ಮುಖಕ್ಕೆ ಕೇಕ್ ಹಚ್ಚಿದ ಪತಿ- ಮದುವೆ ಕ್ಯಾನ್ಸಲ್ ಮಾಡಿದ ಯುವತಿ

(ನ್ಯೂಸ್ ಕಡಬ) newskadaba.com ಸೆ. 17. ಮದುವೆ ಕಾರ್ಯಕ್ರಮದಲ್ಲಿ ವರನೋರ್ವ ವಧುವಿನ ಮುಖಕ್ಕೆ ಕೇಕ್​ ಮೆತ್ತಿದ್ದಕ್ಕೆ ಕೋಪಗೊಂಡ ವಧು, ವರನನ್ನೇ ತ್ಯಜಿಸಿದ ವಿಚಿತ್ರ ಘಟನೆಯೊಂದು​ ನಡೆದಿದೆ.

ಘಟನೆಯ ಪ್ರಕಾರ, ವಧುವಿಗೆ 17 ವರ್ಷ ಪ್ರಾಯವಿದ್ದಾಗ ಆಕೆಯ ತಾಯಿಯು ಆಕೆಯ ಮುಖಕ್ಕೆ ಬರ್ತಡೇ ಕೇಕ್​ ಮೇಲೆ ಹಾಕಲು ಯತ್ನಿಸಿದ್ದರು. ಇದು ಅವರ ಮನೆಯ ಸಂಪ್ರದಾಯ ಕೂಡ ಆಗಿತ್ತು. ಆದರೆ ಆಕೆಗೆ ತನ್ನ ಕೂದಲು ಹಾಗೂ ಮೇಕಪ್ ಹಾಳು ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ತಾಯಿಯ ಬಳಿ ಆ ರೀತಿ ಮಾಡಬೇಡ ಎಂದು ಕೇಳಿಕೊಂಡಿದ್ದಳು. ಆದರೆ ತಾಯಿಯು ಮಗಳ ಮಾತನ್ನು ಕೇಳಿರಲಿಲ್ಲ.

 

ಅದೇ ರೀತಿ ಮದುವೆ ಮನೆಯಲ್ಲಿಯೂ ಮುಖಕ್ಕೆ ಕೇಕ್​ ಮೆತ್ತಬೇಡಿ. ಒಂದು ವೇಳೆ ನನ್ನಿಷ್ಟದ ವಿರುದ್ಧವಾಗಿ ಕೇಕ್​ ಮುಖಕ್ಕೆ ಮೆತ್ತಿದರೆ ನಿಮ್ಮನ್ನೇ ನಾನು ತ್ಯಜಿಸುತ್ತೇನೆ ಎಂದು ಮೊದಲೇ ಪತಿಗೆ ವಾರ್ನಿಂಗ್ ನೀಡಿದ್ದಳಂತೆ. ಆದರೆ ಪತಿ ನನ್ನ ವಿರುದ್ಧವಾಗಿ ನಡೆದುಕೊಂಡರು. ಹೀಗಾಗಿ ನಾನು ಏನು ಹೇಳಿದ್ದೆನೋ ಅದನ್ನೇ ಮಾಡಿದ್ದೇನೆ ಎಂದು ವಧು ಹೇಳಿದ್ದಾರೆ. ವಧುವಿಗೆ ಕೇಕ್​ ಮೆತ್ತುತ್ತಿದ್ದಂತೆಯೇ ವಧುವಿನ ಮನೆಯವರು ಹಾಗೂ ವರನ ಕಡೆಯವರು ಗೊಳ್​ ಅಂತಾ ನಕ್ಕಿದ್ದಾರೆ. ಕೂಡಲೇ ವಧು ಸ್ಟೇಜ್​ನಿಂದ ಕೆಳಕ್ಕೆ ಇಳಿದು ಊಬರ್​ ಕ್ಯಾಬ್ ಹತ್ತಿ ಮದುವೆ ಸ್ಥಳದಿಂದ ತೆರಳಿದ್ದಾಳೆ ಎನ್ನಲಾಗಿದೆ.

Also Read  ಕೊರೊನಾಗೆ ಶಾಸಕ ಬಲಿ

 

error: Content is protected !!
Scroll to Top