ಮಕ್ಕಳ ಬೇರುಗಳಲ್ಲಿಯೇ ಸಂಸ್ಕೃತಿಯನ್ನು ಬೆಳೆಸಿ: ಆಶಾ ಬೆಳ್ಳಾರೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.3. ದಿನಾಂಕ 31.03.2018 ರಂದು ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇಲ್ಲಿನ ಶಿಶುಮಂದಿರದಲ್ಲಿ ಸಾಮೂಹಿಕ ಹುಟ್ಟುಹಬ್ಬ, ನೂತನ ಜೋಕಾಲಿ ಸಮರ್ಪಣೆ, ಮಾತೃಭೋಜನ ಕಾರ್ಯಕ್ರಮಗಳು ನಡೆಯಿತು.

ಪಾಶ್ಚಿಮಾತ್ಯ ಆಚರಣೆಗಳ ಮಧ್ಯೆ ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ, ಇದನ್ನು ಉಳಿಸುವತ್ತ ನಮ್ಮ ಪ್ರಯತ್ನ ಇರಬೇಕು ಮತ್ತು ಯುವಜನತೆಯು ಈ ನಿಟ್ಟಿನಲ್ಲಿ ಆಸಕ್ತಿ ವಹಿಸುವುದು ಅಗತ್ಯ. ಮಕ್ಕಳೇ ದೇಶದ ಸಂಸ್ಕೃತಿಯನ್ನು ಪರಿಚಯಿಸುವ ರಾಯಭಾರಿಗಳೆಂದು ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿನೇಕಾನಂದ ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ ಹೇಳಿದರು, ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರವಿಚಂದ್ರ ಹೊಸವಕ್ಲು ಮಾತನಾಡಿ, ಈ ಮಕ್ಕಳಲ್ಲೇ ದೇವರನ್ನು ಕಾಣಲು ಸಾಧ್ಯ ಅವರೇ ಮುಂದಿನ ದೇಶದ ಸತ್ಪ್ರಜೆಗಳು ಆದ್ದರಿಂದ ಇಂದಿನಿಂದಲೇ ಆಚಾರ ವಿಚಾರಗಳನ್ನು ಪರಿಚಯಿಸತೊಡಗಿದರೆ ಮಾತ್ರ ಭವಿಷ್ಯದ ದಿನಗಳಲ್ಲಿ ಫಲಶ್ರುತಿ ಸಿಗಲು ಸಾಧ್ಯ , ಉತ್ತಮ ಪ್ರಜ್ಞಾವಂತ, ಸಂಸ್ಕಾರವುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳಲು ಇದು ಬುನಾದಿಯಾಗಲಿದೆ ಎಂದರು.

ಶಾಲಾ ಮುಖ್ಯ ಶ್ರೀಮಾನ್ ಗಣೇಶ್ ವಾಗ್ಲೆ ಮಾತಾಡುತ್ತ, ಹಿರಿಯರು ಹಾಕಿ ಕೊಟ್ಟ ಉನ್ನತ ಸಂಸ್ಕೃತಿಯ ತಳಹದಿಯ ಮೇಲೆ ನಾವಿಂದು ನಿಂತಿದ್ದೇವೆ, ಗಿಡದಿಂದಲೇ ಆ ಮಹೋನ್ನತವಾದ ಆದರ್ಶ, ಭಾರತೀಯ ಮೂಲ ಸಂಸ್ಕೃತಿಯನ್ನು ಮಕ್ಕಳಲ್ಲಿ ಪೋಷಿಸತೊಡಗಿದರೆ ಮಾತ್ರ ಮುಂದೆ ಉತ್ತಮ ಸಮಾಜ ನಿರ್ಮಾಣ ಮಾಡಿ ಸದೃಢ ದೇಶ ನಿರ್ಮಿಸಲು ಸಾಧ್ಯ, ಅದಕ್ಕಾಗಿ ಇಂದು ಈ ಮಕ್ಕಳಲ್ಲಿ ಇದನ್ನು ಪುನರ್ ಸ್ಥಾಪಿಸುವುದು ಅಗತ್ಯವೆಂದು ಅಭಿಪ್ರಯಿಸಿದರು. ಸರಸ್ವತಿ ವಿದ್ಯಾಲಯ ಕಡಬದ ಸಂಚಾಲಕರಾದ ಶ್ರೀಮಾನ್ ವೆಂಕಟರಮಣ ರಾವ್, ಬೋಧಕ ಬೋಧಕೇರರ ವೃಂದ ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಶಿಕ್ಷಕ ಅನಿಲ್ ಅಕ್ಕಪ್ಪಾಡಿ ಸ್ವಾಗತಿಸಿ ಸಹ ಶಿಕ್ಷಕಿ ಮೇಘಾ ಮಾತಾಜಿ ಧನ್ಯವಾದಗೈದು ಶ್ರುತಿ ಮಾತಾಜಿ  ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿವೃಂದ ಭಾಗವಹಿಸಿದರು.

error: Content is protected !!

Join the Group

Join WhatsApp Group