ರಾಮಕುಂಜ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ► ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಜಾಗೃತಿ ಜಾಥಾ

(ನ್ಯೂಸ್ ಕಡಬ) newskadaba.com ಕಡಬ, ಮಾ.30. ಪ್ರಕೃತಿಗೆ ವಿರುದ್ಧವಾಗಿ ನಡೆಯುವುದರಿಂದ ಪರಿಸರ ಹಾನಿಯಾಗುದಷ್ಟೇ ಅಲ್ಲ, ಮಾನವನ ಬದುಕಿಗೇ ಮಾರಕ. ಪ್ಲಾಸ್ಟಿಕ್ ಅತೀ ಅಪಾಯಕಾರಿ ವಸ್ತು. ಅದರ ಉಪಯೋಗದಲ್ಲಿ ನಿಯಂತ್ರಣ ಬೇಕು ಎಂದು ರಾಮಕುಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಹೇಳಿದರು.

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಮಕುಂಜ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಜಗತ್ತಿನಲ್ಲಿ ಮಾನವ ಅತೀ ಹೆಚ್ಚು ಬುದ್ದಿಶಕ್ತಿ  ಹೊಂದಿರುವ ಜೀವಿ.  ಆದರೆ ಮನುಷ್ಯನಿಗೆ ಪರಿಸರದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಸಮುದ್ರ, ಗಾಳಿ, ನೀರು, ಬೆಳಕು ಇವೆಲ್ಲಾ ವಾತಾವರಣದ ಅವಿಭಾಜ್ಯ ಅಂಗ. ಮಾನವನು ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿದ್ದಾನೆ. ಇದರಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತದೆ. ಮುಖ್ಯವಾಗಿ ಪ್ಲಾಸ್ಟಿಕ್ ನ ಉಪಯೋಗ ಹೆಚ್ಚಳವಾಗಿ ಪರಿಸರಕ್ಕೆ ಹಾನಿ ಸಂಭವಿಸುತ್ತದೆ. ಪ್ಲಾಸ್ಟಿಕ್ ಉಪಯೋಗವನ್ನು ಕಡಿಮೆಗೊಳಿಸುವುದರ ಮೂಲಕ ಪರಿಸರ ವಿನಾಶವನ್ನು ತಪ್ಪಿಸಬಹುದು. ಈ ಬಗ್ಗೆ ಯುವಕರು ಜಾಗೃತರಾಗಬೇಕು ಎಂದರು.

Also Read  ಚಾಲಕನ ತೀರಾ ನಿರ್ಲಕ್ಷತನದಿಂದ ಹತೋಟಿ ತಪ್ಪಿ ಚರಂಡಿ ತಡೆ ಗೋಡೆಗೆ ಡಿಕ್ಕಿ ಹೊಡೆದ ಕಾರು

ಘಟಕದ ನಾಯಕಿ ಚೈತ್ರಾ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕೃಷ್ಣಮೂರ್ತಿ ಕೆ. ಪ್ರಾಸ್ತಾವಿಸಿದರು. ಘಟಕದ ನಾಯಕ ಮೊಹನ್ ಸ್ವಾಗತಿಸಿದರು. ಆದಿತ್ಯ ಭಟ್ ವಂದಿಸಿದರು. ಹರ್ಷಿತಾ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಜಾಗೃತಿ ಜಾಥಾ ನಡೆಯಿತು.

error: Content is protected !!
Scroll to Top