ಮಟ್ಕಾ ಆಡುತ್ತಿದ್ದ ವೇಳೆ ಪೊಲೀಸ್ ದಾಳಿ| ನಾಲ್ವರು ಅರೆಸ್ಟ್

crime, arrest, suspected

(ನ್ಯೂಸ್ ಕಡಬ) newskadaba.com ಮಂಗಳೂರು, ಜು.13. ಮಟ್ಕಾ ಆಟವಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಬರ್ಕೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ ಘಟನೆ ನಗರದ ಬರ್ಕೆ ಕಂಬಳದ ಬಳಿ ನಡೆದಿದೆ.

ಬಂಧಿತರನ್ನು ಮಣ್ಣಗುಡ್ಡದ ಪ್ರಶಾಂತ್, ಅಶೋಕನಗರದ ದಿನೇಶ್ ಕುಮಾರ್, ಉರ್ವ ಹೊಯ್ಗೆಬೈಲ್‌ನ ಅನಿಲ್ ಹಾಗೂ ಮಡಿಕೇರಿಯ ಉದಯ್ (35) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಮಟ್ಕಾ ಚೀಟಿಗಳು ಸಹಿತ 12,480 ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Scroll to Top