ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಅಂತರ್ರಾಷ್ಟ್ರೀಯ ನ್ಯೂಸ್ – News Kadaba https://newskadaba.com 24x7 Regional News Fri, 28 Aug 2026 11:10:16 +0000 en-US hourly 1 https://wordpress.org/?v=7.0.7 ವಿಮಾನ ಅಪಘಾತದಲ್ಲಿ ಉಡುಪಿ ಮೂಲದ ತರಬೇತಿ ಪೈಲಟ್ ಮೃತ್ಯು!! https://newskadaba.com/125159/ Fri, 28 Aug 2026 11:10:16 +0000 https://newskadaba.com/?p=125159 (ನ್ಯೂಸ್ ಕಡಬ) newskadaba.com ಆ. 28. ಖಾಸಗಿ ತರಬೇತಿ ವಿಮಾನ ಅಪಘಾತ ಸಂಭವಿಸಿದ ಪರಿಣಾಮ ಉಡುಪಿ ಮೂಲದ ತರಬೇತಿ ಪೈಲಟ್ ಓರ್ವ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

 

ಮೃತ ಯುವಕನನ್ನು ಅಭಿಷೇಕ್ ಪೂಜಾರಿ(22) ಎಂದು ಗುರುತಿಸಲಾಗಿದೆ. ಅಭಿಷೇಕ್ ಪೂಜಾರಿಯವರು ಮೂಲತಃ ಉಡುಪಿ ಜಿಲ್ಲೆಯ ಕಣಜಾರು ಗ್ರಾಮದ ಕಾಡೆಬರ್ಕೆ ನಿವಾಸಿ. ವರದಿಯ ಪ್ರಕಾರ, ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ಅಭಿಷೇಕ್ ಅವರ ತಂದೆ ಪ್ರಭಾಕರ್ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ವಾಸವಾಗಿದ್ದಾರೆ. ಅಭಿಷೇಕ್ ಅವರು ತಮ್ಮ ಕುಟುಂಬದೊಂದಿಗೆ ಆಗಾಗ ಕಣಜಾರು ಗ್ರಾಮದ ಕಾಡೆಬರ್ಕೆಯಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು.

 

ಅಪಘಾತದ ಮಾಹಿತಿ ತಿಳಿದ ಕುಟುಂಬಸ್ಥರು ಕಾನ್ಪುರಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

 

]]>
ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ಸುರಕ್ಷಿತ ರಕ್ಷಣೆ https://newskadaba.com/125130/ Thu, 27 Aug 2026 07:25:06 +0000 https://newskadaba.com/?p=125130 (ನ್ಯೂಸ್ ಕಡಬ) newskadaba.com ಆ. 27. ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ನಡುವೆ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಇಬ್ಬರು ಕನ್ನಡಿಗರನ್ನು ರಕ್ಷಣಾಪಡೆ ಸುರಕ್ಷಿತವಾಗಿ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

 

ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಮತ್ತು ಸಂಗಮೇಶ್ ಕನಕಪುರ ಅವರನ್ನು ರಕ್ಷಿಸಲಾಗಿದ್ದು, ಇಬ್ಬರೂ ಸದ್ಯ ಸುರಕ್ಷಿತವಾಗಿದ್ದಾರೆ. ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಅವರೊಂದಿಗೆ ಸಂಪರ್ಕಿಸಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.

 

ಮಲ್ಲಿನಾಥ್ ಮತ್ತು ಸಂಗಮೇಶ್ ಸೇರಿದಂತೆ ಹೈದರಾಬಾದ್‌ನ 23 ಮಂದಿ ಒಟ್ಟು 25 ಜನರು ನೇಪಾಳಕ್ಕೆ ತೆರಳಿದ್ದರು ಎನ್ನಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಅವರು ಸಿಲುಕಿರುವ ಮಾಹಿತಿ ದೊರೆತ ಬಳಿಕ ಕರ್ನಾಟಕ ಸರ್ಕಾರ ರಕ್ಷಣಾ ಕಾರ್ಯಕ್ಕೆ ಮುಂದಾಗಿತ್ತು.

