(ನ್ಯೂಸ್ ಕಡಬ) newskadaba.com, ಅ . 20 . ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಕ್ಟೋಬರ್ 4ರಂದು ನಡೆಸಿದ್ದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳ ಆಧಾರದ ಮೇಲೆ ತಾತ್ಕಾಲಿಕ ಫಲಿತಾಂಶವನ್ನು ಸೋಮವಾರ (ಅ.19) ಅಧಿಕೃತವಾಗಿ ಪ್ರಕಟಿಸಿದೆ.
ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಪ್ರಕಟಿತ ತಾತ್ಕಾಲಿಕ ಫಲಿತಾಂಶದ ಕುರಿತಾದ ಯಾವುದೇ ಆಕ್ಷೇಪಣೆಗಳನ್ನು ಅಕ್ಟೋಬರ್ 22ರ ಬೆಳಿಗ್ಗೆ 10:00 ಗಂಟೆಯೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪೂರಕ ದಾಖಲೆಗಳಿಲ್ಲದ ಹಾಗೂ ಕೀ ಉತ್ತರಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
]]>
(ನ್ಯೂಸ್ ಕಡಬ) newskadaba.com, ಅ . 20 . ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಸುಧಾರಿಸಲು ಮತ್ತು ಆಂಬುಲೆನ್ಸ್ ಕೊರತೆ ನೀಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.ಮೊದಲ ಹಂತದಲ್ಲಿ ‘ರೋಡ್ ಸೇಫ್ಟಿ’ ಯೋಜನೆಯಡಿ 100 ಹೊಸ ಆಂಬುಲೆನ್ಸ್‌ಗಳನ್ನು ಖರೀದಿಸಲು ಸಿದ್ಧತೆ ನಡೆಸಲಾಗಿದೆ.
ಮೊದಲ ಹಂತದ ಬಳಿಕ ಹಂತಹಂತವಾಗಿ ಇನ್ನೂ 450 ಹೊಸ ಆಂಬುಲೆನ್ಸ್‌ಗಳನ್ನು ಖರೀದಿಸಲು ಸರ್ಕಾರ ಚಿಂತನೆ ನಡೆಸಿದೆ.ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸಲು ಈ ಹೊಸ ವಾಹನಗಳು ಬಹಳಷ್ಟು ನೆರವಾಗಲಿವೆ.
]]>
(ನ್ಯೂಸ್ ಕಡಬ) newskadaba.com, ಅ. 15 . ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದ ಸವಾರ ಮೃತ ಪಟ್ಟ ಘಟನೆ ಸೋಮವಾರ ಸಂಜೆ ಮಂಜೇಶ್ವರದ ವರ್ಕಾಡಿ ಬಳಿ ನಡೆದಿದೆ. ಕೊಡ್ಲಮೊಗರು ನಿವಾಸಿ ಮುಹಮ್ಮದ್ ಟಿ . ಮೃತಪಟ್ಟವರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮುಹಮ್ಮದ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
]]>
(ನ್ಯೂಸ್ ಕಡಬ) newskadaba.com, ಅ. 15 . ಮಂಗಳೂರು ಮತ್ತು ಉಡುಪಿಯಿಂದ ವಿವಿಧ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ಕೆಎಸ್‌ಆರ್‌ಟಿಸಿ ಆಯೋಜಿಸಿದ್ದ ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿದೆ.
ಮಂಗಳೂರಿನಿಂದ ನವದುರ್ಗಾ ದರ್ಶನ ಸೇರಿದಂತೆ ವಿವಿಧ ದೇವಾಲಯಗಳ ಪ್ರವಾಸ ಹಾಗೂ ಉಡುಪಿಯಿಂದ ಎರಡು ವಿಶೇಷ ಧಾರ್ಮಿಕ ಪ್ರವಾಸ ಮಾರ್ಗಗಳನ್ನು ಒದಗಿಸಲಾಗಿದೆ.ಪ್ರಯಾಣ ದರ ಹಿರಿಯರಿಗೆ ₹500, 6ರಿಂದ 12 ವರ್ಷದ ಮಕ್ಕಳಿಗೆ ₹400.
ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.
