ಹಳೆನೇರಿಂಕಿ ಕುಡಿಯುವ ನೀರಿನ ಘಟಕಕ್ಕೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಹಳೆನೇರಿಂಕಿ ಗ್ರಾಮದ ಕಲ್ಲೇರಿ ದಲಿತ ಕಾಲೋನಿಯಲ್ಲಿ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪುಜೆ ಸೋಮವಾರ ನಡೆಯಿತು.

ತಾಲೂಕು ಪಂಚಾಯಿತಿ ಸದಸ್ಯೆ ತೇಜಶ್ವಿನಿ ಕಟ್ಟಪುಣಿ ಮಾತನಾಡಿ, ಸುಳ್ಯ ಶಾಸಕ ಎಸ್ ಅಂಗಾರ 2.30 ಲಕ್ಷ , ತಾಲೂಕು ಪಂಚಾಯಿತಿಯ 85 ಸಾವಿರ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿಯ 1ಲಕ್ಷದ 60 ಸಾವಿರ ರೂ ಅನುದಾನದಲ್ಲಿ ಕುಡಿಯುವ ನೀರಿನ ಘಟಕಕ್ಕೆ ಸಂಬಂದಪಟ್ಟಂತೆ ಕೊಳವೆಬಾವಿ, ಪಂಪ್ , ನೀರಿನ ಟ್ಯಾಂಕ್, ಪೈಪು ಅಳವಡಿಕೆಗೆ ಮಾಡಲಾಗುವುದು. ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಿದೆ ಎಂದರು.

Also Read  ಎಸ್ಸಿ/ಎಸ್ಟಿ ಫ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

ಹಿರಿಯರಾದ ಗುರುವ ಗುದ್ದಲಿ ಪುಜೆ ನೆರವೇರಿಸಿ ಶುಭಹಾರೈಸಿದರು. ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್. ಕೆ., ಸದಸ್ಯರಾದ ಲೀಲಾವತಿ ಮಡೆಂಜಿಮಾರ್, ಎಪಿಎಂಸಿ ನಿರ್ದೇಶಕ ಕೊರಗಪ್ಪ ಎರಟಾಡಿ, ಪ್ರಮುಖರಾದ ಜಯರಾಮ ಬರೆಂಬೆಟ್ಟು, ಸುಧೀರ್, ಮನೋಹರ್, ಸುನಂದ, ಕಮಲ, ಆಶೋಕ, ರವಿ ಮೊದಲಾದವರು ಇದ್ದರು.

error: Content is protected !!
Scroll to Top