ಕೃತಕ ಪನ್ನೀರ್‌ನಲ್ಲಿರುವ ರಾಸಾಯನಿಕಗಳು ಮತ್ತು ಕಳಪೆ ಕೊಬ್ಬಿನಾಂಶದಿಂದ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಹಾನಿಯುಂಟಾಗುವ ಸಾಧ್ಯತೆಯಿದೆ.
ಪನ್ನೀರ್ ತಯಾರಿಕೆಗೆ ಕಡ್ಡಾಯವಾಗಿ ಶುದ್ಧ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಸಬೇಕು..ಇಲಾಖೆಯ ಅಧಿಕಾರಿಗಳು ಹೋಟೆಲ್, ರೆಸ್ಟೋರೆಂಟ್ ಹಾಗೂ ಡೈರಿಗಳ ಮೇಲೆ ವಿಶೇಷ ದಾಳಿ ನಡೆಸಲಿದ್ದು, ನಿಯಮ ಉಲ್ಲಂಘಿಸಿದರೆ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
]]>ಮೈಸೂರು ವಡೆ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು-
ಅರ್ಧ ಕಪ್ ಉದ್ದಿನ ಬೇಳೆ
ಅರ್ಧ ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ರುಚಿಗೆ ತಕ್ಕಷ್ಟು
ಸ್ವಲ್ಪ ಎಣ್ಣೆ ಒಗ್ಗರಣೆಗೆ
ಅರ್ಧ ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಉದ್ದಿನಬೇಳೆ
2 ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು
4 ರಿಂದ 5 ಕರಿಬೇವಿನ ಎಲೆ
2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಟೀ ಸ್ಪೂನ್ ಅಡುಗೆ ಎಣ್ಣೆ
ಮಾಡುವ ವಿಧಾನ:
ಉದ್ದಿನ ಬೇಳೆಯನ್ನು ತೊಳೆದು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಯಲು ಬಿಡಿ. ನೆನೆಸಿದ ನಂತರ ಉದ್ದಿನ ಬೇಳೆಗೆ ಅರ್ಧ ಕಪ್ ನೀರು ಸೇರಿಸಿ ರುಬ್ಬಿಕೊಳ್ಳಿ. ಅರೆದ ಹಿಟ್ಟಿಗೆ ಉಪ್ಪು, ಹೆಚ್ಚಿದ ಶುಂಠಿ ಮತ್ತು ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ. ಚೆನ್ನಾಗಿ ಕಲಸಿ. ಹಿಟ್ಟು ದಪ್ಪವಾಗಿ ಇಡ್ಲಿ ಹಿಟ್ಟಿನಷ್ಟು ಗಟ್ಟಿ ಇರಬೇಕು. ಗುಳಿಯಪ್ಪದ ಕಲ್ಲನ್ನು ಬಿಸಿಮಾಡಿಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ೫ ರಿಂದ 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು ವಡೆಯನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಬೇಯಿಸಿ. ಬೇಯಿಸಿದ ವಡೆಗಳನ್ನು ಬಿಸಿ ನೀರಿರುವ ಪಾತ್ರೆಗೆ ಹಾಕಿ. ಹತ್ತು ನಿಮಿಷದ ನಂತರ ಹಗುರವಾಗಿ ಒತ್ತಿ, ತೆಗೆದಿಡಿ. ಇನ್ನೊಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಂಡು ಸಕ್ಕರೆ ಮತ್ತು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ. ಅದಕ್ಕೆ ನೀರಿನಲ್ಲಿ ನೆನೆಸಿ ತೆಗೆದಿಟ್ಟ ವಡೆ ಹಾಕಿ. ಮೇಲಿನಿಂದ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಒಗ್ಗರಣೆ ಹಾಕಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಹತ್ತು ನಿಮಿಷ ಬಿಟ್ಟು ಸವಿದು ಆನಂದಿಸಿ.

