ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ವೀಡಿಯೋ – News Kadaba https://newskadaba.com 24x7 Regional News Wed, 22 Jul 2026 12:23:31 +0000 en-US hourly 1 https://wordpress.org/?v=7.0.7 ಕೋಬ್ರಾ ವರ್ಸಸ್ ಕ್ಯಾಟ್: ಅಪ್ರತಿಮ ವೇಗದ ಮುಂದೆ ಸೋತ ಕಾಳಿಂಗ ಸರ್ಪ! https://newskadaba.com/124047/ Wed, 22 Jul 2026 12:23:31 +0000 https://newskadaba.com/?p=124047 (ನ್ಯೂಸ್ ಕಡಬ) newskadaba.com ಜು. 23. ಸಾಮಾಜಿಕ ಜಾಲತಾಣವಾದ X (ಟ್ವಿಟರ್) ನ @gharkekalesh ಖಾತೆಯಲ್ಲಿ ಬೆಕ್ಕು ಹಾಗೂ ವಿಷಕಾರಿ ಕಿಂಗ್ ಕೋಬ್ರಾ ನಡುವಿನ ರೋಚಕ ಮುಖಾಮುಖಿಯ ವಿಡಿಯೋವೊಂದು ತೀವ್ರ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಬಯಲು ಪ್ರದೇಶದಲ್ಲಿ ಎದುರಾದ ಮಾರಣಾಂತಿಕ ಕಿಂಗ್ ಕೋಬ್ರಾಗೆ ಬೆಕ್ಕು ಕಿಂಚಿತ್ತೂ ಹೆದರದೆ ಅತ್ಯಂತ ಧೈರ್ಯದಿಂದ ಮುಖಾಮುಖಿಯಾಯಿತು. ಹಾವು ಇದ್ದಕ್ಕಿದ್ದಂತೆ ದಾಳಿ ಮಾಡಿದಾಗ, ಬೆಕ್ಕು ತನ್ನ ಅಸಾಧಾರಣ ರಿಯಾಕ್ಷನ್ ಟೈಮ್‌ (ಪ್ರತಿಕ್ರಿಯಿಸುವ ವೇಗ) ಬಳಸಿ ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗದಲ್ಲಿ ಹಿಂಜರಿದು ದಾಳಿಯಿಂದ ಸುಲಭವಾಗಿ ತಪ್ಪಿಸಿಕೊಂಡಿತು. ಬೆಕ್ಕಿನ ತೀಕ್ಷ್ಣ ಚುರುಕುತನಕ್ಕೆ ಹಾವು ದಂಗಾಯಿತು. ನಂತರ ಬೆಕ್ಕು ತನ್ನ ಪಂಜದಿಂದ ಜಾಗ ಖಾಲಿ ಮಾಡುವಂತೆ ಹಾವಿಗೆ ಎಚ್ಚರಿಕೆ ನೀಡುವ ಮೂಲಕ ಈ ಹೋರಾಟ ಮುಕ್ತಾಯಗೊಂಡಿತು.

ಬೆಕ್ಕಿನ ಚುರುಕುತನ ಮತ್ತು ಸಾಹಸಕ್ಕೆ ಮನಸೋತ ನೆಟ್ಟಿಗರು, “ಕಿಂಗ್ ಕೋಬ್ರಾ ಅಪಾಯಕಾರಿ ಹೌದಾದರೂ ಬೆಕ್ಕಿಗಿಂತ ಚುರುಕಲ್ಲ” ಹಾಗೂ “ಬೆಕ್ಕುಗಳನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು” ಎಂದು ಕಾಮೆಂಟ್ ಮಾಡಿದ್ದಾರೆ.