 

ಇದೀಗ ಇಬ್ಬರನ್ನು ನೇಪಾಳದಿಂದ ದೆಹಲಿಗೆ ಕರೆತರಲು ಕರ್ನಾಟಕ ಸರ್ಕಾರ ವ್ಯವಸ್ಥೆ ಮಾಡುತ್ತಿದ್ದು, ದೆಹಲಿಯ ಕರ್ನಾಟಕ ಭವನದಲ್ಲಿ ವಸತಿ ಸೇರಿದಂತೆ ಅಗತ್ಯ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ನಡುವೆ ನೇಪಾಳದ ಜಲಪ್ರಳಯದ ಪರಿಣಾಮ ಗಂಡಕ್ ನದಿಯ ನೀರಿನ ಮಟ್ಟವೂ ಏರಿಕೆಯಾಗಿದ್ದು, ಬಿಹಾರ ಹಾಗೂ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ನದಿ ತೀರದ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

]]>
ನೇಪಾಳ ಪ್ರವಾಹ: ಸಿಲುಕಿರುವ ಕನ್ನಡಿಗರ ಪತ್ತೆಗೆ ಸರ್ಕಾರದ ಕ್ರಮ https://newskadaba.com/125124/ Thu, 27 Aug 2026 06:18:03 +0000 https://newskadaba.com/?p=125124 (ನ್ಯೂಸ್ ಕಡಬ) newskadaba.com ಆ. 27. ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಹಾಗೂ ಮಾಹಿತಿ ಸಂಗ್ರಹಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಮತ್ತು ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಹಲವು ಭಾರತೀಯರು ನಾಪತ್ತೆಯಾಗಿರುವ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದೆ.

 

ನೇಪಾಳ ಅಥವಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರ ವಿವರಗಳನ್ನು ಕಲೆಹಾಕಲಾಗುತ್ತಿದೆ. ನೇಪಾಳ ಅಥವಾ ಟಿಬೆಟ್ ಭಾಗದಲ್ಲಿ ತಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ಸಿಲುಕಿಕೊಂಡಿದ್ದರೆ, ಅವರ ವಿವರಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಪ್ರಾಧಿಕಾರಕ್ಕೆ ಒದಗಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಗೂಗಲ್‌ ಡಾಕ್ಸ್‌ನಲ್ಲಿ ವಿವರ ತುಂಬುವಂತೆ ಮಾಹಿತಿ ಕೋರಲಾಗಿದೆ.

]]>
ಮಂಗಳೂರು: ವಿದೇಶದಿಂದ ಅಗಮಿಸಿದ ಆರೋಪಿಯು  ವಿಮಾನ ನಿಲ್ದಾಣದಲ್ಲಿ ಬಂಧನ https://newskadaba.com/124608/ Wed, 05 Aug 2026 05:03:17 +0000 https://newskadaba.com/?p=124608 (ನ್ಯೂಸ್‌ ಕಡಬ) newskadaba.com,  ಆ .05:  ೨೦೧೯ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಂಗಳೂರಿನ ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮುಂಬೈನ ಅಂಧೇರಿ ಪಶ್ಚಿಮದ ನಿವಾಸಿ ಅಶೋಕ್ ನಾರಾಯಣ್ (೬೩) ಎಂದು ಗುರುತಿಸಲಾಗಿದೆ.