ನೂತನ ಹೋಟೆಲ್ ನಲ್ಲಿ ಮಂದಿ ಬಿರಿಯಾನಿ, ಚಿಕನ್ ಬಿರಿಯಾನಿ, ಅಲ್-ಫಹಮ್, ಶವರ್ಮಾ, ಟಿಕ್ಕ, ಗೋಬಿ ಮಂಚೂರಿ, ಚಿಕನ್ ಮಂಚೂರಿ, ಫ್ರೈಡ್ ರೈಸ್, ನೂಡಲ್ಸ್ ಸೇರಿದಂತೆ ಮಿಲ್ಕ್ ಶೇಕ್, ಫ್ರೆಶ್ ಜ್ಯೂಸ್ ಮತ್ತು ಐಸ್ ಕ್ರೀಂ ಗಳು ಲಭ್ಯವಿರಲಿದ್ದು, 10 ಕಿ.ಮೀ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೋಟೆಲ್ ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸೇವೆಯನ್ನು ನೀಡಲಿದೆ. ಹೋಂ ಡೆಲಿವರಿ ಬೇಕಾದಲ್ಲಿ 90356 76355 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು
ಅರ್ಧ ಕಪ್ ಉದ್ದಿನ ಬೇಳೆ
ಅರ್ಧ ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ರುಚಿಗೆ ತಕ್ಕಷ್ಟು
ಸ್ವಲ್ಪ ಎಣ್ಣೆ ವಡೆ ಮಾಡಲು
ಒಗ್ಗರಣೆಗೆ
ಅರ್ಧ ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಉದ್ದಿನಬೇಳೆ
ಕಾಲು ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
2ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು
4? 5 ಕರಿಬೇವಿನ ಎಲೆ
2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಟೀ ಸ್ಪೂನ್ ಅಡುಗೆ ಎಣ್ಣೆ
ಮಾಡುವ ವಿಧಾನ:
ಉದ್ದಿನ ಬೇಳೆಯನ್ನು ತೊಳೆದು ನೀರಿನಲ್ಲಿ 4 ? 5 ಗಂಟೆಗಳ ಕಾಲ ನೆನೆಯಲು ಬಿಡಿ. ನೆನೆಸಿದ ನಂತ್ರ ಉದ್ದಿನ ಬೇಳೆಗೆ ಅರ್ಧ ಕಪ್ ನೀರು ಸೇರಿಸಿ ರುಬ್ಬಿಕೊಳ್ಳಿ. ಅರೆದ ಹಿಟ್ಟಿಗೆ ಉಪ್ಪು, ಹೆಚ್ಚಿದ ಶುಂಠಿ ಮತ್ತು ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ. ಚೆನ್ನಾಗಿ ಕಲಸಿ. ಹಿಟ್ಟು ದಪ್ಪವಾಗಿ ಇಡ್ಲಿ ಹಿಟ್ಟಿನಷ್ಟು ಗಟ್ಟಿ ಇರಬೇಕು. ಗುಳಿಯಪ್ಪದ ಕಲ್ಲನ್ನು ಬಿಸಿಮಾಡಿಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ೫ ? 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು ವಡೆಯನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಬೇಯಿಸಿ. ಬೇಯಿಸಿದ ವಡೆಗಳನ್ನು ಬಿಸಿ ನೀರಿರುವ ಪಾತ್ರೆಗೆ ಹಾಕಿ. ಹತ್ತು ನಿಮಿಷದ ನಂತ್ರ ಹಗುರವಾಗಿ ಒತ್ತಿ, ತೆಗೆದಿಡಿ. ಇನ್ನೊಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಂಡು ಸಕ್ಕರೆ ಮತ್ತು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ. ಅದಕ್ಕೆ ನೀರಿನಲ್ಲಿ ನೆನೆಸಿ ತೆಗೆದಿಟ್ಟ ವಡೆ ಹಾಕಿ. ಮೇಲಿನಿಂದ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಒಗ್ಗರಣೆ ಹಾಕಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಹತ್ತು ನಿಮಿಷ ಬಿಟ್ಟು ಸವಿದು ಆನಂದಿಸಿ

]]>
ಚನ್ನ ಮಸಾಲ ರೆಸಿಪಿ
ಬೇಕಾಗುವ ಸಾಮಗ್ರಿಗಳು- 1/4 ಕೆಜಿ ಕಪ್ಪು ಚನ್ನ, ಅರ್ಧ ತೆಂಗಿನಕಾಯಿ ತುರಿ, 6-8 ಕೆಂಪು ಮೆಣಸಿನಕಾಯಿ, 1 ಟೀಸ್ಪೂನ್ ಹುರಿದ ಕೊತ್ತಂಬರಿ ಬೀಜ, ಅರ್ಧ ಟೀಸ್ಪೂನ್ ಹುರಿದ ಜೀರಾ, ¼ ಟೀಸ್ಪೂನ್ ಹುರಿದ ಸಾಸಿವೆ, 1/4ಟೀಸ್ಪೂನ್ ಮೆಣಸು ಕಾರ್ನ್ ಗಳು, 3-4 ಬೆಳ್ಳುಳ್ಳಿ ಎಸಳು, 1 ಈರುಳ್ಳಿ, ಹುಣಸೆ ಹುಳಿ (1 ನಿಂಬೆ ಗಾತ್ರ), ಒಂದು ತುಂಡು ಬೆಲ್ಲ(optional), ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 1 ಟೀಸ್ಪೂನ್ ಮತ್ತು ಒಗ್ಗರಣೆಗೆ ತಕ್ಕಷ್ಟು ಕರಿಬೇವಿನ ಎಲೆ.

