ಬೆಳಂದೂರು: ನೆರೆಹೊರೆ ಯುವ ಸಂಸತ್ತು ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಸವಣೂರು, ಮಾ.29. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಶ್ರೀ ಗೌರಿ ಯುವತಿ ಮಂಡಲ ಸರ್ವೆ ಇದರ ಆಶ್ರಯದಲ್ಲಿ ನೆರೆಹೊರೆ ಯುವ ಸಂಸತ್ತು ಮಾಹಿತಿ ಕಾರ್ಯಗಾರ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನ ಪ್ರಾಚಾರ್ಯ ಪ್ರೋ.ಪದ್ಮನಾಭ ಕೆ. ಅವರು ಉದ್ಘಾಟಿಸಿ ಮಾತನಾಡಿ, ಯುವಜನತೆಯ ಬೆಳವಣಿಗೆಗೆ ಪೂರಕವಾಗಿ ತರಬೇತಿ ಕಾರ್ಯಗಳು ದೊರಕಿದರೆ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ನೆಹರು ಯುವ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ಘಟಕಾಧಿಕಾರಿ ವೆಂಕಟೇಶ್ ಪ್ರಸನ್ನ ಅವರು ಗ್ರಾಮ ಸ್ವರಾಜ್ಯ ಹಾಗೂ ಗ್ರಾಮ ವಿಕಾಸದ ಕುರಿತು ಮಾತನಾಡಿದರು.
ಸ್ವಚ್ಚಭಾರತ್ ಅಭಿಯಾನ ಕುರಿತು ಪತ್ರಕರ್ತ ಉಮೇಶ್ ಮಿತ್ತಡ್ಕ ಅವರು ಮಾಹಿತಿ ನೀಡಿ ಸ್ವಚ್ಚತೆ ಎಲ್ಲರ ಕರ್ತವ್ಯವಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ತಾವೂ ಸ್ವಚ್ಚತೆಯ ಕುರಿತು ಅಸ್ಥೆ ವಹಿಸಿ ಇತರರಿಗೂ ತಿಳಿಹೇಳುವ ಕಾರ್ಯವಾಗಬೇಕು ಎಂದರು.

Also Read  ಕಡವೆ ಭೇಟೆ- ಕೋವಿ ಸಹಿತ ನಾಲ್ವರ ಬಂಧನ

ಯೋಗ ಒಂದು ಚಿಂತನೆಯ ಕುರಿತು ಯೋಗಶಿಕ್ಷಕ ಜಯಂತ್ ವೈ ಅವರು ಮಾಹಿತಿ ನೀಡಿ ಯೋಗ ಎನ್ನುವುದು ನಿರಂತರವಾಗಿರಬೇಕು, ಯೋಗದಿಂದ ಆಲಸ್ಯ ,ರೋಗವನ್ನು ದೂರ ಮಾಡಬಹುದು ಎಂದರು.
ನೆಹರು ಯುವಕೇಂದ್ರದ ತಾಲೂಕು ಸಂಯೋಜಕಿ ಜಿಸ್ಮಿತಾ ಕೆ.ಆರ್ ಸ್ವಾಗತಿಸಿ, ವಂದಿಸಿದರು.ವಿದ್ಯಾರ್ಥಿನಿ ಕುಸುಮ ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top