ಶಿಕ್ಷೆಗೆ ತಡೆ ಅರ್ಜಿ ತಿರಸ್ಕೃತ ➤ ರಾಹುಲ್ ಗಾಂಧಿ ಹೈಕೋರ್ಟ್‌ ಮೊರೆ



(ನ್ಯೂಸ್ ಕಡಬ)newskadaba.com ಸೂರತ್, ಏ.20. ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ಹಾಗೂ ವಯನಾಡು ಮಾಜಿ ಸಂಸದ ರಾಹುಲ್‌ ಗಾಂಧಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಸೂರತ್‌ನ ಸೆಷನ್ಸ್ ಕೋರ್ಟ್ ನಿರಾಕರಿಸಿರುವ ಹಿನ್ನೆಲೆ ಅವರು ಹೈಕೋರ್ಟ್‌ ಮೊರೆ ಹೋಗಲಿದ್ದಾರೆ ಎಂದು ವರದಿಯಾಗಿದೆ.







ಸೂರತ್‌ ಕೋರ್ಟ್‌ನಲ್ಲಿ ಜೈಲು ಶಿಕ್ಷೆಯನ್ನು ಎತ್ತಿಹಿಡಿದ ಕಾರಣ ಈ ನಿರ್ಧಾರದ ವಿರುದ್ಧ ರಾಹುಲ್ ಏ.21ರಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಕೆಳ ನ್ಯಾಯಾಲಯದ 2 ವರ್ಷ ಶಿಕ್ಷೆ ತೀರ್ಪಿಗೆ ತಡೆ ಕೋರಿ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಇಂದು ಕೋರ್ಟ್ ತಿರಸ್ಕರಿಸಿದೆ.






error: Content is protected !!
Scroll to Top