ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯಿಂದ ಮುಗೇರು ದೇವಸ್ಥಾನಕ್ಕೆ ನೂತನ ವಸಂತಕಟ್ಟೆ ಸಮರ್ಪಣೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಇಲ್ಲಿನ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸುಮಾರು ರೂ. 3 ಲಕ್ಷ ವೆಚ್ಚದಲ್ಲಿ ನೂತನ ವಸಂತ ಕಟ್ಟೆಯನ್ನು ಸೇವಾಕರ್ತರಾದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್. ರೈ ಅವರು ಶ್ರೀ ದೇವಸ್ಥಾನಕ್ಕೆ ಸಮರ್ಪಿಸಿದರು.

ಈ ಸಂದರ್ಭ ನೂತನ ವಸಂತ ಕಟ್ಟೆಯ ಸೇವಾಕರ್ತರಾದ ಸವಣೂರು ಕೆ. ಸೀತಾರಾಮ ರೈ ಹಾಗೂ ಕಸ್ತೂರಿಕಲಾ ಎಸ್.ರೈ ದಂಪತಿಯನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಸದಸ್ಯರುಗಳಾದ ಅಜಿಲಾಡಿ ಬೀಡು ನವೀನ್ ಕುಮಾರ್ ಶೆಟ್ಟಿ, ರಾಕೇಶ್ ರೈ ಕೆಡೆಂಜಿ, ಶಿವರಾಮ ಗೌಡ ಮೆದು, ಆಶಾ ಪ್ರವೀಣ್ ಕಂಪ, ಮೋನಪ್ಪ ಗೌಡ ಆರೇಲ್ತಡಿ, ಪ್ರೇಮ ಆರೇಲ್ತಡಿ, ಅರ್ಚಕ ಪದ್ಮನಾಭ ಕುಂಜತ್ತಾಯ, ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ಸವಣೂರು ಬೊಳ್ಳಿ ಬೊಲ್ಪು ತುಳುಕೂಟ ಅಧ್ಯಕ್ಷ ಕುಂಜಾಡಿ ಪ್ರಕಾಶ್ ಚಂದ್ರ ರೈ ಮುಗೇರುಗುತ್ತು, ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ, ಉದ್ಯಮಿ ಎನ್. ಸುಂದರ ರೈ ಸವಣೂರು, ಕಸ್ತೂರಿಕಲಾ ಎಸ್. ರೈ ಸವಣೂರು, ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ರೈ ಮುಗೇರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಮುಗೇರು, ತಾಲೂಕು ಪಂಚಾಯತ್‍ ಉಪಾಧ್ಯಕ್ಷೆ ರಾಜೇಶ್ವರಿ ಕೆ., ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಮೆದು, ಪುತ್ತೂರು ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಓಂಕಾರ ಸೆವಾ ಸಮಿತಿಯ ಅಧ್ಯಕ್ಷ ಗಣೇಶ ನಾಯ್ಕ ಕೆಡೆಂಜಿ, ಮುಗೇರು ಮಹಾಲಕ್ಷ್ಮಿ ಮಹಿಳಾ ಸ್ವಯಂ ಸೇವಾ ಸಮಿತಿಯ ಕುಸುಮಾ ಪಿ.ಶೆಟ್ಟಿ ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

Also Read  ಸವಣೂರು: ಮಂಜುನಾಥನಗರ ಹಿ.ಪ್ರಾ.ಶಾಲೆಯಲ್ಲಿ ಶಾರದಾ ಪೂಜೆ ► ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ

error: Content is protected !!
Scroll to Top