೨೦೧೯ರಲ್ಲಿ ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಶೋಕ್ ನಾರಾಯಣ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ದಿನದಿಂದಲೂ ಈತ ಬಂಧನದಿಂದ ತಪ್ಪಿಸಿಕೊಳ್ಳಲು ವಿಳಾಸ ಬದಲಾಯಿಸಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ನಾಪತ್ತೆ ಆರೋಪಪಟ್ಟಿ ಕೂಡ ಸಲ್ಲಿಕೆಯಾಗಿತ್ತು.ತನಿಖೆಯ ವೇಳೆ ಆರೋಪಿ ವಿದೇಶಕ್ಕೆ ಪರಾರಿಯಾಗಿರುವುದು ತಿಳಿದುಬಂದಿತ್ತು. ತಕ್ಷಣ ಜಾಗೃತರಾದ ಪೊಲೀಸರು, ಆತನ ಪಾಸ್‌ಪೋರ್ಟ್ ವಿವರಗಳನ್ನು ಸಂಗ್ರಹಿಸಿ ಪೊಲೀಸ್ ಆಯುಕ್ತರ ಕಚೇರಿಯ ಮೂಲಕ ‘ಲುಕ್ ಔಟ್ ಸರ್ಕ್ಯುಲರ್’ ಹೊರಡಿಸಿದ್ದರು.

ಆಗಸ್ಟ್ ೧ರಂದು ಆರೋಪಿ ವಿದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದಂತೆ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದರು. ಬಳಿಕ ಆಗಸ್ಟ್ ೨ರಂದು ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಎಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿ ರವಿಕುಮಾರ್ ಅವರು ಮುಂಬೈಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು, ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

]]>
ಕಾಮನ್ವೆಲ್ತ್ 2026 ಜೂಡೋದಲ್ಲಿ ಐತಿಹಾಸಿಕ ಚಿನ್ನ ಸೇರಿದಂತೆ ಒಂದೇ ದಿನ 6 ಪದಕ ಗೆದ್ದ ಭಾರತ https://newskadaba.com/124502/ Sat, 01 Aug 2026 05:40:09 +0000 https://newskadaba.com/?p=124502 (ನ್ಯೂಸ್ ಕಡಬ) newskadaba.com ಆ. 01. ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಭಾರತೀಯ ಕ್ರೀಡಾಪಟುಗಳು ಜೂಡೋ, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್‌ ವಿಭಾಗಗಳಲ್ಲಿ ಅದ್ಭುತ ಸಾಧನೆ ತೋರಿದ್ದಾರೆ.

ಪುರುಷರ 60 ಕೆಜಿ ವಿಭಾಗದ ಫೈನಲ್‌ ನಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಟ್ಜ್ ಅವರನ್ನು 10-0 ಅಂತರದಿಂದ ಸೋಲಿಸಿ, ಕಾಮನ್ವೆಲ್ತ್ ಜೂಡೋ ಇತಿಹಾಸದಲ್ಲೇ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಜೂಡೋ ಪಟು ಎಂಬ ಇತಿಹಾಸ ನಿರ್ಮಿಸಿದರು. ಮಹಿಳೆಯರ 57 ಕೆಜಿ ವಿಭಾಗದ ರೋಮಾಂಚಕ ಫೈನಲ್‌ ನಲ್ಲಿ ಇಂಗ್ಲೆಂಡ್‌ನ ಅಸೆಲ್ಯಾ ಟೋಪ್ರಾಕ್ ವಿರುದ್ಧ ಗೋಲ್ಡನ್ ಸ್ಕೋರ್ ಹಂತದವರೆಗೆ ಹೋರಾಡಿ ಬೆಳ್ಳಿ ಪದಕ ಪಡೆದರು.

 

ಡೆಕಾಥ್ಲಾನ್ ವಿಭಾಗದಲ್ಲಿ 7,976 ಪಾಯಿಂಟ್‌ಗಳೊಂದಿಗೆ ಕಂಚು ಗೆದ್ದು, ಈ ವಿಭಾಗದಲ್ಲಿ ಪದಕ ಪಡೆದ ಮೊದಲ ಭಾರತೀಯ ಎನಿಸಿಕೊಂಡರು. ಜಾವೆಲಿನ್ ಥ್ರೋನಲ್ಲಿ 85.83 ಮೀಟರ್ ಎಸೆದು ಬೆಳ್ಳಿ ಪದಕ ಗಳಿಸಿದರು. ಜಾವೆಲಿನ್ ಥ್ರೋನಲ್ಲಿ 85.41 ಮೀಟರ್ (ವೈಯಕ್ತಿಕ ಅತ್ಯುತ್ತಮ) ಎಸೆದು ಕಂಚಿನ ಪದಕ ಗೆದ್ದರು. (ಶ್ರೀಲಂಕಾದ ರಮೇಶ್ ತರಂಗ 89.75 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು).

