ಅಕಾಲಿಕ ಮಳೆಗೆ ಮನೆ ಕುಸಿದು ಬಿದ್ದು ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ರಾಯಚೂರು, ಮಾ. 21. ಅಕಾಲಿಕ ಮಳೆಗೆ ಮನೆ ಕುಸಿದು ಬಿದ್ದ ಪರಿಣಾಮ ಬಾಲಕಿಯೋರ್ವಳು ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಕುರುವಕುಲ ಗ್ರಾಮದಲ್ಲಿ ನಡೆದಿದೆ.

 

ತಾಲೂಕಿನ ಕುರುವಕುಲ ಗ್ರಾಮದಲ್ಲಿ ಅಕಾಲಿಕ ಮಳೆ ಸುರಿದಿದ್ದು, ಭಾರೀ ಮಳೆಯ ಆರ್ಭಟಕ್ಕೆ ಶಿಥಿಲಗೊಂಡಿದ್ದ ಮನೆ ಕುಸಿದುಬಿದ್ದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಬಾಲಕಿಯ ತಾಯಿ ಹಾಗೂ ತಂಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಯಾಪಲಡಿನ್ನಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top