(ನ್ಯೂಸ್ ಕಡಬ) newskadaba.com ಜೂ. 10. ಬಹುತೇಕ ಜನರ ನೆಚ್ಚಿನ ಪಾನೀಯಗಳಲ್ಲಿ ಒಂದಾದ ಎಳನೀರನ್ನು ಯಾವುದೇ ಋತುಮಾನವಿರಲಿ, ಜನರು ತಪ್ಪದೇ ಸೇವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತೆಂಗಿನಕಾಯಿ ಇಳುವರಿಯೂ ಕುಸಿದಿದ್ದು, ಇದರಿಂದಾಗಿ ಎಳನೀರು ಬೆಲೆ ಗಗನಕ್ಕೆ ಏರಲು ಕಾರಣವಾಗಿದೆ. ಹೀಗಾಗಿ ಎಳನೀರನ್ನು ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಖರೀದಿಸುವಂತಾಗಿದೆ.
ಆದರೆ ಇದೀಗ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ ಮಂಗಳೂರಿಗೆ ನೋಡಲು ಆಕರ್ಷಕವಾಗಿರುವ ಗುಲಾಬಿ ಬಣ್ಣದ ಇಂಡೋನೇಷ್ಯಾದ ಎಳನೀರು ಬಂದಿದೆ ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದು ನಿಜವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Manglore information ಎಂಬ ಹೆಸರಿನ ಫೇಸ್ ಬುಕ್ ಖಾತೆಯೊಂದರಲ್ಲಿ ಈ ಎಳನೀರಿನ ಫೋಟೋ ಶೇರ್ ಮಾಡಲಾಗಿದ್ದು, ಸೀಯಾಳದ ರೇಟ್ ಜಾಸ್ತಿಯಾದಂತೆ ಮಂಗಳೂರಿಗೆ ಬಂತು ಕೆಂಬಣ್ಣದ ಇಂಡೋನೇಷ್ಯಾ ಬೊಂಡ….! ಸೀಯಾಳಕ್ಕೆ ಬಣ್ಣ ಹಾಕಿದ್ದಲ್ಲ ಇದು. ಬೊಂಡ ಇರುವುದೇ ಹೀಗೆ. ಕೆಂಬಣ್ಣವೋ, ಕೆಂದಾಳೆಯೋ ಇದು ಇಂಡೋನೇಷಿಯಾದ ಸೀಯಾಳ. ಈಗ ಭಾರತಕ್ಕೆ ಅದೂ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಈ ಸೀಯಾಳ ಕಣ್ಣಿಗೆ ಬಿದ್ದಿದೆ. ಫೋಟೋ ತೆಗೆಯಲು ಹೊರಟಾಗ ನಾಚಿ ಕೆಂಪಾಯಿತೋ ಹೇಗೆ ಎಂತ ಅವರ ಹತ್ತಿರನೆ ಕೇಳಬೇಕು. ಆದರೆ ಮೇಲ್ನೋಟಕ್ಕೆ ಇದು ಡ್ರೈ ಪೆಯಿಂಟ್ ರೂಪದಲ್ಲಿದೆ ಎಂದು ಬರೆಯಲಾಗಿದೆ. ಪೋಸ್ಟ್ನಲ್ಲಿ ಇಂಡೋನೇಷ್ಯಾದ ಕೆಂಬಣ್ಣದ ಆಕರ್ಷಕವಾದ ಎಳನೀರನ್ನು ನೀವು ಕಾಣಬಹುದು.