(ನ್ಯೂಸ್ ಕಡಬ) newskadaba.com ಕಡಬ, ಮಾ.28. ನೂಜಿಬಾಳ್ತಿಲ ಗ್ರಾಮದ ಬೇರಿಕೆಯಿಂದ ಕುರಿಯಾಳಕೊಪ್ಪ ಶ್ರೀಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 13.5 ಲಕ್ಷ ವೆಚ್ಚದಲ್ಲಿ ಸುಮಾರು 300 ಮೀಟರ್ ಕಾಂಕ್ರಿಟಿಕರಣ ರಸ್ತೆಯ ಸೋಮವಾರ ಉದ್ಘಾಟನೆ ನಡೆಯಿತು.
ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಉದ್ಘಾಟಿಸಿ ಮಾತನಾಡಿ, ಜಿ.ಪಂ.ಅನುದಾನದೊಂದಿಗೆ ಗ್ರಾ.ಪಂ. ಹಾಗೂ ಉದ್ಯೋಗ ಖಾತರಿ ಯೋಜನೆ ಅನುದಾನವನ್ನು ಹೊಂದಿಸಿಕೊಂಡು ಸುಮಾರು 13.5 ಲಕ್ಷ ಅನುದಾನದಲ್ಲಿ ಅತ್ಯುತ್ತಮ ಕಾಂಕ್ರೀಟಿ ರಸ್ತೆಯನ್ನು ನಿರ್ಮಿಸಲಾಗಿದೆ. ಹಲವಾರು ವರ್ಷಗಳ ಬೇಡಿಕೆಯಾಗಿರುವ ಈ ರಸ್ತೆಯು ಇನ್ನೂ ದೇವಸ್ಥಾನದವರೆಗೆ ಅಭಿವೃದ್ದಿಯಾಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಅನುದಾನವನ್ನು ಹೊಂದಿಸಿಕೊಂಡು ಸಂಪುರ್ಣ ಕಾಂಕ್ರೀಟಿಕರಣಗೊಳಿಸಿ ಕನ್ವಾರೆ ಕಡಬ ಸಡಕ್ ರಸ್ತೆಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ತಾ.ಪಂ.ಸದಸ್ಯರಾದ ಗಣೇಶ್ ಕೈಕುರೆ, ಕೆ.ಟಿ ವಲ್ಸಮ್ಮ, ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ ಕೊಪ್ಪ, ಸದಸ್ಯರಾದ ಪಿ.ಯು ಸ್ಕರಿಯಾ, ಅಮ್ಮಣಿ ಜೋಸೆಫ್, ರಾಮಚಂದ್ರ ಗೌಡ ಎಸ್, ಹರೀಶ್ ಎನ್, ಪುಷ್ಪಲತಾ ಪೇರಡ್ಕ, ಹೊನ್ನಮ್ಮ ಪಾಲೆತ್ತಡ್ಕ, ರಾಜು ಗೋಳಿಯಡ್ಕ, ಜಾನಕಿ ಕಲ್ಲುಗುಡ್ಡೆ ಮೊದಲಾದವರು ಇದ್ದರು.