ಜನಾಕ್ರೋಶಕ್ಕೆ ಮಣಿದ ಪುರಸಭೆ ಪಾಣೆಮಂಗಳೂರು ಸೇತುವೆ ಸಂಚಾರಕ್ಕೆ ಮುಕ್ತ



(ನ್ಯೂಸ್ ಕಡಬ) newskadaba.com ಜೂ. 13. ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಸಂಚಾರ ನಿರ್ಬಂಧ ಮಾಡಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ ಈ ಸೇತುವೆ ಜನಸಾಮಾನ್ಯರ ಬಹುಮುಖ್ಯ ಸಂಪರ್ಕ ಕೊಂಡಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.





ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆ ನಡೆದು ದ್ವಿಚಕ್ರ ಹಾಗು ತ್ರಿಚಕ್ರ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಪುರಸಭಾ ಸದಸ್ಯ ಇದ್ರೀಸ್ ಪಿ.ಜೆ ಆಗ್ರಹಿಸಿ ಸಭಾತ್ಯಾಗ ಮಾಡಿದ್ದರು. ಸಾರ್ವಜನಿಕರ ಮನವಿಯ ಮೇರೆಗೆ ಸೇತುವೆಯ ಎರಡೂ ಬದಿ ಅಡ್ಡಲಾಗಿ ಇಟ್ಟ ಬ್ಯಾರಿಕೇಡ್ ಅನ್ನು ಪುರಸಭಾ ಸದಸ್ಯರಾದ ಇದ್ರೀಸ್ ಪಿಜೆ, ಸಿದ್ದೀಕ್ ಗುಡ್ಡೆಯಂಗಡಿ ಅವರು ಆಕ್ರೋಶಗೊಂಡು ತೆರವುಗೊಳಿಸಿ, ಸಂಚಾರ ಮುಕ್ತಗೊಳಿಸಿದರು.






 

error: Content is protected !!
Scroll to Top