ಬೆಳಂದೂರು: ಜಯಪ್ರಕಾಶ್ ಅಲೆಕ್ಕಾಡಿಯವರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com  ಸವಣೂರು, ಮಾ.28.  ಕಳೆದ ಏಳು ವರ್ಷಗಳಿಂದ ಬೆಳಂದೂರು ಗ್ರಾಮ ಪಂಚಾಯಿತಿನಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮ ಪಂಚಾಯಿತಿಗೆ ಪಿಡಿಓ ಆಗಿ ಭಡ್ತಿಗೊಂಡು ವರ್ಗಾವಣೆಯಾದ ಜಯಪ್ರಕಾಶ್ ಅಲೆಕ್ಕಾಡಿಯವರನ್ನು ಬೆಳಂದೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಸನ್ಮಾನಿಸಿ ಬೀಳ್ಕೊಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮೇಶ್ವರಿ ಅಗಳಿ ಮಾತನಾಡಿ, ಜಯಪ್ರಕಾಶ್ ಅಲೆಕ್ಕಾಡಿಯವರು ಸರಕಾರದ ಸೌಲಭ್ಯವನ್ನು ಜನಸಾಮಾನ್ಯರಿಗೆ ಒದಗಿಸಿಕೊಡುವಲ್ಲಿ ಮುತುವರ್ಜಿ ವಹಿಸುತ್ತಿದ್ದರು. ಅತ್ಯಂತ ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಜಯಪ್ರಕಾಶರು ಎಲ್ಲರೊಂದಿಗೂ ಸೌಜನ್ಯತೆಯಿಂದಲೇ ಬೆರೆಯುತ್ತಿದ್ದರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಕೆರೆನಾರು, ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕರುಣಾಕರ್ ಪೂಜಾರಿ ಪಟ್ಟೆ, ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ವಿಠಲಗೌಡ ಅಗಳಿ, ನಝೀರ್ ದೇವಸ್ಯ, ಪಂಚಾಯಿತಿ ಸಿಬ್ಬಂದಿ ಜಯಪ್ರಕಾಶರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಬೆಳಂದೂರು ಗ್ರಾಮ ಕರಣಿಕ ಪುಷ್ಪರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಈ ಸಂದರ್ಭದಲ್ಲಿದ್ದರು. ಪಿಡಿಓ ನವೀನ್ ಎ ಸ್ವಾಗತಿಸಿ,ವಂದಿಸಿದರು.

Also Read  ಬೆಳ್ಳಂಬೆಳಗ್ಗೆ ಆಲಂಕಾರಿನಲ್ಲಿ ಬಂದಿಳಿದ ಚಲನಚಿತ್ರ ನಟ ಹುಚ್ಚ ವೆಂಕಟೇಶ್ ► ಹುಚ್ಚುಚ್ಚಾಗಿ ಹಾಡುತ್ತಾ, ತನ್ನಷ್ಟಕ್ಕೇ ನಗಾಡುತ್ತಾ ಅಭಿಮಾನಿಗಳನ್ನು ರಂಜಿಸಿದ ವೆಂಕಟ್

error: Content is protected !!
Scroll to Top