(ನ್ಯೂಸ್ ಕಡಬ) newskadaba.com ಬ್ರಿಟನ್, ಫೆ. 20. ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವುದನ್ನು ತಡೆಯುವುದಕ್ಕಾಗಿ ಬ್ರಿಟನ್ ಪ್ರಧಾನಿ ರಿಶಿ ಸುನಕ್ ಅವರು, ಶಾಲಾ ತರಗತಿ ಕೊಠಡಿಗಳಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸಲು, ಮೊಬೈಲ್ ಫೋನ್‌ಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
ಈ ಕುರಿತಾದ ವಿಡಿಯೋ ಸಂದೇಶವೊಂದನ್ನು ಯುಕೆ ಪ್ರಧಾನಿ ರಿಷಿ ಸುನಕ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವಿರಾಮದ ಸಮಯ ಸೇರಿದಂತೆ ಇಂಗ್ಲೆಂಡ್ ನಾದ್ಯಂತ ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲು ಸೋಮವಾರದಂದು ಸರ್ಕಾರವು ಹೊಸ ಮಾರ್ಗದರ್ಶನವನ್ನು ಪ್ರಕಟಿಸಿದೆ.