ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ, ಹಾಗೂ ಡಿ.ಫಾರ್ಮಾ/ಬಿ.ಫಾರ್ಮಾ (ಪಿ.ಸಿ.ಐ. ಸರ್ಟಿಫಿಕೇಟ್) ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕಂಪನಿ ವತಿಯಿಂದ ಪಿ.ಎಫ್, ಇ.ಎಸ್.ಐ, ಬೋನಸ್, ಗ್ರಾಚುಟಿ ಮತ್ತು ಸೇಲ್ಸ್/ ಟಾರ್ಗೆಟ್ ಇನ್ಸೆಂಟಿವ್ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
]]>ಕೃತಕ ಪನ್ನೀರ್‌ನಲ್ಲಿರುವ ರಾಸಾಯನಿಕಗಳು ಮತ್ತು ಕಳಪೆ ಕೊಬ್ಬಿನಾಂಶದಿಂದ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಹಾನಿಯುಂಟಾಗುವ ಸಾಧ್ಯತೆಯಿದೆ.
ಪನ್ನೀರ್ ತಯಾರಿಕೆಗೆ ಕಡ್ಡಾಯವಾಗಿ ಶುದ್ಧ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಸಬೇಕು..ಇಲಾಖೆಯ ಅಧಿಕಾರಿಗಳು ಹೋಟೆಲ್, ರೆಸ್ಟೋರೆಂಟ್ ಹಾಗೂ ಡೈರಿಗಳ ಮೇಲೆ ವಿಶೇಷ ದಾಳಿ ನಡೆಸಲಿದ್ದು, ನಿಯಮ ಉಲ್ಲಂಘಿಸಿದರೆ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
]]>ಅರ್ಹ ಅಭ್ಯರ್ಥಿಗಳು ಅಧಿಸೂಚನೆ ಮತ್ತು ಅಭ್ಯರ್ಥಿಗಳಿಗೆ ನೀಡಲಾದ ಸೂಚನೆಗಳನ್ನು ಓದಿ, ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
]]>ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.ಕನಿಷ್ಠ 20 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 28 ವರ್ಷ ಮೀರಬಾರದು.OBC / BC ಅಭ್ಯರ್ಥಿಗಳಿಗೆ 3 ವರ್ಷಗಳು,SC / ST ಅಭ್ಯರ್ಥಿಗಳಿಗೆ 5 ವರ್ಷಗಳು,PwBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷಗಳು.UR, EWS ಹಾಗೂ OBC ಅಭ್ಯರ್ಥಿಗಳಿಗೆ ₹750 ಹಾಗೂ SC, ST ಮತ್ತು PwBD ಅಭ್ಯರ್ಥಿಗಳಿಗೆ ಶುಲ್ಕವಿಲ್ಲ (ಉಚಿತ)ಪಾವತಿ ವಿಧಾನವು ಆನ್‌ಲೈನ್ ಮೂಲಕವಾಗಿದೆ.
ಬೇಕಾಗಿರುವ ದಾಖಲೆಗಳು ಸಕ್ರಿಯ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರ…ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಆಗಸ್ಟ್ 2026.ಪೂರ್ವಭಾವಿ (Prelims) ಪರೀಕ್ಷೆ ದಿನಾಂಕ: 27 ಸೆಪ್ಟೆಂಬರ್ ಮತ್ತು 03 ಅಕ್ಟೋಬರ್ 2026.. ಮುಖ್ಯ (Mains) ಪರೀಕ್ಷೆ ದಿನಾಂಕ: 27 ನವೆಂಬರ್ 2026…….
