ಫ್ರಾನ್ಸ್ ನ ರಾಷ್ಟ್ರೀಯ ದಿನಾಚರಣೆಯಲ್ಲಿ ಮಂಗಳೂರಿನ ದಿಶಾ ಅಮೃತ್ ಭಾಗಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 10. ಜುಲೈ 14ರಂದು ನಡೆಯಲಿರುವ ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆಯ (ಬ್ಯಾಸ್ಟಿಲ್‌ ಡೇ) ಕವಾಯತಿನಲ್ಲಿ ಭಾರತೀಯ ನೌಕಾಪಡೆ ತುಕಡಿಯ ಭಾಗವಾಗಿ ಮಂಗಳೂರು ಮೂಲದ ನೌಕಾಪಡೆಯ ಲೆಫ್ಟಿನೆಂಟ್‌ ಕಮಾಂಡರ್‌ ದಿಶಾ ಅಮೃತ್‌ ಪಾಲ್ಗೊಳ್ಳಲಿರುವರು.

ಜು. 14ರಂದು ನಡೆಯಲಿರುವ ಬಾಸ್ಟಿಲ್‌ ಪರೇಡ್‌ ನಲ್ಲಿ ಭಾಗವಹಿಸಲು ಈಗಾಗಲೇ ನೌಕಾಪಡೆಯ ನಾಲ್ವರು ಅಧಿಕಾರಿಗಳು ಹಾಗೂ 64 ನಾವಿಕರ ತಂಡ ಪ್ಯಾರಿಸ್‌ ತಲುಪಿದ್ದು, ಈ 4 ಅಧಿಕಾರಿಗಳ ಪೈಕಿ ದಿಶಾಕೂಡ ಒಬ್ಬರು. ನೌಕಾ ತುಕಡಿಯನ್ನು ಕಮಾಂಡರ್‌ ವ್ರತ್‌ ಬಘೇಲ್‌ ಮುನ್ನಡೆಸಲಿದ್ದು, ಲೆ. ಕಮಾಂಡರ್‌ ದಿಶಾ, ಲೆ. ಕಮಾಂಡರ್‌ ರಜತ್‌ ತ್ರಿಪಾಠಿ, ಲೆ. ಕಮಾಂಡರ್‌ ಜಿತಿನ್‌ ಲಲಿತಾ, ಲಲಿತಾ ಧರ್ಮರಾಜ್‌ ತುಕಡಿಯನ್ನು ಮುನ್ನಡೆಸಲಿದ್ದಾರೆ.

Also Read  ದ.ಕ. ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಡಾ.ದೀಪಕ್ ರೈ ಆಯ್ಕೆ

error: Content is protected !!
Scroll to Top