(ನ್ಯೂಸ್ ಕಡಬ) newskadaba.com ಕಡಬ, ಜೂ. 11. ಕರ್ನಾಟಕ ಕಬಡ್ಡಿ ತಂಡಕ್ಕೆ ಕಡಬ ತಾಲೂಕಿನ ಕೊಯಿಲದ ನಿವಾಸಿ ಝಮೀರ್ ಆಯ್ಕೆಯಾಗಿದ್ದು, 2 ದಿನಗಳ ಹಿಂದೆ ಆಂಧ್ರಪ್ರದೇಶದ ಮಚಲೀಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬೀಚ್ ಕಬಡ್ಡಿಯಲ್ಲಿ ಆಟವಾಡಿ ಉತ್ತಮ ಪ್ರದರ್ಶನ ತೋರಿದ್ದಾರೆ.
ಝಮೀರ್ ಅವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ದ್ವಿತೀಯ ವರ್ಷದ ಬಿ.ಎ. ತರಗತಿ ವಿದ್ಯಾರ್ಥಿಯಾಗಿರುತ್ತಾರೆ. ಝಮೀರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಆತೂರು ಬದ್ರಿಯಾ ಸ್ಕೂಲ್ ನಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಕಡಬದ ಸೈಂಟ್ ಜೋಕಿಮ್ ಪ್ರೌಢ ಶಾಲೆಯಲ್ಲಿ, ದ್ವಿತೀಯ ಪಿಯುಸಿಯನ್ನು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಝಮೀರ್ ಕೊಯಿಲ ನಿವಾಸಿ ಝಕರಿಯಾ ನೇರಂಕಿ ಮತ್ತು ತಾಹಿರಾ ಬಾನು ದಂಪತಿಯ ಪುತ್ರ.