 

ಸೆಮಿಫೈನಲ್ ತಲುಪಿದ್ದ ಎಲ್ಲಾ 10 ಭಾರತೀಯ ಬಾಕ್ಸರ್ ಗಳು ತಮ್ಮ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಕನಿಷ್ಠ 10 ಬೆಳ್ಳಿ ಪದಕಗಳು ಖಚಿತವಾಗಿವೆ.

ಇನ್ನೊಂದೆಡೆ, ಸೆಮಿಫೈನಲ್ ತಲುಪಿದ್ದ ಭಾರತದ ಎಲ್ಲಾ 10 ಬಾಕ್ಸರ್‌ ಗಳು ತಮ್ಮ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದ್ದು, ಚಿನ್ನದ ಪದಕದ ನಿರೀಕ್ಷೆ ಜೀವಂತವಾಗಿದೆ. ದಿನದ ಅಂತ್ಯಕ್ಕೆ 5 ಚಿನ್ನ, 12 ಬೆಳ್ಳಿ, 6 ಕಂಚು ಸಾಧನೆಯೊಂದಿಗೆ ಭಾರತ ಒಟ್ಟು ಪದಕಗಳ ಸಂಖ್ಯೆ 23ಕ್ಕೆ ಏರಿದ್ದು, ಪ್ರಸ್ತುತ ಅಂಕಪಟ್ಟಿಯಲ್ 10ನೇ ಸ್ಥಾನದಲ್ಲಿದೆ.

]]>
ಭಾರತದ ಮೇಲೆ 10% ಸುಂಕ ಹೇರಿದ ಟ್ರಂಪ್ 60 ದೇಶಗಳ ವಿರುದ್ಧ ಹೊಸ ತೆರಿಗೆ ಅಸ್ತ್ರ! https://newskadaba.com/124115/ Fri, 24 Jul 2026 06:37:59 +0000 https://newskadaba.com/?p=124115 (ನ್ಯೂಸ್ ಕಡಬ) newskadaba.com ಜು. 24. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ಸಮರದ ನೀತಿಯನ್ನು ಮುಂದುವರಿಸಿದ್ದು, ಭಾರತ, ಚೀನಾ ಹಾಗೂ ಬ್ರಿಟನ್ ಸೇರಿದಂತೆ 60 ದೇಶಗಳ ಆಮದು ಸರಕುಗಳ ಮೇಲೆ ಹೊಸದಾಗಿ ಸುಂಕ ವಿಧಿಸಿದ್ದಾರೆ.

ಬಲವಂತದ ಕಾರ್ಮಿಕ ಪದ್ಧತಿಯನ್ನು (Forced Labor) ತಡೆಯಲು ಸೂಕ್ತ ಕಾನೂನು ಜಾರಿಗೆ ತಂದಿಲ್ಲ ಎಂದು ಆರೋಪಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ದೇಶಗಳಿಂದ ಬರುವ ಸರಕುಗಳ ಮೇಲೆ ಶೇ. 10 ರಿಂದ ಶೇ. 12.5 ರಷ್ಟು ತೆರಿಗೆ ವಿಧಿಸಲಾಗಿದೆ. ಬಲವಂತದ ಶ್ರಮ ನಿಷೇಧಿಸುವ ಸೂಕ್ತ ಕಾನೂನು ಇಲ್ಲದ ಚೀನಾ, ಜಪಾನ್ ಮುಂತಾದ ದೇಶಗಳಿಗೆ ಶೇ. 12.5 ತೆರಿಗೆ ಹೇರಲಾಗಿದೆ. ಇಂತಹ ನಿಯಮ ಹೊಂದಿರುವ ಅಥವಾ ಜಾರಿಗೆ ಒಪ್ಪಿರುವ ಭಾರತ, ಶ್ರೀಲಂಕಾ ಮತ್ತು ಯುರೋಪಿಯನ್ ಯೂನಿಯನ್ ದೇಶಗಳಿಗೆ ಶೇ. 10 ತೆರಿಗೆ ಅನ್ವಯವಾಗಲಿದೆ. (ಇದರಿಂದ ಭಾರತದ ಮೇಲಿನ ಒಟ್ಟಾರೆ ಸುಂಕ ಶೇ. 10 ರಷ್ಟೇ ಇರಲಿದೆ).