]]>
ಜಿಬ್ರಾ ಕ್ರಾಸಿಂಗ್ ಬಳಸಿ ರಸ್ತೆ ದಾಟಿದ ಶಿಸ್ತಿನ ನಾಯಿಗಳು ಜಾಲತಾಣಗಳಲ್ಲಿ ವೀಡಿಯೊ ಸದ್ದು! https://newskadaba.com/123932/ Mon, 20 Jul 2026 10:14:23 +0000 https://newskadaba.com/?p=123932 (ನ್ಯೂಸ್ ಕಡಬ) newskadaba.com ಜು. 20. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಗುಂಪೊಂದು ಟ್ರಾಫಿಕ್ ನಿಯಮ ಪಾಲಿಸಿ, ಪಾದಚಾರಿಗಳಿಗಾಗಿ ಮೀಸಲಾದ ಜೀಬ್ರಾ ಕ್ರಾಸಿಂಗ್ ಮೂಲಕವೇ ಕ್ರಮಬದ್ಧವಾಗಿ ರಸ್ತೆ ದಾಟುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣ ‘ಎಕ್ಸ್‘ (X) ನಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

“ಬೆಂಗಳೂರಿನಲ್ಲಿ ಜೀಬ್ರಾ ಕ್ರಾಸಿಂಗ್ ಬಳಸುತ್ತಿರುವ ಡೋಗೇಶ್” ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.

ಜನನಿಬಿಡ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಗಮನಿಸಿ, ಶಿಸ್ತಿನಿಂದ ಜೀಬ್ರಾ ಕ್ರಾಸಿಂಗ್‌ ನಲ್ಲೇ ರಸ್ತೆ ದಾಟಿದ ನಾಯಿಗಳ ನಡವಳಿಕೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. “ಮನುಷ್ಯರಿಗಿಂತ ಪ್ರಾಣಿಗಳಿಗೇ ರಸ್ತೆ ಶಿಸ್ತಿನ ಅರಿವು ಹೆಚ್ಚಾಗಿದೆ” ಎಂದು ಹಲವರು ಕಾಮೆಂಟ್ ಮಾಡುವ ಮೂಲಕ ಮನುಷ್ಯರೂ ಕೂಡ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.

]]>
ಕ್ಷಣಿಕ ಸೆಲ್ಫಿ ವ್ಯಾಮೋಹ ಮಲ್ಲಳ್ಳಿ ಜಲಪಾತದಲ್ಲಿ ಜವರಾಯನಿಂದ ಜಸ್ಟ್ ಮಿಸ್! https://newskadaba.com/123088/ Tue, 07 Jul 2026 07:31:25 +0000 https://newskadaba.com/?p=123088 (ನ್ಯೂಸ್ ಕಡಬ) newskadaba.com ಜು. 07.ಕೊಡಗಿನ ಮಲ್ಲಳ್ಳಿ ಜಲಪಾತದಲ್ಲಿ ಒಂದು ಕ್ಷಣದ ಹುಚ್ಚಾಟ, ಇಡೀ ಜೀವವನ್ನೇ ಪಣಕ್ಕಿಟ್ಟ ಘಟನೆ ನಡೆದಿದೆ. ಕೇವಲ ಫೋಟೋ ಮತ್ತು ಸೆಲ್ಫಿಗಾಗಿ ಜಲಪಾತದ ರೌದ್ರ ರೂಪದ ನಡುವೆಯೇ ನುಗ್ಗಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಸಾವಿನ ದವಡೆಗೆ ಸಿಲುಕಿ ಕೊನೆಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂತೋಷ್ ಕುಮಾರ್ ಮತ್ತು ಗಣೇಶ್ ನಾಯಕ್ ಎಂಬ ಇಬ್ಬರು ವಿದ್ಯಾರ್ಥಿಗಳು ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದು, ಮಳೆಗಾಲದ ರಭಸದ ನಡುವೆಯೂ ಅಪಾಯಕಾರಿ ಬಂಡೆಗಳ ಮೇಲೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಮೇಲ್ಭಾಗದ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡಲಾಯಿತು. ಕೇವಲ ಒಂದು ನಿಮಿಷದಲ್ಲಿ ನೀರಿನ ಮಟ್ಟ ಭೀಕರವಾಗಿ ಹೆಚ್ಚಿದ್ದರಿಂದ, ವಿದ್ಯಾರ್ಥಿಗಳು ಜಲದಿಗ್ಬಂಧನಕ್ಕೆ ಸಿಲುಕಿ ದಾರಿ ಕಾಣದೆ ಕಿರುಚಾಡಲು ಆರಂಭಿಸಿದರು.

