ಶಿಶುವಿಹಾರದಲ್ಲಿ ಚೂರಿಯಿರಿತ- 3 ಮಕ್ಕಳ ಸಹಿತ 6 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಚೀನಾ, ಜು. 10. ಶಿಶುವಿಹಾರದಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ.

ಲಿಯಾಂಜಿಯಾಂಗ್ ಕೌಂಟಿಯ ಪೊಲೀಸರ ಹೇಳಿಕೆಯಂತೆ ಇದೊಂದು ಉದ್ದೇಶಪೂರ್ವಕ ದಾಳಿಯಾಗಿದೆ. ಘಟನೆಯು ಇಂದು ಬೆಳಗ್ಗೆ ಸ್ಥಳೀಯ ಸಮಯ 07:40 ಕ್ಕೆ ಸಂಭವಿಸಿದ್ದು ಕೆಲವೇ ನಿಮಿಷಗಳಲ್ಲಿ ವೂ ಎಂಬ ಉಪನಾಮ ಹೊಂದಿರುವ 25 ವರ್ಷದ ಯುವಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Scroll to Top