ಯುಎಸ್–ಮೆಕ್ಸಿಕೋ–ಕೆನಡಾ ಒಪ್ಪಂದದ ವ್ಯಾಪ್ತಿಯ ಉತ್ಪನ್ನಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲ ಆಮದುಗಳಿಗೆ ಈ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಈ ಹೊಸ ಸುಂಕ ನೀತಿಯು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

]]>
ಕೋಬ್ರಾ ವರ್ಸಸ್ ಕ್ಯಾಟ್: ಅಪ್ರತಿಮ ವೇಗದ ಮುಂದೆ ಸೋತ ಕಾಳಿಂಗ ಸರ್ಪ! https://newskadaba.com/124047/ Wed, 22 Jul 2026 12:23:31 +0000 https://newskadaba.com/?p=124047 (ನ್ಯೂಸ್ ಕಡಬ) newskadaba.com ಜು. 23. ಸಾಮಾಜಿಕ ಜಾಲತಾಣವಾದ X (ಟ್ವಿಟರ್) ನ @gharkekalesh ಖಾತೆಯಲ್ಲಿ ಬೆಕ್ಕು ಹಾಗೂ ವಿಷಕಾರಿ ಕಿಂಗ್ ಕೋಬ್ರಾ ನಡುವಿನ ರೋಚಕ ಮುಖಾಮುಖಿಯ ವಿಡಿಯೋವೊಂದು ತೀವ್ರ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಬಯಲು ಪ್ರದೇಶದಲ್ಲಿ ಎದುರಾದ ಮಾರಣಾಂತಿಕ ಕಿಂಗ್ ಕೋಬ್ರಾಗೆ ಬೆಕ್ಕು ಕಿಂಚಿತ್ತೂ ಹೆದರದೆ ಅತ್ಯಂತ ಧೈರ್ಯದಿಂದ ಮುಖಾಮುಖಿಯಾಯಿತು. ಹಾವು ಇದ್ದಕ್ಕಿದ್ದಂತೆ ದಾಳಿ ಮಾಡಿದಾಗ, ಬೆಕ್ಕು ತನ್ನ ಅಸಾಧಾರಣ ರಿಯಾಕ್ಷನ್ ಟೈಮ್‌ (ಪ್ರತಿಕ್ರಿಯಿಸುವ ವೇಗ) ಬಳಸಿ ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗದಲ್ಲಿ ಹಿಂಜರಿದು ದಾಳಿಯಿಂದ ಸುಲಭವಾಗಿ ತಪ್ಪಿಸಿಕೊಂಡಿತು. ಬೆಕ್ಕಿನ ತೀಕ್ಷ್ಣ ಚುರುಕುತನಕ್ಕೆ ಹಾವು ದಂಗಾಯಿತು. ನಂತರ ಬೆಕ್ಕು ತನ್ನ ಪಂಜದಿಂದ ಜಾಗ ಖಾಲಿ ಮಾಡುವಂತೆ ಹಾವಿಗೆ ಎಚ್ಚರಿಕೆ ನೀಡುವ ಮೂಲಕ ಈ ಹೋರಾಟ ಮುಕ್ತಾಯಗೊಂಡಿತು.