ತಕ್ಷಣವೇ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಭೋರ್ಗರೆಯುವ ನೀರಿನ ನಡುವೆ ಹಗ್ಗದ ಸಹಾಯದಿಂದ ಬಂಡೆಯನ್ನು ತಲುಪಿ, ಯುವಕರಿಬ್ಬರನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ಗಂಡಾಂತರವೊಂದು ತಪ್ಪಿದಂತಾಗಿದೆ.

]]>
ಚಪ್ಪಲಿಯನ್ನೇ ಕಚ್ಚಿ ಹಿಡಿದು ಹಗೆ ತೀರಿಸಿಕೊಂಡ ಹಾವು ಈ ಉಗ್ರ ರೂಪದ ವಿಡಿಯೋ ವೈರಲ್!! https://newskadaba.com/122963/ Mon, 06 Jul 2026 04:47:52 +0000 https://newskadaba.com/?p=122963 (ನ್ಯೂಸ್ ಕಡಬ) newskadaba.com ಜು. 06. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಭಯಾನಕ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಹಾವೊಂದು ಪ್ಲಾಸ್ಟಿಕ್ ಚಪ್ಪಲಿಯನ್ನು ಬಾಯಲ್ಲಿ ಗಟ್ಟಿಯಾಗಿ ಕಚ್ಚಿ ಹಿಡಿದು, ಅದರ ಮೇಲೆ ಎಡೆಬಿಡದೆ ದಟ್ಟವಾದ ಹಸಿರು ಬಣ್ಣದ ವಿಷ ಕಾರುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.

ಸಾಮಾನ್ಯವಾಗಿ ಹಾವುಗಳು ಕಚ್ಚಿದಾಗ ಕ್ಷಣಾರ್ಧದಲ್ಲಿ ವಿಷವನ್ನು ದೇಹದೊಳಗೆ ಸೇರಿಸುತ್ತವೆ. ಆದರೆ ಈ ವೈರಲ್ ವಿಡಿಯೋದಲ್ಲಿ ಕಂಡುಬಂದ ದೃಶ್ಯ ಮಾತ್ರ ಎದೆ ನಡುಗಿಸುವಂತಿದೆ. ಹಾವೊಂದು ಹಗೆ ತೀರಿಸಿಕೊಳ್ಳುವಂತೆ, ಅಲ್ಲಿದ್ದ ಪ್ಲಾಸ್ಟಿಕ್ ಚಪ್ಪಲಿಯೊಂದನ್ನು ತನ್ನ ಬಾಯಿಯಿಂದ ಗಟ್ಟಿಯಾಗಿ ಕಚ್ಚಿ ಹಿಡಿದಿದೆ. ಅಷ್ಟಕ್ಕೇ ನಿಲ್ಲದೆ, ತನ್ನ ಕೋರೆಹಲ್ಲುಗಳಿಂದ ದಟ್ಟವಾದ ಹಸಿರು ಬಣ್ಣದ ವಿಷವನ್ನು ಸತತವಾಗಿ ಕಾರಲು ಪ್ರಾರಂಭಿಸಿದೆ.

