ಬ್ಯಾಂಕ್ ಶಾಖೆಯಿಂದಲೇ 1.30 ಲಕ್ಷ ರೂ. ಹಣವಿದ್ದ ಬ್ಯಾಗ್ ಕಳವು

Theft, crime, Robbery


(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14. ರಾಷ್ಟ್ರೀಕೃತ ಬ್ಯಾಂಕೊಂದರ ಬಿ.ಸಿ. ರೋಡು ಶಾಖೆಯೊಳಗಿಂದಲೇ ನಿವೃತ್ತ ಸೈನಿಕ ಅಡ್ಯಾರ್‌ ರೈಮಂಡ್‌ ಲೋಬೋ ನಗರ ನಿವಾಸಿ ಅಂಬ್ರೋಸ್‌ ಡಿ’ಸೋಜಾ ಎಂಬವರ 1.30 ಲಕ್ಷ ರೂ. ಹಣವಿದ್ದ ಬ್ಯಾಗ್‌ ಕಳವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.








ನಿವೃತ್ತ ಸೈನಿಕರಾಗಿರುವ ಅಂಬ್ರೋಸ್ ರವರು ಸೆ. 04ರಂದು ಮನೆಯಿಂದ 50 ಸಾವಿರ ರೂ. ಹಣ ಹಿಡಿದುಕೊಂಡು ಬಂದಿದ್ದರು. ಅಲ್ಲದೇ ಬ್ಯಾಂಕ್‌ ಶಾಖೆಗೆ ತೆರಳಿ ತಮ್ಮ ಖಾತೆಯಿಂದ ಪೆನ್ಷನ್‌ ಹಣ 80 ಸಾವಿರ ರೂ. ಡ್ರಾ ಮಾಡಿದ್ದಾರೆ. ಹೀಗೆ ಒಟ್ಟು 1.30 ಲಕ್ಷ ರೂ. ಹಣವಿದ್ದ ಬ್ಯಾಗ್‌ ಅನ್ನು ಬ್ಯಾಂಕಿನ ಟೇಬಲ್‌ ಮೇಲಿಟ್ಟು ಪಾಸ್‌ಬುಕ್‌ ಎಂಟ್ರಿ ಮಾಡಿಸಿ ಹಿಂದಿರುಗಿದಾಗ ಬ್ಯಾಗ್‌ ಕಾಣೆಯಾಗಿತ್ತು. ಈ ಕುರಿತು ಶುಕ್ರವಾರ ದೂರು ನೀಡಿರುವ ಅವರು, ತಾನು ಪೆನ್ಷನ್‌ ಹಣವನ್ನು ಮೂರು- ನಾಲ್ಕು ತಿಂಗಳಿಗೊಮ್ಮೆ ಖಾತೆಯಿಂದ ಡ್ರಾ ಮಾಡುತ್ತಿದ್ದು, ಸೆ. 4ರಂದು ಸಮುದಾಯದ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣ ಡ್ರಾ ಮಾಡಲು ಬ್ಯಾಂಕಿಗೆ ತೆರಳಿದ್ದೆ. ಈ ವೇಳೆ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.






error: Content is protected !!
Scroll to Top