ಪುತ್ತೂರು: ಟಿಪ್ಪರ್ ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.20. ಬೆದ್ರಾಳ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಟಿಪ್ಪರ್‌ ಲಾರಿಯೊಂದು ಬೆದ್ರಾಳ ರೈಲ್ವೇ ಸೇತುವೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.


ಡಿಕ್ಕಿ ರಬಸಕ್ಕೆ ವಿದ್ಯತ್‌ ಕಂಬ ಧರೆಗೆ ಉರುಳಿ ಬಿದ್ದಿದ್ದು, ತಂತಿಗಳು ತುಂಡಾಗಿ ಬಿದ್ದಿದೆ. ಇನ್ನು ಟಿಪ್ಪರ್‌ ಚಾಲಕನ ಕೈಗೆ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್‌ ನ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ವರದಿಯಾಗಿದೆ.

Scroll to Top