]]>ವಿಪ್ರ ಸ್ವ-ಉದ್ಯಮ ನೇರಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆ ದಿನ. https://ksbdb.co.in/Loan/ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ದೂರವಾಣಿ ಸಂಖ್ಯೆ 8029605888, 8762249230 ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ (0824-2453222) ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ 149 ಕೇಂದ್ರಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು.ಅರ್ಜಿ ಸಲ್ಲಿಸಿದ್ದ 3,77,861 ಅಭ್ಯರ್ಥಿಗಳಲ್ಲಿ %92.52 ರಷ್ಟು ಮಂದಿ ಬೆಳಗಿನ ಅವಧಿಯ ಪರೀಕ್ಷೆಗೆ ಹಾಜರಾಗಿದ್ದರು.ಅರ್ಜಿ ಸಲ್ಲಿಸಿದ್ದ 76,676 ಅಭ್ಯರ್ಥಿಗಳಲ್ಲಿ %94 ರಷ್ಟು ಮಂದಿ ಸಂಜೆಯ ಅವಧಿಯ ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡಲಾಗಿತ್ತು. ಎಲ್ಲಾ ಕೊಠಡಿಗಳ ಮೇಲೆ ವೆಬ್ ಕಾಸ್ಟಿಂಗ್ ಹಾಗೂ ಕೆಇಎ ಕೇಂದ್ರ ಕಚೇರಿಯ ಕಮಾಂಡ್ ಸೆಂಟರ್ ಮೂಲಕ ನೇರ ನಿಗಾ ವಹಿಸಲಾಗಿತ್ತು.ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪರೀಕ್ಷೆ ಮುಗಿದ ತಕ್ಷಣವೇ ಒಎಂಆರ್ (OMR) ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
]]>ಮೂಲ ಯೋಜನೆಯ ಪ್ರಕಾರ ಈ ಪರೀಕ್ಷೆಯು ಆಗಸ್ಟ್ 3 ರಿಂದ ಆಗಸ್ಟ್ 21 ರವರೆಗೆ ನಡೆಯಬೇಕಿತ್ತು. ಆದರೆ, ಅಭ್ಯರ್ಥಿಗಳ ಸಂಖ್ಯೆ ಹಾಗೂ ಸಿದ್ಧತೆಗಳನ್ನು ಪರಿಗಣಿಸಿ ಈಗ ಪರೀಕ್ಷಾ ದಿನಾಂಕಗಳನ್ನು ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ.ಹೊಸ ವೇಳಾಪಟ್ಟಿಯಂತೆ ಸಂಪೂರ್ಣ ಪರೀಕ್ಷೆಯು ಒಟ್ಟು 16 ದಿನಗಳಲ್ಲಿ, 4 ಪ್ರಮುಖ ಹಂತಗಳಲ್ಲಿ ನೆರವೇರಲಿದೆ:ಮೊದಲ ಹಂತ: ಆಗಸ್ಟ್ 3 ರಿಂದ ಆಗಸ್ಟ್ 6 , ಎರಡನೇ ಹಂತ: ಆಗಸ್ಟ್ 9 ರಿಂದ ಆಗಸ್ಟ್ 14, ಮೂರನೇ ಹಂತ: ಆಗಸ್ಟ್ 17 ರಿಂದ ಆಗಸ್ಟ್ 21, ಅಂತಿಮ ಹಂತ: ಆಗಸ್ಟ್ 25
ಅಭ್ಯರ್ಥಿಗಳು ತಮ್ಮ ಪರೀಕ್ಷಾ ನಗರ ಮತ್ತು ದಿನಾಂಕವನ್ನು ತಿಳಿದುಕೊಳ್ಳಲು ಪರೀಕ್ಷಾ ದಿನಾಂಕದ 10 ದಿನಗಳ ಮೊದಲು ಸಂಬಂಧಪಟ್ಟ RRB ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಿಂಕ್ ನೀಡಲಾಗುತ್ತದೆ.
ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಹಾಲ್ ಟಿಕೆಟ್‌ಗಳನ್ನು ಪರೀಕ್ಷಾ ದಿನಾಂಕಕ್ಕೆ ಸರಿಯಾಗಿ 4 ದಿನಗಳ ಮುಂಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ 30 ಪ್ರಶ್ನೆಗಳು (30 ಅಂಕಗಳು),, ಗಣಿತ 25 ಪ್ರಶ್ನೆಗಳು (25 ಅಂಕಗಳು), ಸಾಮಾನ್ಯ ವಿಜ್ಞಾನ 25 ಪ್ರಶ್ನೆಗಳು (25 ಅಂಕಗಳು),ಸಾಮಾನ್ಯ ಅರಿವು ಮತ್ತು ಪ್ರಚಲಿತ ವಿದ್ಯಮಾನಗಳು 20 ಪ್ರಶ್ನೆಗಳು (20 ಅಂಕಗಳು)ಈ ಪರೀಕ್ಷೆಯಲ್ಲಿ ಪ್ರತಿಯೊಂದು ಅಂಕವೂ ಅತ್ಯಂತ ನಿರ್ಣಾಯಕವಾಗಿದೆ. ಅಭ್ಯರ್ಥಿಗಳು ಉತ್ತರ ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ.ಪ್ರತಿ ತಪ್ಪು ಉತ್ತರಕ್ಕೂ ಮೂರನೇ ಒಂದು ಭಾಗದಷ್ಟು (1/3) ಋಣಾತ್ಮಕ ಅಂಕಗಳನ್ನು ಕಳೆಯಲಾಗುತ್ತದೆ.
]]>ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಳ್ಳಲಾಗಿದೆ..ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ನಿಗಾ ಜೊತೆಗೆ ಎಐ ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಯ ಮೂಲಕ ಅಭ್ಯರ್ಥಿಗಳ ನೈಜ ಗುರುತನ್ನು ಪರಿಶೀಲಿಸಲಾಗುತ್ತದೆ.
