ್ಯರಾದ ಹರಿಣಿ, ಸುಂದರ ನಾಯ್ಕ, ಪ್ರೇಮಾ ನಾಯ್ಕ, ಬಿಜೆಪಿ ಕೊೖಲ ಗ್ರಾಮ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಸಬಳೂರು ಬೂತ್ ಅಧ್ಯಕ್ಷ ನೇತ್ರಾಕ್ಷ, ಕಾರ್ಯದರ್ಶಿ ನಾಗೇಶ್ ಕಡೆಂಬ್ಯಾಲು, ಎಸ್ ಟಿ ಪ್ರಮುಖ್ ವಿಠಲ ನಾಯ್ಕ, ಮಹಿಳಾ ಪ್ರಮುಖ್ ಪುರ್ಣಿಮಾ, ಕೊೖಲ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವಿಮಲಾ ನಾಯ್ಕ, ಮಾಜಿ ಸದಸ್ಯ ಉಮೇಶ್ ಸಂಕೇಶ ಮೊದಲಾದವರು ಇದ್ದರು.

Also Read  “ಸ್ವರ್ಗದ ಪೇರ್ ಕಂರ್ಬುದ ನೀರ್”► ಬಿಸಿಲ ದಾಹ ನೀಗಿಸುವ ಕಬ್ಬು ಜ್ಯೂಸ್

error: Content is protected !!
Scroll to Top