ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ       ➤ ನಟ ಸೂರಜ್ ಪಾಂಚೋಲಿ ಖುಲಾಸೆಗೊಳಿಸಿದ ಕೋರ್ಟ್..!

(ನ್ಯೂಸ್ ಕಡಬ)newskadaba.com ಮುಂಬೈ, ಏ.28. ಮಾಡೆಲ್‌, ನಟಿ ಜಿಯಾ ಖಾನ್‌ ಅವರ ಆತ್ಮಹ‌ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಜಿಯಾ ಅವರ ಗೆಳೆಯ ಹಾಗೂ ಸಿನೆಮಾ ನಟ ಸೂರಜ್ ಪಾಂಚೋಲಿಯನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.

25 ವರ್ಷದ ಜಿಯಾ ಖಾನ್ ಜೂನ್ 3, 2013 ರಂದು ಮುಂಬೈನ ಜುಹುನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

 

 

Scroll to Top