ಹಾವು ಹಗೆ ತೀರಿಸಿಕೊಳ್ಳುವಂತೆ ಕ್ರೋಧದಿಂದ ಸತತವಾಗಿ ವಿಷ ಹೊರಹಾಕಿದ್ದು, ಆ ಚಪ್ಪಲಿ ಸಂಪೂರ್ಣವಾಗಿ ವಿಷದಲ್ಲಿ ನೆನೆದುಹೋಗಿದೆ. ಈ ಹಾವಿನ ಆಕ್ರೋಶ ಮತ್ತು ವಿಷದ ತೀವ್ರತೆಯನ್ನು ಕಂಡು ಜನರು ಆತಂಕ ವ್ಯಕ್ತಪಡಿಸುತ್ತಿದ್ದು, “ಇನ್ಮೇಲೆ ಹೊರಗೆ ಚಪ್ಪಲಿ ಧರಿಸುವ ಮುನ್ನ ಹತ್ತು ಬಾರಿ ಪರಿಶೀಲಿಸಬೇಕು” ಎಂದು ಕಮೆಂಟ್ ಮಾಡುತ್ತಿದ್ದಾರೆ.

ಒಂದು ಕ್ಷಣ ಯೋಚಿಸಿ, ಈ ವಿಷವೇನಾದರೂ ಮನುಷ್ಯರ ಚರ್ಮದ ಮೇಲೆ ಬಿದ್ದರೆ ಅಥವಾ ದೇಹ ಸೇರಿದರೆ ಪರಿಸ್ಥಿತಿ ಎಷ್ಟು ಘೋರವಾಗಿರಬಹುದು. ಅಷ್ಟು ಭಾರಿ ಪ್ರಮಾಣದ ವಿಷವನ್ನು ಆ ಹಾವು ಸತತವಾಗಿ ಹೊರಹಾಕುವುದನ್ನು ನೋಡಿದರೆ, ಅದರ ವಿಷದ ತೀವ್ರತೆ (Venom Potency) ಎಷ್ಟು ಅಪಾಯಕಾರಿ ಎಂಬುದು ಅರ್ಥವಾಗುತ್ತದೆ. ಆ ಬಣ್ಣ ಮತ್ತು ವಿಷದ ಗಟ್ಟಿತನವನ್ನು ನೋಡಿ ಇದು ಅತ್ಯಂತ ವಿಷಕಾರಿ ಜಾತಿಗೆ ಸೇರಿದ ಹಾವಾಗಿರಬಹುದು ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ.

ಜನವಸತಿ ಪ್ರದೇಶಗಳಲ್ಲಿ ಹಾವುಗಳ ಓಡಾಟ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಎಚ್ಚರದಿಂದಿರಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ರಾತ್ರಿ ವೇಳೆ ಟಾರ್ಚ್ ಬಳಸುವುದು ಹಾಗೂ ಶೂ ಅಥವಾ ಚಪ್ಪಲಿಗಳನ್ನು ಧರಿಸುವ ಮುನ್ನ ಕಡ್ಡಾಯವಾಗಿ ತಪಾಸಣೆ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಈ ವಿಡಿಯೋ ನೆನಪಿಸಿದೆ.

]]>
ಮಾನವನನ್ನೇ ಸಾಗಿಸಬಲ್ಲ ಡ್ರೋನ್ – ಹೊಸ ಆವಿಷ್ಕಾರಕ್ಕೆ ಕೈ ಹಾಕಿದ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು https://newskadaba.com/107547/ Mon, 01 Sep 2025 11:51:32 +0000 https://newskadaba.com/?p=107547 ]]> ವಿಮಾನ ದುರಂತದ ಸ್ಥಳದಲ್ಲಿ ಸುರಕ್ಷಿತವಾಗಿ ಪತ್ತೆಯಾದ ಭಗವದ್ಗೀತೆ ವಿಡಿಯೋ ವೈರಲ್..! https://newskadaba.com/102916/ Fri, 13 Jun 2025 07:22:19 +0000 https://newskadaba.com/?p=102916 (ನ್ಯೂಸ್ ಕಡಬ) newskadaba.com ಜೂ. 13. 242 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನವೊಂದು ಗುಜರಾತಿನ ಅಹ್ಮದಾಬಾದ್‌ನಲ್ಲಿ ಪತನಗೊಂಡಂತಹ ಆಘಾತಕಾರಿ ಘಟನೆ ಗುರುವಾರ ಸಂಭವಿಸಿದ್ದು, ಈ ಅಪಘಾತವನ್ನು ವಿಮಾನ ಅಪಘಾತಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಪಘಾತವೆಂದು ಪರಿಗಣಿಸಲಾಗಿದೆ.