ಕಿವಿ ಭಾಗದಲ್ಲಿ ಬ್ಲೂಟೂತ್, ಇಯರ್‌ಫೋನ್ ಅಥವಾ ಇತರ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಬಚ್ಚಿಟ್ಟುಕೊಂಡು ಕಾಪಿ ಹೊಡೆಯುವುದನ್ನು ತಡೆಯಲು ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ENT (ಕಿವಿ, ಮೂಗು, ಗಂಟಲು) ತಜ್ಞ ವೈದ್ಯರನ್ನು ತಪಾಸಣೆಗೆ ನಿಯೋಜಿಸಲಾಗಿದೆ.ಪ್ರಶ್ನೆಪತ್ರಿಕೆಯ ಸಿಲ್ಡ್ ಬಾಕ್ಸ್ ಅನ್ನು ಪರೀಕ್ಷಾ ಕೇಂದ್ರದ ಪ್ರಿನ್ಸಿಪಾಲ್ ಹಾಗೂ ಐದು ಅಭ್ಯರ್ಥಿಗಳ (ವಿದ್ಯಾರ್ಥಿಗಳ) ನೇರ ಸಮಕ್ಷಮದಲ್ಲೇ ತೆರೆಯಲಾಗುತ್ತದೆ.
ಅರ್ಧ ತೋಳಿನ ಉಡುಪುಗಳನ್ನು ಮಾತ್ರ ಧರಿಸಬೇಕು. ಪಾದರಕ್ಷೆಯಾಗಿ ಚಪ್ಪಲಿ ಮಾತ್ರ ಧರಿಸಲು ಅವಕಾಶವಿದೆ.ಉದ್ದ ತೋಳಿನ ಬಟ್ಟೆಗಳು, ಶೂ ,ಕಿವಿ, ತಲೆ ಅಥವಾ ಮುಖವನ್ನು ಮುಚ್ಚುವಂತಹ ಯಾವುದೇ ಉಡುಪುಗಳನ್ನು ಧರಿಸುವಂತಿಲ್ಲ.
ಮಹಿಳಾ ಅಭ್ಯರ್ಥಿಗಳಿಗೆ ಮೂಗುತಿ ಮತ್ತು ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದಂತೆ ಯಾವುದೇ ರೀತಿಯ ಲೋಹದ ಆಭರಣಗಳನ್ನು (ಚೈನು, ಬಳೆ, ಉಂಗುರ ಇತ್ಯಾದಿ) ಧರಿಸುವಂತಿಲ್ಲ.
ಸಂಪೂರ್ಣ ನಿಷೇಧಿತ ವಸ್ತುಗಳು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ಪೆನ್.ಮತ್ತು ವಾಲೆಟ್, ಹ್ಯಾಂಡ್‌ಬ್ಯಾಗ್, ಗಾಗಲ್ಸ್, ಬೆಲ್ಟ್, ಕ್ಯಾಪ್, ಪುಸ್ತಕಗಳು, ಚೀಟಿಗಳು, ನೀರಿನ ಬಾಟಲಿ ಹಾಗೂ ಆಹಾರ ಪದಾರ್ಥಗಳು.
]]>ಖಾಲಿ ಹುದ್ದೆಗಳ ವರ್ಗೀಕರಣ, ವೇತನ ಶ್ರೇಣಿ, ನೇಮಕಾತಿ ವಿಧಾನ, ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಶನ, ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಸೇವಾ ಪರಿವೀಕ್ಷಣಾ ಅವಧಿ, ಆಯ್ಕೆ ವಿಧಾನ, ಸಾಮಾನ್ಯ ಸೂಚನೆಗಳು, ಅರ್ಹತಾ ಮಾನದಂಡಗಳು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ಮೀಸಲಾತಿ ಇತ್ಯಾದಿಗಳ ಕುರಿತು ಹೆಚ್ಚಿನ ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್ https://cetonline.karnataka.gov.in/kea/indexnew ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್‍ಸೈಟ್ https://karnataka.nalsa.gov.in ಅಥವಾ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವೆಬ್‍ಸೈಟ್ https://dk.dcourts.gov.in ನಲ್ಲಿ ನೀಡಲಾದ ವಿವರವಾದ ಮಾಹಿತಿಯನ್ನು ನೋಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
]]>ಇಲಾಖೆಯ ಆಯುಕ್ತರು ಎಲ್ಲಾ 249 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 1 ವಾರದೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.ಒಟ್ಟು 249 ಪ್ರಕರಣಗಳಲ್ಲಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲೇ ವರದಿಯಾಗಿವೆ. ಕಲಬುರಗಿ – 33,ಯಾದಗಿರಿ – 31, ಬೀದರ್ – 28, ರಾಯಚೂರು – 24
8 ಅಭ್ಯರ್ಥಿಗಳ ಪ್ರಮಾಣಪತ್ರಗಳು ನೈಜವಾಗಿವೆ ಎಂದು ಪ್ರಾಂಶುಪಾಲರು ನೀಡಿದ ವರದಿ ಹಿನ್ನೆಲೆಯಲ್ಲಿ, ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಲು ಸೂಚಿಸಲಾಗಿದೆ.
]]>