ನೂಜಿಬಾಳ್ತಿಲದಲ್ಲಿ ಬೀದಿ ನಾಟಕ

(ನ್ಯೂಸ್ ಕಡಬ) newskadaba.com ಕಡಬ ಮಾ.28. ಜಿಲ್ಲಾ ಆರೋಗ್ಯ ಇಲಾಖಾ ಸಹಯೋಗದೊಂದಿಗೆ ನೂಜಿಬಾಳ್ತಿಲ ಗ್ರಾ.ಪಂ. ನೇತೃತ್ವದಲ್ಲಿ ಆರೋಗ್ಯ ಅರಿವಿನ ಸಿಂಚನ ಕಾರ್ಯಕ್ರಮವನ್ನು ಬೀದಿ ನಾಟಕದ ಮೂಲಕ ನೂಜಿಬಾಳ್ತಿಲ ಗ್ರಾ.ಪಂ.ವಠಾರದಲ್ಲಿ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆನಂದ ಎ, ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭ, ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ ಮೊದಲಾದವರು ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಹಾಯಕಿ ದಯಾಕಿರಣ ಸ್ವಾಗತಿಸಿ, ವಂದಿಸಿದರು.

Also Read  ಬಂಟ್ವಾಳ:  ವಿಚಾರಣಾಧೀನ ಕೈದಿಯಿಂದ ಗಾಂಜಾ ವಶ          

error: Content is protected !!
Scroll to Top