ಮಾಡುವ ವಿಧಾನ
ಕಪ್ಪು ಚನ್ನ(ಕಪ್ಪು ಕಡಲೆ)ವನ್ನು ತೊಳೆದು ರಾತ್ರಿ ನೆನೆಸಿಡಿ. ಮರುದಿನ, ಅದನ್ನು ಸೋಸಿಕೊಂಡು ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಬೇಯಿಸಿ. ಒಂದು ಬದಿಯಲ್ಲಿ ಹುರಿದಿಟ್ಟ ಮಸಾಲಾ ಪದಾರ್ಥಗಳನ್ನು ಸ್ವಲ್ಪ ನೀರಿನೊಂದಿಗೆ ಹುಡಿ ಮಾಡಿಟ್ಟುಕೊಂಡು ತುರಿದ ತೆಂಗಿನಕಾಯಿಯನ್ನು ಸೇರಿಸಿ ಮತ್ತು ಒರಟಾಗಿ ರುಬ್ಬಿಕೊಳ್ಳಿ. ಈ ಮಸಾಲವನ್ನು ಬೆಲ್ಲದ ಜೊತೆಗೆ ಬೇಯಿಸಿದ ಕಪ್ಪು ಚನ್ನಕ್ಕೆ ಸೇರಿಸಿ ಮತ್ತು 5ರಿಂದ 10 ನಿಮಿಷಗಳ ಕಾಲ ಕುದಿಸಿ. ಬಳಿಕ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಅವು ಚೆಲ್ಲಿದಾಗ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಮತ್ತು ಇದನ್ನು ಚನ್ನಕ್ಕೆ ಸೇರಿಸಿ. ಅದು ಒಣಗುವವರೆಗೆ ಸ್ವಲ್ಪ ಸಮಯ ಬೇಯಿಸಿ. ರುಚಿರುಚಿಯಾದ ಚನ್ನ ಮಸಾಲ ರೆಡಿ.
]]>ಬೇಕಾಗುವ ಸಾಮಾಗ್ರಿಗಳು:
ದಪ್ಪ ಅವಲಕ್ಕಿ
ರವೆ
ಮೊಸರು
ಶಾವಿಗೆ
ನೀರು
ಉಪ್ಪು(ರುಚಿಗೆ ತಕ್ಕಷ್ಟು)
ತುರಿದ ತೆಂಗಿನಕಾಯಿ
ಈರುಳ್ಳಿ, ಸಣ್ಣಗೆ ಹೆಚ್ಚಿದ್ದು
ಟೊಮೆಟೊ, ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ,ಖಾರಕ್ಕೆ ತಕ್ಕಷ್ಟು
ಶುಂಠಿ, ಹೆಚ್ಚಿದ್ದು
ಎಣ್ಣೆ
ಮಾಡುವ ವಿಧಾನ:
ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ ೧೦ ನಿಮಿಷ ಪಕ್ಕಕ್ಕಿಡಿ.
ಒಂದು ಬಾಣಲೆಯಲ್ಲಿ ಶಾವಿಗೆಯನ್ನು ೫ ನಿಮಿಷಗಳ ಕಾಲ ಹುರಿದು ಅವಲಕ್ಕಿ-ರವೆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ.
ನಂತರ ನೀರು, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ತುರಿ ಸೇರಿಸಿ ಹಿಟ್ಟಿನ ಹದ ಸರಿಮಾಡಿಕೊಳ್ಳಿ.ಉತ್ತಪ್ಪ ಹಿಟ್ಟು ಈಗ ತಯಾರಾಗಿದೆ. ಬಿಸಿ ಕಾವಲಿಗೆ ಎಣ್ಣೆ ಸವರಿ, ಹಿಟ್ಟನ್ನು ಕಾವಲಿ ಮೇಲೆ ಸಮನಾಗಿ ಹರಡಿ. ನಂತರ ಈರುಳ್ಳಿ,ಟೊಮ್ಯಾಟೊ, ಕೊತ್ತಂಬರಿ ಸೊಪ್ಪು,ಹಸಿಮೆಣಸು,ಶುಂಠಿ ಹಾಗೂ ೧ ಚಮಚ ಎಣ್ಣೆಯನ್ನು ಉತ್ತಪ್ಪದ ಮೇಲ್ಗಡೆ ಸಮಾನಾಗಿ ಹರಡಿ.
ಈಗ ಎರಡೂ ಬದಿಯನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿದರೆ ಶಾವಿಗೆ ಉತ್ತಪ್ಪ ರೆಡಿ!

