ರಸ್ತೆ ಅಪಘಾತ: ಶಿಕ್ಷಕಿ ಮೃತ್ಯು..!

(ನ್ಯೂಸ್ ಕಡಬ) newskadaba.com  ಮಡಿಕೇರಿ, ಸೆ. 26. ಹುಣಸೂರಿನ ಬನ್ನಿಕುಪ್ಪೆ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಶಿಕ್ಷಕಿ ಕ್ರಿಸ್ಟಲಿನೊ(50) ಮೃತಪಟ್ಟಿದ್ದಾರೆ.


ಬುಧವಾರ ತಮ್ಮ ಪುತ್ರನನ್ನು ಮೈಸೂರಿನ ಕಾಲೇಜಿಗೆ ಸೇರಿಸಿ ಪತಿಯೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಮರಳುತ್ತಿದ್ದ ಸಂದರ್ಭ ಬನ್ನಿಕುಪ್ಪೆ ಬಳಿ ಬೊಲೆರೋ ವಾಹನ ಢಿಕ್ಕಿಯಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಸ್ಟಲಿನೊರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

Also Read  ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ

error: Content is protected !!
Scroll to Top