ಸರ್ವೆ: ಷಣ್ಮುಖ ಯುವಕ ಮಂಡಲದಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಸವಣೂರು, ಮಾ.29. ಸರ್ವೆ ಷಣ್ಮುಖ ಯುವಕ ಮಂಡಲ ಇದರ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ, ತಾಲೂಕು ಯುವಜನ ಒಕ್ಕೂಟ ಪುತ್ತೂರು, ನೆಹರು ಯುವ ಕೇಂದ್ರ ಮಂಗಳೂರು ಇದರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ರಕ್ತದಾನ ಮಾಹಿತಿ ಕಾರ್ಯಾಕ್ರಮ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ರಕ್ತದಾನ ಶಿಬಿರ ಮತ್ತು ರಕ್ತದಾನ ಮಾಹಿತಿ ಕಾರ್ಯಕ್ರಮನ್ನು ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ  ವೈದ್ಯಾಧಿಕಾರಿ ಡಾ.ದೀಪಕ್ ರೈ ಉದ್ಘಾಟಿಸಿ, ಯುವಕ ಮಂಡಲದ ಕಾರ್ಯವನ್ನು ಶ್ಲಾಘಿಸಿದರು. ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ವಿ ಸರ್ವೆದೋಳಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು.ಪುತ್ತೂರು ರೋಟರಿಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಅವರು ರಕ್ತದಾನದ ಆವಶ್ಯಕತೆ ಹಾಗೂ ಸಾಧಕಗಳ ಕುರಿತು ಮಾಹಿತಿ ನೀಡಿದರು.

Also Read  ಆಳ್ವಾಸ್ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಾರ್ಡನ್ ರಿಂದ ಹಲ್ಲೆ ಆರೋಪ ► ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಗೌರವ ಪುರಸ್ಕೃತ ,ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುಗುತ್ತು ಅವರನ್ನು ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ್ ಎಸ್.ಡಿ ಸರ್ವೆದೋಳಗುತ್ತು ಹಾಗೂ ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ,ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಅವರು ಯುವಕ ಮಂಡಲದ ಪರವಾಗಿ ಗೌರವಿಸಿದರು.ಯುವಕ ಮಂಡಲದ ಸದಸ್ಯ ಗುರುರಾಜ್ ಪಟ್ಟೆಮಜಲು ಸಮ್ಮಾನ ಪತ್ರ ವಾಚಿಸಿದರು.

ಈ ಸಂದರ್ಭ ತಾಲೂಕು ಯುವಜನ ಒಕ್ಕೂಟದ ಆಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಪ್ರಧಾನ ಕಾರ್ಯದರ್ಶಿ, ನೆಹರು ಯುವ ಕೇಂದ್ರದ ಸಂಯೋಜಕಿ ಗುರುಪ್ರಿಯಾ ನಾಯಕ್‍ಉಪಸ್ಥಿತರಿದ್ದರು. 24 ಮಂದಿ ಯುವಕ ಮಂಡಲದ ಸದಸ್ಯರು ರಕ್ತದಾನ ಮಾಡಿದರು. ಕಾರ್ಯಕ್ರಮ ಸಂಯೋಜಕ ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಜೇಶ್ ಎಸ್.ಡಿ ಅಲೇಕಿ ಸ್ವಾಗತಿಸಿದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಾಂಜಲಿ ಅವರು ವಂದಿಸಿದರು. ಡಾ.ಪ್ರವೀಣ್ ಎಸ್.ಡಿ. ಸರ್ವೆದೋಳಗುತ್ತು ಅವರು ಕಾರ್ಯಕ್ರಮ ನಿರೂಪಿಸಿದರು.

Also Read  ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆ ​► ಕೈಕೊಟ್ಟ ವಿದ್ಯುತ್, ಕತ್ತಲಿನಲ್ಲಿ ಜನತೆ

 

error: Content is protected !!
Scroll to Top