ಇನ್ನು ಈ ಅಪಘಾತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದ್ದು, ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ದುರಂತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು ಸಿಕ್ಕಿದ್ದು, ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆಯ ಪುಸ್ತಕ ಮಾತ್ರ ಏನು ಆಗದೇ ಇದ್ದುದ್ದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

]]>
‘ಟಾಕ್ಸಿಗ್’ಗಾಗಿ ಮರಗಳ ಮಾರಣಹೋಮ- ಸೂಕ್ತ ಕ್ರಮಕ್ಕೆ ಮುಂದಾದ ಈಶ್ವರ್ ಖಂಡ್ರೆ https://newskadaba.com/96998/ Wed, 30 Oct 2024 11:26:28 +0000 https://newskadaba.com/?p=96998

 

]]>
ನಿಮ್ಮ ಮೊಬೈಲ್ ಹಾಗೂ ಕಂಪ್ಯೂಟರ್ ಗಳನ್ನು ಮಾಲ್ ವೇರ್ ನಿಂದ ರಕ್ಷಿಸಲು ಹೀಗೆ ಮಾಡಿ https://newskadaba.com/95616/ Thu, 17 Oct 2024 08:57:17 +0000 https://newskadaba.com/?p=95616 ]]> ಏಕಾಏಕಿ ಚಲಿಸಲಾರಂಭಿಸಿದ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು- ವಿಡಿಯೋ ವೈರಲ್..! https://newskadaba.com/95262/ Mon, 14 Oct 2024 08:39:54 +0000 https://newskadaba.com/?p=95262 (ನ್ಯೂಸ್ ಕಡಬ) newskadaba.com ಅ. 14 . ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರೊಂದು ತನ್ನಿಂದ ತಾನಾಗಿಯೇ ಚಲಿಸಿರುವ ಘಟನೆ ರಾಜಸ್ಥಾನದ ಜೈಪುರದ ಅಜ್ಮೀರ್ ರಸ್ತೆಯ ಸುದರ್ಶನಪುರದ ಬಳಿ ನಡೆದಿದೆ. ಸದ್ಯ ಬೆಂಕಿಯೊಂದಿಗೆ ಕಾರು ಚಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಎ.ಸಿ.ಯಲ್ಲಿ ಸಮಸ್ಯೆ ಕಾಣಿಸಿಕೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಕಾರಿನಿಂದ ಚಾಲಕ ಕೆಳಗಿಳಿದಿದ್ದರು. ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೇ ಉರಿಯತೊಡಗಿದ್ದು, ಬಳಿಕ ಕಾರು ಇದ್ದಕ್ಕಿದ್ದಂತೆ ಮುಂದೆ ಚಲಿಸಿದೆ. ಇದರಿಂದ ಸುತ್ತಲೂ ನೋಡುತ್ತಾ ನಿಂತಿದ್ದ ಜನ ಕಕ್ಕಾಬಿಕ್ಕಿಯಾಗಿ ಓಡತೊಡಗಿದ್ದಾರೆ. ಕಾರು ಸ್ವಲ್ಪ ದೂರ ಹೊಗಿ ಡಿವೈಡರ್ ಗೆ ನಿಂತಿದ್ದು, ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ತನಿಖೆ ನಡೆಯುತ್ತಿದ್ದು, ವಾಹನ ತಯಾರಿಕಾ ಕಂಪನಿಗೆ ನೋಟಿಸ್ ನೀಡಿರುವುದಾಗಿ ತಿಳಿದುಬಂದಿದೆ.

 

]]>