]]>
(ನ್ಯೂಸ್ ಕಡಬ) newskadaba.com, ಅ. 15 . ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ಗುಹೆಯಲ್ಲಿದ್ದ ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಈ ಅಡಗುತಾಣದ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆಯ 60ನೇ ರಾಷ್ಟ್ರೀಯ ರೈಫಲ್ಸ್ ತುಕಡಿಯು, ಅರಣ್ಯ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸಿದೆ. ಈ ವೇಳೆ ಕೋತ್ರಾಂಕಾ ತಹಸಿಲ್‌ನ ಪಂಚ್ ಗಬ್ಬಾರ್ ಪ್ರದೇಶದ ‘ಚೋರ್ ಹಿಲ್’ ಬಳಿ ಅಡಗುತಾಣ ಪತ್ತೆಯಾಗಿದೆ. ಗುಹೆಯಲ್ಲಿದ್ದ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ ಗ್ರೆನೇಡ್‌ಗಳು, ಒಂದು ಎಕೆ-47 ಮ್ಯಾಗಜೀನ್ ಮತ್ತು ಎಕೆ-47 ರೈಫಲ್‌ಗೆ ಬಳಸುವ 18 ಸುತ್ತು ಗುಂಡುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಈ ಶಸ್ತ್ರಾಸ್ತ್ರಗಳನ್ನು ಸಮಯೋಚಿತವಾಗಿ ವಶಪಡಿಸಿಕೊಂಡಿರುವುದರಿಂದ, ಈ ಪ್ರದೇಶದಲ್ಲಿ ಉಗ್ರರು ನಡೆಸಲು ಉದ್ದೇಶಿಸಿದ್ದ ವಿಧ್ವಂಸಕ ಕೃತ್ಯಗಳನ್ನು ತಡೆದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಉಗ್ರರು ಆಗಾಗ ನೈಸರ್ಗಿಕ ಗುಹೆಗಳನ್ನು ಅಡಗುತಾಣಗಳಾಗಿ ಬಳಸಿಕೊಳ್ಳುತ್ತಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾದ ಹಿನ್ನೆಲೆ ಪ್ರದೇಶದಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
]]>
(ನ್ಯೂಸ್ ಕಡಬ) newskadaba.com, ಅ. 15 . ಮೆಲ್ಕಾರ್- ಮುಡಿಪು ಮಾರ್ಗದ ಬೋಳಿಯರ್ ಪೆಟ್ರೋಲ್ ಪಂಪ್ ಬಳಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.ಮೃತ ಸವಾರನನ್ನು ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೊಹಮ್ಮದ್ ಅರ್ಫಾನ್, ಹಿಂಬದಿ ಸವಾರ ಜುನೈದ್ ಎಂದು ಗುರುತಿಸಲಾಗಿದೆ.
ವೇಗವಾಗಿ ಬಂದ ಪಿಕಪ್ ವಾಹನವು ಬೈಕ್‌ಗೆ ಡಿಕ್ಕಿ ಹೊಡೆದು, ಬೈಕು ಹತ್ತಿರದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬವು ಉರುಳಿ ಬಿದ್ದು, ಅದು ಕೆಳಗೆ ಬಿತ್ತು. ಇಡೀ ಘಟನೆ ಸ್ಥಳಿಯ ಪೆಟ್ರೋಲ್ ಪಂಪ್ ಸಿಸಿಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ರಾಣೆಯ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಯುವಕರ ಶವವನ್ನು ದೇರಳಕಟ್ಟಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
]]>
(ನ್ಯೂಸ್ ಕಡಬ) newskadaba.com, ಅ. 20 .ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಪಿಲಿಕುಳದಲ್ಲಿರುವ ವಿವಿಧ ಪ್ರವಾಸೋದ್ಯಮ ಆಕರ್ಷಣೆಗಳನ್ನು ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಚಯಿಸುವ ಹಾಗೂ ಪರಿಸರ, ಪ್ರಕೃತಿ ಮತ್ತು ಜಲಚರ ಸಂಪನ್ಮೂಲ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪಿಲಿಕುಳದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಅಕ್ಟೋಬರ್ 25 ರಂದು ಬೆಳಿಗ್ಗೆ 9.30 ರಿಂದ ಪಿಲಿಕುಳದ ಲೇಕ್ ಗಾರ್ಡನ್‍ನ ಕೆರೆಯಲ್ಲಿ ಇರುವ ಮೀನುಗಳನ್ನು ಹಿಡಿಯುವ “ಮತ್ಸ್ಯ ಮೇಳ”, ಮೀನು ಮರಿಗಳನ್ನು ಕೆರೆಗೆ ಬಿಡುವ ಕಾರ್ಯಕ್ರಮ ಹಾಗೂ “ಮತ್ಸ್ಯ ಆಹಾರ ಮೇಳ”ವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಮತ್ಸ್ಯ ಮೇಳದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‍ನ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ವಿಶೇಷ ಮೀನಿನ ಖಾದ್ಯಗಳ ಆಹಾರ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಮೇಳದಲ್ಲಿ ಆಹಾರ ಮಳಿಗೆಗಳನ್ನು ತೆರೆಯಲು ಮಂಗಳೂರಿನ ಹೋಟೆಲ್‍ಗಳ ಆಸಕ್ತ ಉದ್ಯಮದಾರರು ತಮ್ಮ ಮಳಿಗೆಗಳನ್ನು ನೋಂದಾಯಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ ಆಸಕ್ತರು ಅಕ್ಟೋಬರ್ 22 ರೊಳಗೆ ದೂರವಾಣಿ ಸಂಖ್ಯೆ 0824-2263565 ಅನ್ನು ಸಂಪರ್ಕಿಸುವಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