ಬೆಕ್ಕಿನ ಚುರುಕುತನ ಮತ್ತು ಸಾಹಸಕ್ಕೆ ಮನಸೋತ ನೆಟ್ಟಿಗರು, “ಕಿಂಗ್ ಕೋಬ್ರಾ ಅಪಾಯಕಾರಿ ಹೌದಾದರೂ ಬೆಕ್ಕಿಗಿಂತ ಚುರುಕಲ್ಲ” ಹಾಗೂ “ಬೆಕ್ಕುಗಳನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು” ಎಂದು ಕಾಮೆಂಟ್ ಮಾಡಿದ್ದಾರೆ.

]]>
ಜಪಾನ್ ಓಪನ್ ಚಾಂಪಿಯನ್- ಟೋಕಿಯೋದಲ್ಲಿ ಸಿಂಧು ಹೊಸ ಇತಿಹಾಸ! https://newskadaba.com/123938/ Mon, 20 Jul 2026 10:38:56 +0000 https://newskadaba.com/?p=123938 (ನ್ಯೂಸ್ ಕಡಬ) newskadaba.com ಜು. 20. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜಪಾನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಫೈನಲ್‌ ನಲ್ಲಿ ಆತಿಥೇಯ ಜಪಾನ್‌ ನ ವಿಶ್ವ ನಂ.3 ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-17, 21-17 ನೇರ ಗೇಮ್‌ ಗಳಲ್ಲಿ ಮಣಿಸಿದ ಸಿಂಧು, ಜಪಾನ್ ಓಪನ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಅಪೂರ್ವ ಸಾಧನೆ ಮಾಡಿದ್ದಾರೆ.

 

ಟೋಕಿಯೊ ಮೆಟ್ರೋಪಾಲಿಟನ್ ಜಿಮ್ನಾಷಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಿಂಧು, ತಮ್ಮ ಅನುಭವ ಮತ್ತು ರಕ್ಷಣಾತ್ಮಕ ಕೌಶಲ್ಯದ ನೆರವಿನಿಂದ ಯಮಗುಚಿಗೆ ಯಾವುದೇ ಅವಕಾಶ ನೀಡಲಿಲ್ಲ. ಎರಡೂ ಗೇಮ್‌ಗಳಲ್ಲಿ ಸಮತೋಲನದ ಆಟವಾಡಿದ ಸಿಂಧು, ಅಂತಿಮವಾಗಿ ನೇರ ಸೆಟ್‌ ಗಳಲ್ಲಿ ಜಯ ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಈ ಗೆಲುವಿನೊಂದಿಗೆ ಸಿಂಧು ಅವರ 19 ತಿಂಗಳ ಪ್ರಶಸ್ತಿ ಬರ ಅಂತ್ಯಗೊಂಡಿದೆ. ಡಿಸೆಂಬರ್ 2024ರಲ್ಲಿ ನಡೆದ ಸೈಯದ್ ಮೋದಿ ಇಂಡಿಯಾ ಇಂಟರ್‌ನ್ಯಾಷನಲ್ ಬಳಿಕ ಅವರು ಗೆದ್ದ ಮೊದಲ ಬಿಡಬ್ಲ್ಯೂಎಫ್ (BWF) ಪ್ರಶಸ್ತಿ ಇದಾಗಿದೆ. ಇದು ಸಿಂಧು ಅವರ ವೃತ್ತಿಜೀವನದ ಚೊಚ್ಚಲ BWF ವರ್ಲ್ಡ್ ಟೂರ್ ಸೂಪರ್ 750 ಪ್ರಶಸ್ತಿ. 2019ರ ವಿಶ್ವ ಚಾಂಪಿಯನ್‌ಶಿಪ್ ಗೆಲುವಿನ ಬಳಿಕ ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಇದೂ ಒಂದಾಗಿದೆ. ಜಪಾನ್ ಓಪನ್‌ನಲ್ಲಿ ದಾಖಲಿಸಿದ ಈ ಅದ್ಭುತ ಪ್ರದರ್ಶನದಿಂದಾಗಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಮತ್ತೆ ವಿಶ್ವ ಬ್ಯಾಡ್ಮಿಂಟನ್ ‍ರ್ಯಾಂಕಿಂಗ್ ನ ಟಾಪ್-8 ಆಟಗಾರ್ತಿಯರ ಪಟ್ಟಿಗೆ ಮರಳುವ ಸಾಧ್ಯತೆ ಹೆಚ್ಚಿದೆ.

