(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಾಣಿಯೂರು ಗ್ರಾಮದ ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಂಜೂರಾದ ಅನುದಾನವನ್ನು ಬದಲಾಯಿಸಿದ ಬಗ್ಗೆ ಪ್ರತಿಭಟನೆಗೆ ಮುಂದಾದ ದಲಿತ ಮುಖಂಡರ ಬೇಡಿಕೆಗೆ ಸ್ಪಂಧಿಸಿದ ಪಿಡಬ್ಲ್ಯುಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಧಿಕಾರಿ ಗೋಕುಲದಾಸ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಮಾಡಿಸಿಕೊಡಲಾಗುವುದೆಂದು ಭರವಸೆ ನೀಡಿದರು.
ಕಾಣಿಯೂರು ಗ್ರಾಮ ವ್ಯಾಪ್ತಿಯ ಕಲೆಂಜೋಡಿ ದಲಿತ ಕಾಲೋನಿಗೆ 2017-18ರ ಶಾಸಕರ ನಿಧಿಯಿಂದ ಬಿಡುಗಡೆಯಾದ ಕಾಂಕ್ರೀಟ್ ರಸ್ತೆಯನ್ನು ಅಕ್ರಮವಾಗಿ ದಲಿತ ಕಾಲೋನಿಗೆ ಕಾಂಕ್ರೀಟ್ ರಸ್ತೆಯನ್ನು ಮಾಡದೆ ಸ್ಥಳೀಯ ಮೇಲ್ವರ್ಗದ ನಿವಾಸಿಗಳ ರಸ್ತೆಗೆ ಕಾಂಕ್ರೀಟ್ ರಸ್ತೆಯನ್ನು ಮಾಡಿದ್ದು ಇದರ ಬಗ್ಗೆ ಆಕ್ರೋಶಿತರಾದ ಕಾಲೋನಿ ನಿವಾಸಿಗಳು ಕಡಬ ದ.ಸಂ.ಸಮಿತಿ (ಅಂಬೇಡ್ಕರ್ ವಾದ) ಇವರಿಗೆ ದೂರನ್ನು ನೀಡಿದಂತೆ ಸಂಗಟನೆಯ ಪದಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪಿಡಬ್ಲ್ಯುಡಿ ಇಲಾಖೆಗೆ ದೂರಿಕೊಂಡಿದ್ದರು. ಕಾಮಗಾರಿ ನಡೆಸದಿದ್ದರೆ ಎ.2ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಈ ಬಗ್ಗೆ ಪಿಡಬ್ಲ್ಯುಡಿ ಇಲಾಖೆ ಸ್ಥಳ ತನಿಖೆಯನ್ನು ಮಾಡಿ ಕಾಲೋನಿಯ ರಸ್ತೆಗೆ ನೀಲನಕ್ಷೆ ಮಾಡಿ ಮಾ.30ರೊಳಗೆ ಕೆಲಸ ಪ್ರಾರಂಭಿಸುವ ಭರವಸೆಯನ್ನು ನೀಡಿದ್ದಾರೆ. ಹಾಗಾಗಿ ಪಿಡಬ್ಲ್ಯುಡಿ ಇಲಾಖೆಯ ವಿರುದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಕಡಬ ತಾಲೂಕು ಸಂಚಾಲಕರಾದ ವಸಂತ ಕುಬಲಾಡಿ, ಸದಸ್ಯರಾದ ಕುಶಲ ದೋಂತಿಲಡ್ಕ, ಅಣ್ಣು ಕಲೆಂಜೋಡಿ, ಮುದರ, ವಿಮಲ, ಹರ್ಷಿತಾ ಕಲೆಂಜೋಡಿ ತಿಳಿಸಿದ್ದಾರೆ.