]]>
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು – ಒಂದು ಕಪ್
ಗೋಧಿ ಹಿಟ್ಟು – 50 ಗ್ರಾಂ
ಕಡಲೆ ಹಿಟ್ಟು – 50 ಗ್ರಾಂ
ಜೀರಿಗೆ – ಅಗತ್ಯಕ್ಕೆ ತಕ್ಕಷ್ಟು
ಅರಶಿನ – ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಬೇಕಾದಷ್ಟು
ಹೆಚ್ಚಿದ ಹಸಿರು ಮೆಣಸಿನಕಾಯಿ – 3
ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾರೆಟ್ – 1
ಕರಿಬೇವು – ಸ್ವಲ್ಪ
ಹೆಚ್ಚಿದ ಕೊತ್ತಂಬರಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಗೆ ಜೋಳದ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಜೀರಿಗೆ, ಅರಶಿನ, ಉಪ್ಪು, ಹಸಿಮೆಣಸಿನ ಕಾಯಿ, ಖಾರದ ಪುಡಿ, ಈರುಳ್ಳಿ, ಕೊತ್ತಂಬರಿ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಿ.
* ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕಲಸಿದ ಬಳಿಕ ಹತ್ತು ನಿಮಿಷ ಹಾಗೆಯೇ ಬಿಡಿ.
* ಇದಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ.
* ನಂತರ ಬಾಳೆ ಎಲೆಯ ಮೇಲೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಉಂಡೆಯನ್ನಿಟ್ಟು ಹಿಟ್ಟನ್ನು ರೊಟ್ಟಿಯ ರೀತಿ ತಟ್ಟಿಕೊಳ್ಳಿ.
* ಈಗ ಗ್ಯಾಸ್ ಮೇಲ್ ಕಾವಲಿ ಕಾಯಲು ಇಟ್ಟು ಕಾದ ಬಳಿಕ ತಟ್ಟಿದ ತಾಲಿಪಟ್ಟನ್ನು ಕಾವಲಿಗೆ ಹಾಕಿ ಎರಡೂ ಕಡೆ ಕಾಯಿಸಿಕೊಂಡರೆ ಜೋಳದ ತಾಲಿಪಟ್ಟು ಸವಿಯಲು ಸಿದ್ಧ.
* ಇದಕ್ಕೆ ಕಾಯಿ ಚಟ್ನಿ, ಹುರಿಗಡಲೆ ಚಟ್ನಿ, ಟೊಮೆಟೋ ಚಟ್ನಿ ಪರ್ಫೆಕ್ಟ್ ಕಾಂಬಿನೇಷನ್ ಎನ್ನಬಹುದು.

]]>
ಬೇಕಾಗುವ ಸಾಮಾಗ್ರಿಗಳು
ಮಾಡುವ ವಿಧಾನ:

]]>
ಬೇಕಾಗುವ ಪದಾರ್ಥಗಳು…
ಮಾಡುವ ವಿಧಾನ…


ಚಿಕನ್ ಬಿರಿಯಾನಿ ಹಾಫ್ 79 ರೂ., ಫುಲ್ 129 ರೂ., ಫುಲ್ ಕಬಾಬ್ (8 ಪೀಸ್) 139 ರೂ., ಫುಲ್ ಬಕೆಟ್ ಬಿರಿಯಾನಿ 5 ಪೀಸ್ ಕಬಾಬ್ ಜೊತೆಗೆ ಕೇವಲ 899 ಮತ್ತು ಹಾಫ್ ಬಕೆಟ್ ಬಿರಿಯಾನಿ 5 ಪೀಸ್ ಕಬಾಬ್ ಜೊತೆಗೆ ಕೇವಲ 499 ರೂ. ಗಳಲ್ಲಿ ದೊರೆಯಲಿದೆ. ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