]]>
ಅರ್ಜೆಂಟೀನಾಗೆ ಶಾಕ್: ವಿಶ್ವಕಪ್ ಎತ್ತಿಹಿಡಿದ ಸ್ಪೇನ್! https://newskadaba.com/123935/ Mon, 20 Jul 2026 10:26:27 +0000 https://newskadaba.com/?p=123935 (ನ್ಯೂಸ್ ಕಡಬ) newskadaba.com ಜು. 20. ರೋಚಕದಿಂದ ಕೂಡಿದ್ದ ಫಿಫಾ ವಿಶ್ವಕಪ್ 2026ರ ಫೈನಲ್ ಮಹಾಸಮರದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ತಂಡ ಹೊಸ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾನುವಾರ ನಡೆದ ಈ ಹೈ–ವೋಲ್ಟೇಜ್ ಪಂದ್ಯದ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗದಿದ್ದಾಗ ಪಂದ್ಯವು ಹೆಚ್ಚುವರಿ ಸಮಯಕ್ಕೆ ಜಾರಿತು. ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಸ್ಪೇನ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿತು.

ದ್ವಿತೀಯಾರ್ಧದ ಇಂಜುರಿ ಟೈಮ್‌ ನಲ್ಲಿ ಸ್ಪೇನ್‌ ನ ಪಾವು ಕುಬಾರ್ಸಿ ವಿರುದ್ಧ ಅಪಾಯಕಾರಿ ಫೌಲ್ ಮಾಡಿದ ಎಂಜೊ ಫೆರ್ನಾಂಡಿಸ್ ಎರಡನೇ ಹಳದಿ ಕಾರ್ಡ್ ಪಡೆದು ಹೊರನಡೆದರು. ಇದರಿಂದ ಅರ್ಜೆಂಟೀನಾ ಕೊನೆ ಹಂತದಲ್ಲಿ 10 ಆಟಗಾರರೊಂದಿಗೆ ಆಡಬೇಕಾಯಿತು.

ಸ್ಪೇನ್ ಪಂದ್ಯದುದ್ದಕ್ಕೂ 15 ಬಾರಿ ಗೋಲಿಗೆ ಯತ್ನಿಸಿತು. ಅರ್ಜೆಂಟೀನಾದ ಗೋಲ್ ಕೀಪರ್ ಮಾರ್ಟಿನೆಜ್ ಬರೋಬ್ಬರಿ 10 ಗೋಲುಗಳ ಯತ್ನವನ್ನು (ವಿಶೇಷವಾಗಿ ಲ್ಯಾಮೈನ್ ಯಮಾಲ್ ಅವರ ಫ್ರೀ–ಕಿಕ್) ತಡೆದು, ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ತಡೆದ ಗೋಲ್ ಕೀಪರ್ ಎಂಬ ವಿಶ್ವದಾಖಲೆ ಬರೆದರು.

ಈ ಗೆಲುವಿನೊಂದಿಗೆ ಸ್ಪೇನ್, ಪುರುಷರ ಮತ್ತು ಮಹಿಳೆಯರ ಫಿಫಾ ವಿಶ್ವಕಪ್ ಎರಡೂ ಟ್ರೋಫಿಗಳನ್ನು ಏಕಕಾಲದಲ್ಲಿ ಹೊಂದಿರುವ ಜಗತ್ತಿನ ಮೊದಲ ದೇಶ ಎಂಬ ಐತಿಹಾಸಿಕ ಸಾಧನೆಗೆ ಪಾತ್ರವಾಯಿತು.