]]>
(ನ್ಯೂಸ್ ಕಡಬ) newskadaba.com, ಅ.19. : ತಲ್ವಾರ್ ಹಾಗೂ ಬಿಯರ್ ಬಾಟಲಿ ಹಿಡಿದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಉಪ್ಪಿನಂಗಡಿಯ ಕಾರ್ತಿಕ್ ಬಾರ್ ಹೊರಭಾಗದಲ್ಲಿ ಅಕ್ಟೋಬರ್ 18ರ ರಾತ್ರಿ ಸಂಭವಿಸಿದೆ.ಈ ಘಟನೆಗೆ ಸಂಬಂಧಿಸಿದಂತೆ ಇಳಂತಿಲ ವಾಸಿ ಮಂಜುನಾಥ್ ಹಾಗೂ ಕರವಲು ವಾಸಿ ವಿಶ್ವನಾಥ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಕರವಲು ನಿವಾಸಿ ಮುನ್ನಾ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮದ್ಯದ ಅಮಲಿನಲ್ಲಿದ್ದ ಗುಂಪು ಬಾರ್ ಹೊರಗಿನ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು. ಗಲಾಟೆಯ ವೇಳೆ ಮಂಜುನಾಥ್ ತಲ್ವಾರ್ ಬೀಸುತ್ತಿದ್ದರೆ, ಮುನ್ನಾ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದನು.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿ ಮಂಜುನಾಥ್‌ನನ್ನು ಬಂಧಿಸಿ ಆತನ ಬಳಿಯಿದ್ದ ತಲ್ವಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಪೊಲೀಸರನ್ನು ಕಂಡ ಕೂಡಲೇ ಮುನ್ನಾ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 135/2026, ಕಲಂ: 194, 296, 351(3) BNS-2023 & ಕಲಂ: 25(1 B), (b) Arms Act 1959 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳ ವಿಚಾರಣೆ ವೇಳೆ ಕುಡಿದ ಮತ್ತಿನಲ್ಲಿ ಮುನ್ನ ಎಂಬಾತನು ಮಂಜುನಾಥ್ ಎಂಬಾತನ ಮನೆಯವರಿಗೆ ಅವ್ಯಾಚವಾಗಿ ಬೈದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದು ಗಲಾಟೆಯಾಗಿರುವುದಾಗಿ ತಿಳಿದುಬಂದಿದೆ. ವಿಚಾರಣೆ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
]]>
(ನ್ಯೂಸ್ ಕಡಬ) newskadaba.com, ಅ.19. : 137 ಬಗೆಯ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಪರಿಷ್ಕೃತ ಬೆಲೆ ನ.9 ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಒಳಪಡದ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮೇಲಿನ ವ್ಯಾಪಾರ ಲಾಭಾಂಶದ ಮಿತಿಯನ್ನು ಶೇ. 30ಕ್ಕೆ ನಿಗದಿಪಡಿಸಿತ್ತು. ಹೀಗಾಗಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ 70% ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಇಮ್ಯುನೋಥೆರಪಿ ಸೇರಿದಂತೆ ಪೆಂಬ್ರೊಲಿಜುಮಾಬ್, ದುರ್ವಾಲುಮಾಬ್ ಮತ್ತು ಓಸಿಮರ್ಟಿನಿಬ್ ಔಷಧಿಗಳು ಅಗ್ಗವಾಗುವ ನಿರೀಕ್ಷೆಯಿದೆ. ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಬೆಲೆ ಇಳಿಕೆಯಾಗಲಿದೆ. ಔಷಧ ತಯಾರಕರು ಪರಿಷ್ಕೃತ ಬೆಲೆ ಪಟ್ಟಿಯನ್ನು ಪ್ರಕಟಿಸಬೇಕಿದೆ. ಅಲ್ಲದೇ ಪರಿಷ್ಕೃತ ಬೆಲೆಗಳನ್ನು ಔಷಧ ಅಂಗಡಿಗಳಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಔಷಧದ ಅಂಗಡಿಗಳು ಮತ್ತು ಆಸ್ಪತ್ರೆಗಳು ನವೆಂಬರ್ 9ರಿಂದ ಕಡಿತಗೊಂಡ ಬೆಲೆಯಲ್ಲೇ ಔಷಧ ಮಾರಾಟ ಮಾಡಬೇಕಿದೆ.
