ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಚುನಾವಣಾ ಪ್ರಮಾಣ ವಚನ ಬೋಧನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28.  ಮುಂಬರುವ ಚುನಾವಣೆಯಲ್ಲಿ ಗ್ರಾಮ ಮಟ್ಟದಲ್ಲಿ  ಶೇ.100 ಮತದಾನ ಮಾಡುವ ಬಗ್ಗೆ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಮತದಾನದ ಜಾಗೃತಿ ಮೂಡಿಸುವ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮ ರಾಮ್ದಾಸ್ ಪ್ರಮಾಣವಚನ ಬೋಧಿಸಿದರು. ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ, ಸದಸ್ಯೆ ರಜಿತಾಪದ್ಮನಾಭ ಕೇಪುಂಜ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆನಂದ, ಸ್ತ್ರೀಶಕ್ತಿ ಮಹಿಳೆಯರಾದ ಉಮಾವತಿ ರೈ, ಡೀಕಮ್ಮ ಜಾಲು, ರತ್ನಾವತಿ, ಲೀಲಾವತಿ, ರೇವತಿ, ಖತೀಜ ನೀರಾರಿ, ಮಮ್ತಾಜ್, ನೂರ್ಜಹಾನ್, ರಶೀದ, ಅಂಗನವಾಡಿ ಸಹಾಯಕಿ ಜಮಿಳಾ ಸೇರಿದಂತೆ ಸ್ತ್ರೀಶಕ್ತಿ ಮಹಿಳೆಯರು ಸಾರ್ವಜನಿಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ ಸ್ವಾಗತಿಸಿ ವಂದಿಸಿದರು.

 

error: Content is protected !!
Scroll to Top