ಬೀದಿ ನಾಯಿಗಳ ದಾಳಿ- ಬಾಲಕ ಗಂಭೀರ



(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಫೆ. 20. ನಾಲ್ಕು ವರ್ಷದ ಬಾಲಕನ ಮೇಲೆ ಬೀದಿನಾಯಿಗಳ ಗುಂಪು ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.







ಗಾಯಗೊಂಡ ಬಾಲಕನನ್ನು ನಾಲ್ಕು ವರ್ಷದ ಉಮರ್ ಯಾಸಿನ್ ಎಂದು ಗುರುತಿಸಲಾಗಿದೆ. ಬೀದಿ ನಾಯಿಗಳು ಬಾಲಕನ ಮೂಗು, ಬಾಯಿ, ತೊಡೆಗೆ ಕಚ್ಚಿದ್ದರಿಂದ ಗಂಭೀರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ಖಂಡಿಸಿದ ಸ್ಥಳೀಯರು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ.






error: Content is protected !!
Scroll to Top