ಸರ್ಕಾರದ ಈ ನಿರ್ಧಾರದಿಂದ ದುಬಾರಿ ಕ್ಯಾನ್ಸರ್ ಚಿಕಿತ್ಸೆಯಿಂದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಪರಿಹಾರ ಸಿಗಲಿದೆ. ಸರ್ಕಾರದ ಈ ನಿರ್ಧಾರ ಜಾರಿಗೆ ಬಂದರೆ, ದೇಶದ ಲಕ್ಷಾಂತರ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಒಟ್ಟಾರೆಯಾಗಿ ವಾರ್ಷಿಕ ಸುಮಾರು 2,500 ಕೋಟಿ ರೂ.ಗಳಷ್ಟು ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
]]>
(ನ್ಯೂಸ್ ಕಡಬ) newskadaba.com, ಅ.19. : ಒಡಿಶಾದಲ್ಲಿ ವಾರದ ಹಿಂದೆ ಜನಿಸಿದ್ದ ಅಪರೂಪದ ಸಯಾಮಿ ಅವಳಿ ಗಂಡು ಶಿಶುಗಳು ನಿಧನಹೊಂದಿವೆ.ಈ ಅವಳಿಗಳಿಗೆ ಎರಡು ಪ್ರತ್ಯೇಕ ತಲೆಗಳು ಮತ್ತು ಬೆನ್ನುಹುರಿಗಳಿದ್ದವು; ಆದರೆ ಒಂದೇ ಹೃದಯ, ಯಕೃತ್ತು ಹಾಗೂ ದೇಹವನ್ನು ಹೊಂದಿದ್ದು, ಕೇವಲ ಒಂದು ಜೋಡಿ ಕೈ-ಕಾಲುಗಳಿದ್ದವು.ಕಂಧಮಾಲ್ ಜಿಲ್ಲೆಯ ತುಮುಡಿಬಂಧ ವ್ಯಾಪ್ತಿಯ ದಿನಗೂಲಿ ಕಾರ್ಮಿಕ ದಂಪತಿಗೆ ಅಕ್ಟೋಬರ್ 11 ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ 2.25 ಕೆಜಿ ತೂಕದ ಈ ಶಿಶು ಜನಿಸಿತ್ತು.
ಜನನದ ಮರುದಿನವೇ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿದ್ದರಿಂದ ವೈದ್ಯರು ನಿಗದಿಪಡಿಸಿದ್ದ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಅಸಾಧ್ಯವಾಯಿತು. ಕೊನೆಗೆ ಶನಿವಾರ ಶಿಶು ಸಾವನ್ನಪ್ಪಿತು.ಮಗುವಿನ ಸಾವಿನ ಬಳಿಕ ಮೃತದೇಹ ಕೊಂಡೊಯ್ಯಲು ಕುಟುಂಬದವರು ನಿರಾಕರಿಸಿದ ಹಿನ್ನೆಲೆಯಲ್ಲಿ, ಗಂಜಾಂ ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳು ಕೌನ್ಸೆಲಿಂಗ್ ನಡೆಸಿ, ಸರ್ಕಾರಿ ಶವವಾಹನದ ಮೂಲಕ ಹುಟ್ಟೂರಿಗೆ ಕಳುಹಿಸಿಕೊಟ್ಟರು.
]]>