ಮಾ. 21ಕ್ಕೆ ಪಿಲಿಕುಳದಲ್ಲಿ ಖಗೋಳಶಾಸ್ತ್ರದ ಚಟುವಟಿಕೆಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17. ಮಾರ್ಚ್ 21 ಹಾಗೂ ಸೆಪ್ಟಂಬರ್ 23 ಹಗಲು ಹಾಗೂ ರಾತ್ರಿಗಳ ಹೆಚ್ಚು ಕಡಿಮೆ ಸಮನಾಗಿರುತ್ತದೆ. ಈ ದಿನ ಸೂರ್ಯನ ಕಿರಣಗಳು ಭೂಮಿಯ ಭ್ರಮಣದ ಅಕ್ಷಕ್ಕೆ ಲಂಬವಾಗಿ ಬೀಳುತ್ತವೆ. ಇತರ ಅಕ್ಷಾಂಶಗಳಲ್ಲಿ ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತವೆ. ಆ ದಿನದಂದು ಮಾತ್ರ ಸೂರ್ಯನ ಕಿರಣಗಳ ಓರೆಕೋನವು ಆ ಸ್ಥಳದ ಅಕ್ಷಾಂಶಕ್ಕೆ ಸಮಾನವಾಗಿರುತ್ತದೆ. ಈ ಕಾರಣ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಾ. 21 ರಂದು ಬೆಳಗ್ಗೆ 10.30 ರಿಂದ ಈ ದಿನದ ಹಗಲಿನಲ್ಲಿ ಖಗೋಳಶಾಸ್ತ್ರದ ಚಟುವಟಿಕೆಗಳನ್ನು ಮಾಡಲಾಗುವುದು. ಆಸಕ್ತರು prscmangalore@gmail.com ಅಥವಾ ಜಗನ್ನಾಥ(9481245137) ವಿಘ್ನೇಶ್ ಭಟ್ (9164571280)  ಚಟುವಟಿಕೆಯಲ್ಲಿ ಭಾಗವಹಿಸಲು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಕಡಬ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ..!

error: Content is protected !!
Scroll to Top