]]>
14 ವರ್ಷಗಳ ಬಳಿಕ ಒಂದೇ ಕುಟುಂಬದ ಮೇಲೆ ಮತ್ತೊಮ್ಮೆ ಆನೆ ದಾಳಿ!! https://newskadaba.com/123666/ Wed, 15 Jul 2026 05:53:52 +0000 https://newskadaba.com/?p=123666 (ನ್ಯೂಸ್ ಕಡಬ) newskadaba.com ಜು. 15. ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ಗಾದೆಯ ನಡುವೆ, ಆನೆಯೊಂದು ತನ್ನ ಹಳೆಯ ಹಗೆಯನ್ನು ಮರೆಯದೆ ಬರೋಬ್ಬರಿ 14 ವರ್ಷಗಳ ಬಳಿಕ ಕುಟುಂಬವೊಂದನ್ನು ಹುಡುಕಿಕೊಂಡು ಬಂದು ದಾಳಿ ನಡೆಸಿರುವ ದಿಗಿಲು ಹುಟ್ಟಿಸುವ ಘಟನೆ ನೇಪಾಳದಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ವರನ್ನು ಈ ಕಾಡಾನೆ ಬಲಿ ಪಡೆದಿದೆ.

ಘಟನೆಯ ಹಿನ್ನೆಲೆ: ನೇಪಾಳದ ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಡಿ ಪಟ್ಟಣದಲ್ಲಿ ಶನಿಚರ ಬೋಟೆ ಎಂಬುವವರ ಕುಟುಂಬ ವಾಸವಾಗಿತ್ತು. ಡಿಸೆಂಬರ್ 2012 ರಲ್ಲಿ ‘ಧುರ್ಬೆ’ ಹೆಸರಿನ ಕಾಡಾನೆಯು ಶನಿಚರ ಬೋಟೆ ಅವರ ತಂದೆ-ತಾಯಿಯನ್ನು ತುಳಿದು ಸಾಯಿಸಿತ್ತು.

ಆನೆಯ ಭೀತಿಯಿಂದಾಗಿ ಶನಿಚರ ಬೋಟೆ ತಮ್ಮ ಕುಟುಂಬದ ರಕ್ಷಣೆಗಾಗಿ ನದಿಯೊಂದನ್ನು ದಾಟಿ, ಅಲ್ಲಿಂದ 14 ಕಿ.ಮೀ ದೂರದ ಜಗತ್ಪುರ್ ಪ್ರದೇಶಕ್ಕೆ ವಲಸೆ ಹೋಗಿ ನೆಲೆಸಿದ್ದರು. ನದಿ ದಾಟಿ ದೂರ ಹೋದರೂ ಬಿಡದ ಆನೆ, ಇಷ್ಟು ವರ್ಷಗಳ ನಂತರ ಇವರ ಹೊಸ ವಾಸಸ್ಥಳವನ್ನು ಹುಡುಕಿಕೊಂಡು ಬಂದು ದಾಳಿ ಮಾಡಿದೆ. ಈ ಭೀಕರ ದಾಳಿಯಲ್ಲಿ ಶನಿಚರ ಬೋಟೆ ಅವರ ಸೊಸೆ ಹಾಗೂ ಪುಟ್ಟ ಮಗು ಮೃತಪಟ್ಟಿದ್ದಾರೆ.

ದೊಡ್ಡ ನದಿ ದಾಟಿ ಬಂದರೆ ಸುರಕ್ಷಿತವಾಗಿರಬಹುದು ಅಂದುಕೊಂಡಿದ್ದ ನಮಗೆ ಆನೆ ಮತ್ತೆ ಹುಡುಕಿ ಬಂದು ಸೊಸೆ ಮತ್ತು ಮಗುವನ್ನು ಕೊಂದಿರುವುದು ತೀವ್ರ ಆಘಾತ ತಂದಿದೆ. ಈಗ ನಾವು ರಕ್ಷಣೆಗಾಗಿ ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತಿಲ್ಲ ಎಂದು ಶನಿಚರ ಬೋಟೆ ಅಳಲು ತೋಡಿಕೊಂಡಿದ್ದಾರೆ.

]]>