ಕಡಬ: ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪುಜೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆಯ 145 ಮೀಟರ್ ಕಾಂಕ್ರಿಟ್ಕರಣ ಕಾಮಗಾರಿಗೆ ಗುದ್ದಲಿಪುಜೆ ಸೋಮವಾರ ನಡೆಯಿತು.

ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಗುದ್ದಲಿಪುಜೆ ನೆರವೇರಸಿ ಮಾತನಾಡಿ, ಸುಳ್ಯ ಶಾಸಕರ ಸುಮಾರು 5 ಲಕ್ಷ ರೂ ಅನುದಾನದಲ್ಲಿ ರಸ್ತೆ ಕಾಂಕ್ರಿಟಿಕರಣ ನಡೆಸಲಾಗುವುದು ಎಂದರು. ಈ ಸಂದರ್ಭ ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ಗ್ರಾಮ ಪಂಚಾಯಿತಿ ಸದಸ್ಯ ಆದಂ ಕುಂಡೋಳಿ, ಕಡಬ ಸಿ ಎ ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಬಿಜೆಪಿ ಮುಖಂಡರಾದ ಪ್ರಕಾಶ್ ಎನ್ ಕೆ, ಸತೀಶ್ ನಾಯಕ್, ಆಶೋಕ್ ಕುಮಾರ್, ಕಿಶನ್ ಕುಮಾರ್ ರೈ, ಕಾರ್ತಿಕ್ ಪಿಜಕಳ, ಪ್ರಸಾದ್, ಕೃಷ್ಣಪ್ಪ ಮಡಿವಾಳ ಮೊದಲಾದವರು ಇದ್ದರು. ಬಿಜೆಪಿ ಪಂಚಾಯಿತಿ ಅಧ್ಯಕ್ಷ ಗಿರೀಶ್ ಎ ಪಿ ಸ್ವಾಗತಿಸಿದರು. ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಫಯಾಝ್ ಕೆನರಾ ವಂದಿಸಿದರು.

Also Read  ಡಿಕೆಶಿ ಬಂಧನ ಖಂಡಿಸಿ ಕಡಬದಲ್ಲಿ ಪ್ರತಿಭಟನೆ

error: Content is protected !!
Scroll to Top